ಪ್ಯಾನ್ಸಿ: ಈ ಹೂವು ನೇರಳೆ, ಹಳದಿ ಮತ್ತು ನೀಲಿ ಬಣ್ಣಗಳಲ್ಲಿ ಇರುತ್ತದೆ. ತಂಪಾದ ವಾತಾವರಣದಲ್ಲಿ ಚೆನ್ನಾಗಿ ಬೆಳೆಯುತ್ತದೆ ಮತ್ತು ಚಳಿಗಾದಲ್ಲಿ ನಿರಂತರವಾಗಿ ಅರಳುತ್ತದೆ
ಮಾರಿಗೋಲ್ಡ್: ಈ ಹೂವುಗಳು ನಿಮ್ಮ ಬಾಲ್ಕನಿಯನ್ನು ಚಿನ್ನದ-ಕಿತ್ತಳೆ ಮಾರಿಗೋಲ್ಡ್ ಹೂವುಗಳಿಂದ ಆಕರ್ಷಿಸುತ್ತದೆ. ಇವುಗಳನ್ನು ಬೆಳೆಸುವುದು ಸುಲಭ ಮತ್ತು ಕೀಟಗಳು ಸಮೀಪಿಸುವುದಿಲ್ಲ.
ಸ್ನಾಪ್‌ಡ್ರಾಗನ್: ಡ್ರ್ಯಾಗನ್ ಆಕಾರದ ಈ ಹೂವು ಹಳದಿ, ಕಡುಗೆಂಪು ಮತ್ತು ಇತರೆ ಬಣ್ಣಗಳಲ್ಲಿ ಇರುತ್ತದೆ. ತಂಪಾದ ಗಾಳಿ ಮತ್ತು ಪೂರ್ಣ ಸೂರ್ಯನ ಬೆಳಕು ಅವಶ್ಯಕ.
ಕ್ಯಾಲೆಡುಲ: ಕಿತ್ತಳೆ ಮತ್ತು ಹಳದಿ ಕ್ಯಾಲೆಡುಲಗಳು ಚಳಿಗಾಲದುದ್ದಕ್ಕೂ ಅರಳುತ್ತವೆ. ಇವು ಬಾಲ್ಕನಿಗೂ ಸೂಕ್ತವಾಗಿದೆ.
ಸ್ವೀಟ್ ಅಲಿಸಮ್: ಬಿಳಿ ಅಥವಾ ನೇರಳೆ ಬಣ್ಣಗಳಲ್ಲಿ ಈ ಹೂವುಗಳು ಕಂಡುಬರುತ್ತದೆ. ಸೂರ್ಯನ ಬೆಳಕು ಅವಶ್ಯಕವಾಗಿದೆ.
ಆಸ್ಟರ್: ನಕ್ಷತ್ರಾಕಾರದ ಈ ಹೂವು ನೇರಳೆ, ಗುಲಾಬಿ ಮತ್ತು ಬಿಳಿ ಬಣ್ಣಗಳಲ್ಲಿ ಕಂಡುಬರುತ್ತದೆ. ಈ ಹೂವುಗಳು ಚಿಟ್ಟೆಗಳನ್ನು ಹೆಚ್ಚು ಆಕರ್ಷಿಸುತ್ತವೆ.
ಚಳಿಗಾಲದ ಮಲ್ಲಿಗೆ: ಹಳದಿ ಬಣ್ಣದ ಈ ಹೂವುದು ನಿಮ್ಮ ಬಾಲ್ಕನಿಗೆ ಮೆರುಗು ನೀಡುತ್ತದೆ.
ಪೊಟುನಿಯಾ: ಇದು ಗುಲಾಬಿ, ನೇರಳೆ ಮತ್ತು ಬಿಳಿ ಬಣ್ಣಗಳಲ್ಲಿ ಕಂಡುಬರುತ್ತದೆ. ಕಿಟಕಿ ಪಕ್ಕದಲ್ಲಿ ಪೆಟ್ಟಿಗೆಗಳಲ್ಲಿ ಇಡಲು ಹೆಚ್ಚು ಸೂಕ್ತವಾಗಿದೆ.