ವೆಲ್ಲಿಂಗ್ಟನ್ : ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯ (T20I Series) ಮೊದಲ ಪಂದ್ಯದ ವೇಳೆ ತೊಡೆಯ ಸಣ್ಣ ಪ್ರಮಾಣದ ಗಾಯಕ್ಕೆ (Low grade right adductor strain) ತುತ್ತಾಗಿದ್ದ ಭಾರತದ ವಿಕೆಟ್‌ಕೀಪರ್-ಬ್ಯಾಟರ್ ಇಶಾನ್ ಕಿಶನ್, ಇನ್ನೂ ಸಂಪೂರ್ಣ ಪಂದ್ಯದ ಫಿಟ್‌ನೆಸ್ ಪಡೆಯದ ಕಾರಣ ಅಕ್ಟೋಬರ್ 27ರಂದು ವೆಲ್ಲಿಂಗ್ಟನ್‌ನಲ್ಲಿ ನಡೆಯಲಿರುವ 3ನೇ ಟಿ20 ಪಂದ್ಯದಿಂದ ಹೊರಬಿದ್ದಿದ್ದಾರೆ.
ಬಿಸಿಸಿಐ (BCCI) ವೈದ್ಯಕೀಯ ತಂಡವು ಇಶಾನ್ ಕಿಶನ್ ಅವರ ಚೇತರಿಕೆಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದ್ದು, ಅವರು ಪ್ರಸ್ತುತ ವೇಗವಾಗಿ ಚೇತರಿಸಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ಕ್ರೀಡೆಯೊಂದಿಗೆ ಭಾರತೀಯತೆ ಬೆಳೆಸಿಕೊಳ್ಳಿ: ಪುತ್ತೂರಿನಲ್ಲಿ ವಿಜೃಂಭಿಸಿದ ಜಿಲ್ಲಾ ಮಟ್ಟದ ಬ್ಯಾಡ್ಮಿಂಟನ್ ಪಂದ್ಯಾಟ
ಮೊದಲ ಪಂದ್ಯದಲ್ಲಿ ಅನುಭವಿಸಿದ ಸ್ನಾಯು ಸೆಳೆತದ ನೋವಿನಿಂದ ಇಶಾನ್ ಕಿಶನ್ ಅವರು ಗುಣಮುಖರಾಗುತ್ತಿದ್ದಾರೆ. ಆದರೆ, ಮೂರನೇ ಪಂದ್ಯದ ವೇಳೆಗೆ ಸಂಪೂರ್ಣ ಫಿಟ್‌ನೆಸ್ ಸಾಬೀತುಪಡಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಇಶಾನ್ ಕಿಶನ್ ಅಲಭ್ಯತೆಯ ಹಿನ್ನೆಲೆಯಲ್ಲಿ ಬದಲಿ ವಿಕೆಟ್‌ಕೀಪರ್ ಆಗಿ ಭಾರತೀಯ ತಂಡದ ಜೊತೆ ಸೇರಿಕೊಂಡಿರುವ ಕುಮಾರ್ ಕುಶಾಗ್ರ, ಮೂರನೇ ಟಿ20 ಪಂದ್ಯಕ್ಕೂ ತಂಡದಲ್ಲೇ ಮುಂದುವರಿಯಲಿದ್ದಾರೆ.
ಕ್ರಿಕೆಟ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

