ಹರಾರೆ ಸ್ಪೋರ್ಟ್ಸ್ ಕ್ಲಬ್ನಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಟೀಂ ಇಂಡಿಯಾ 90 ರನ್ಗಳ ಭರ್ಜರಿ ಗೆಲುವು ದಾಖಲಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ, ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 219 ರನ್ಗಳ ಬೃಹತ್ ಮೊತ್ತ ಕಲೆಹಾಕಿತು. ಭಾರತದ ಪರ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಇಶಾನ್ ಕಿಶನ್ 44 ಎಸೆತಗಳಲ್ಲಿ 9 ಬೌಂಡರಿ ಹಾಗೂ 2 ಸಿಕ್ಸರ್ಗಳ ನೆರವಿನಿಂದ 81 ರನ್ ಸಿಡಿಸಿದರು. ತಿಲಕ್ ವರ್ಮಾ ಕೇವಲ 29 ಎಸೆತಗಳಲ್ಲಿ 5 ಬೌಂಡರಿ ಮತ್ತು 3 ಸಿಕ್ಸರ್ಗಳೊಂದಿಗೆ ಅಜೇಯ 60 ರನ್ ಬಾರಿಸಿ ಮಿಂಚಿದರು.
ಉಳಿದಂತೆ ವೈಭವ್ ಸೂರ್ಯವಂಶಿ 20, ಶ್ರೇಯಸ್ ಅಯ್ಯರ್ 25, ರಿಂಕು ಸಿಂಗ್ 12, ಅಭಿಷೇಕ್ ಶರ್ಮಾ 8 ಹಾಗೂ ಶಿವಂ ದುಬೆ ಅಜೇಯ 6 ರನ್ ಗಳಿಸಿದರು.
ಜಿಂಬಾಬ್ವೆ ಪರ ಬ್ಲೆಸ್ಸಿಂಗ್ ಮುಜರಬಾನಿ, ರಿಚರ್ಡ್ ನ್ಗರವಾ, ಬ್ರಾಡ್ ಇವಾನ್ಸ್, ನ್ಯೂಮನ್ ನ್ಯಾಮಹುರಿ ಹಾಗೂ ಬ್ರಿಯಾನ್ ಬೆನೆಟ್ ತಲಾ ಒಂದು ವಿಕೆಟ್ ಪಡೆದರು.
ಇದನ್ನೂ ಓದಿ: ಪಂಚ್ ಹೊಡೆಯುವ ಮುನ್ನವೇ ಲವ್ಲಿನಾ ಕಮಾಲ್: 2026ರ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಭಾರತಕ್ಕೆ ‘ಫಸ್ಟ್ ಮೆಡಲ್’
220 ರನ್ಗಳ ಕಠಿಣ ಗುರಿ ಬೆನ್ನತ್ತಿದ ಜಿಂಬಾಬ್ವೆ 17.5 ಓವರ್ಗಳಲ್ಲಿ ತನ್ನೆಲ್ಲಾ ವಿಕೆಟ್ಗಳನ್ನು ಕಳೆದುಕೊಂಡು 129 ರನ್ಗಳಿಗೆ ಆಲೌಟ್ ಆಯಿತು.
ಆತಿಥೇಯರ ಪರ ಬ್ರಿಯಾನ್ ಬೆನೆಟ್ 32 ರನ್ಗಳೊಂದಿಗೆ ಅಗ್ರ ಸ್ಕೋರರ್ ಎನಿಸಿದರು. ತಡಿವನಾಶೆ ಮರುಮಾನಿ 24, ರಯಾನ್ ಬರ್ಲ್ 20, ಬ್ರಾಡ್ ಇವಾನ್ಸ್ 19, ಡಿಯೋನ್ ಮೈಯರ್ಸ್ 12, ಬ್ಲೆಸ್ಸಿಂಗ್ ಮುಜರಬಾನಿ 7, ನ್ಯೂಮನ್ ನ್ಯಾಮಹುರಿ 3, ವೆಸ್ಲಿ ಮಧೆವೆರೆ 2, ಬೆನ್ ಕರನ್ 1 ಹಾಗೂ ರಿಚರ್ಡ್ ನ್ಗರವಾ 1 ರನ್ ಗಳಿಸಿದರು. ನಾಯಕ ಸಿಕಂದರ್ ರಝಾ ಖಾತೆ ತೆರೆಯದೇ ಔಟಾದರು.
ಭಾರತದ ಪರ ಅಭಿಷೇಕ್ ಶರ್ಮಾ 3 ವಿಕೆಟ್ ಕಬಳಿಸಿ ಬೌಲಿಂಗ್ನಲ್ಲಿ ಮಿಂಚಿದರು. ಯಶ್ ಠಾಕೂರ್ ಹಾಗೂ ಪ್ರಿನ್ಸ್ ಯಾದವ್ ತಲಾ 2 ವಿಕೆಟ್ ಪಡೆದರೆ, ರವಿ ಬಿಷ್ಣೋಯಿ, ಶಿವಂ ದುಬೆ ಮತ್ತು ತಿಲಕ್ ವರ್ಮಾ ತಲಾ ಒಂದು ವಿಕೆಟ್ ಪಡೆದು ತಂಡದ ಭರ್ಜರಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

