ದೀಪಿಕಾ ಪಡುಕೋಣೆ – ರಣ್‌ವೀರ್ ಸಿಂಗ್ ದ್ವಿತೀಯ ಪುತ್ರಿಗೆ ‘ದೇವಿ’ ಎಂದು ನಾಮಕರಣ

ಮುಂಬೈ: ಬಾಲಿವುಡ್‌ನ ಸ್ಟಾರ್ ದಂಪತಿ ದೀಪಿಕಾ ಪಡುಕೋಣೆ ಹಾಗೂ ರಣ್‌ವೀರ್ ಸಿಂಗ್ ವಿಜಯದಶಮಿ ಹಬ್ಬದ ವಿಶೇಷ ದಿನದಂದು ತಮ್ಮ ಎರಡನೇ ಮಗುವಿನ ಹೆಸರನ್ನು ಅಧಿಕೃತವಾಗಿ ಬಹಿರಂಗಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಜಂಟಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ದಂಪತಿ ತಮ್ಮ ಪುತ್ರಿಗೆ ನಾಮಕರಣ ಮಾಡಿರುವುದಾಗಿ ಸಂತಸ ಹಂಚಿಕೊಂಡಿದ್ದಾರೆ.

‘ದೇವಿ ಪಡುಕೋಣೆ ಸಿಂಗ್’ ಎಂದು ನಾಮಕರಣ:

 “ಪ್ರೀತಿ ಮತ್ತು ಸಮೃದ್ಧಿಯೊಂದಿಗೆ… ದೇವಿ ಪಡುಕೋಣೆ ಸಿಂಗ್” ಎಂದು ಬರೆದುಕೊಂಡು ದಂಪತಿ ತಮ್ಮ ಎರಡನೇ ಮಗುವಿನ ಹೆಸರನ್ನು ರಿವೀಲ್ ಮಾಡಿದ್ದಾರೆ. ಈ ಸುಂದರ ಕುಟುಂಬದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳು ಹಾರ್ಟ್ಸ್, ಎವಿಲ್ ಐಸ್ ಹಾಗೂ ಶುಭಾಶಯಗಳ ಸುರಿಮಳೆಗೈದಿದ್ದಾರೆ. ಈ ಹ್ಯಾಪಿ ಫ್ಯಾಮಿಲಿ ಫೋಟೋದಲ್ಲಿ ದೀಪಿಕಾ ಪಡುಕೋಣೆ, ರಣ್‌ವೀರ್ ಸಿಂಗ್ ಹಾಗೂ ಅವರ ಮಕ್ಕಳಾದ ದುವಾ ಮತ್ತು ದೇವಿ ‘ಹೌಸ್ ಆಫ್ ಮಸಾಬಾ’  ಬ್ರಾಂಡ್‌ನ ಸಿಲ್ಕ್ ಉಡುಪುಗಳಲ್ಲಿ ಕಂಗೊಳಿಸಿದ್ದಾರೆ. ದೀಪಿಕಾ ಪಡುಕೋಣೆ ಬ್ರ್ಯಾಂಡ್‌ನ ‘ನೂರ್ ಬನ್ ಗಯೇ’ ಕುರ್ತಾ ಸೆಟ್ ಧರಿಸಿದ್ದು, ಇದರ ಬೆಲೆ ಅಂದಾಜು 90,000 ರೂ.ಗಳಾಗಿದೆ. ಪೀಚ್ ಪ್ಯಾಚ್‌ವರ್ಕ್ ಮತ್ತು ಜರ್ಡೋಸಿ ಕರಕುಶಲ ಕಸೂತಿಯಿಂದ ಕೂಡಿರುವ ಈ ಉಡುಗೆಗೆ ಅವರು ಸ್ಟೇಟ್‌ಮೆಂಟ್ ಜುಮ್ಕಾ ಧರಿಸಿ ಮಿನುಗಿದ್ದಾರೆ.

ಇಲ್ಲಿದೆ ನೋಡಿ ಇನ್ಸ್ಟಾಗ್ರಾಮ್​​ ಪೋಸ್ಟ್​:

ರಣ್‌ವೀರ್ ಸಿಂಗ್ ಐವರಿ ಸಿಲ್ಕ್ ಕುರ್ತಾ ಧರಿಸಿ ಪತ್ನಿಗೆ ಟೋನಿಂಗ್ ನೀಡಿದರೆ, ಮೊದಲ ಮಗಳು ದುವಾ ಪೀಚ್ ಕುರ್ತಾ ಸೆಟ್‌ನಲ್ಲಿ ಮಿಂಚಿದ್ದಾರೆ. ಇನ್ನು ನವಜಾತ ಶಿಶು ದೇವಿ ಅವರನ್ನು ಸಾಫ್ಟ್ ಸ್ವ್ಯಾಡಲ್ ಹಾಗೂ ಎಂಬ್ರಾಯ್ಡರಿ ಹಾರ್ಟ್ ಟ್ಯಾಸೆಲ್‌ನಲ್ಲಿ ಮುದ್ದಾಗಿ ಸುತ್ತಲಾಗಿದೆ.

ಇದನ್ನೂ ಓದಿ; ದಳಪತಿ ವಿಜಯ್ ಕೊನೆಯ ಸಿನಿಮಾ ‘ಜನ ನಾಯಕನ್’ ರಿಲೀಸ್ ಡೇಟ್ ಫಿಕ್ಸ್: ಸೆನ್ಸಾರ್ ಮಂಡಳಿಯಿಂದ 12 ಕಟ್‌ಗಳೊಂದಿಗೆ ‘A’ ಪ್ರಮಾಣಪತ್ರ

ದೀಪಿಕಾ ಪಡುಕೋಣೆ ಹಾಗೂ ರಣ್‌ವೀರ್ ಸಿಂಗ್ ದಂಪತಿ ಕಳೆದ ಸೆಪ್ಟೆಂಬರ್ 19 ರಂದು ತಮ್ಮ ಎರಡನೇ ಮಗು ‘ದೇವಿ’ಯ ಜನನವನ್ನು ಘೋಷಿಸಿದ್ದರು.  ಹಿರಿಯ ಮಗಳು ದುವಾಳ ಹುಟ್ಟುಹಬ್ಬವಾದ ಸೆಪ್ಟೆಂಬರ್ 8 ರಂದು ದಂಪತಿ ಇಂಟರ್ನೆಟ್‌ನಲ್ಲಿ ವೈರಲ್ ಆಗಿದ್ದ ಮೆಟರ್ನಿಟಿ ಫೋಟೋಗಳನ್ನು ಹಂಚಿಕೊಂಡಿದ್ದರು. ಆ ಸಂದರ್ಭದಲ್ಲಿ ದೀಪಿಕಾ ಧರಿಸಿದ್ದ ಡೆಮೆ ಬೈ ಗ್ಯಾಬ್ರಿಲ್ಲಾ  ಕಿಯಾನಾ ಸೆಟ್ (ಬೆಲೆ ಸುಮಾರು 48,643 ರೂ.) ಕೂಡ ಸಾಕಷ್ಟು ಗಮನ ಸೆಳೆದಿತ್ತು.

ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ