ಝಾನ್ಸಿ: ಮದುವೆಯಾದ ಕೇವಲ ಮೂರೇ ಮೂರು ತಿಂಗಳಿಗೆ 27 ವರ್ಷದ ನವವಧು ಮುಸ್ಕಾನ್ ಎಂಬುವವರು ಹೋಟೆಲ್ ಒಂದರಲ್ಲಿ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಝಾನ್ಸಿಯಲ್ಲಿ ತೀವ್ರ ಸಂಚಲನ ಮೂಡಿಸಿದೆ ಘಟನೆಗೆ ಸಂಬಂಧಿಸಿದಂತೆ ಹೋಟೆಲ್ ಕೋಣೆಯ ಹೊರಭಾಗದಲ್ಲಿ ಮುಸ್ಕಾನ್ ದಿಢೀರನೆ ಕುಸಿದು ಬೀಳುವ ಶಂಕಾಸ್ಪದ ಸಿಸಿಟಿವಿ ದೃಶ್ಯಾವಳಿ (CCTV Footage) ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಇದು ಆಕಸ್ಮಿಕ ಅಪಘಾತವೇ? ಅಥವಾ ಯೋಜಿತ ಕೊಲೆಯೇ? ಎಂಬ ಅನುಮಾನಗಳನ್ನು ಹುಟ್ಟುಹಾಕಿದೆ.
ಮೃತ ಮುಸ್ಕಾನ್ ಅವರ ತಾಯಿ ಮನೆ ಕಡೆಯವರು ಆಕೆಯ ಪತಿ ನಿಲೇಶ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಗಂಡನೇ ಈ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ. ಅಲ್ಲದೆ, ನಿಲೇಶ್ ತನಗೆ ಈಗಾಗಲೇ ಮೊದಲ ಮದುವೆಯಾಗಿದ್ದ ಸತ್ಯವನ್ನು ಮುಚ್ಚಿಟ್ಟು ಮುಸ್ಕಾನ್ ಅವರನ್ನು ಎರಡನೇ ಮದುವೆಯಾಗಿದ್ದ ಎಂದು ಆರೋಪಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪತಿ ನಿಲೇಶ್ ಹಾಗೂ ಆತನ ಕುಟುಂಬದವರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಇಲ್ಲಿದೆ ನೋಡಿ ವಿಡಿಯೋ:
#Jhansi
#BreakingNews | हादसा या हत्या ? झांसी में नवविवाहिता की संदिग्ध मौत, CCTV वीडियो वायरल, जांच जारी !
झांसी में शादी के महज 3 महीने बाद 27 वर्षीय मुस्कान की संदिग्ध मौत ने कई सवाल खड़े कर दिए हैं। होटल के कमरे के बाहर अचानक गिरने का CCTV वीडियो वायरल है कई गंभीर सवाल—हादसा, साज़िश या हत्या की आशंका?
मायके पक्ष ने पति नीलेश पर हत्या और पहली शादी छिपाने के गंभीर आरोप लगाए हैं। पति समेत ससुराल पक्ष के सदस्यों से पूछताछ जारी है। CCTV फुटेज, फॉरेंसिक साक्ष्य और पोस्टमार्टम रिपोर्ट से खुलेगा मौत का राज—आखिर सच क्या है, कब होगा इंतजार खत्म ?
#Jhansi #MuskanCase #CCTVFootage #BreakingNews #UPPolice
— jafar mahmood (Asian News) (@jafar_mahmood07) October 26, 2026
ಝಾನ್ಸಿ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿ ಹೋಟೆಲ್ ಕೋಣೆ ಹಾಗೂ ಸಿಸಿಟಿವಿ ದೃಶ್ಯಾವಳಿಗಳನ್ನು ವಶಪಡಿಸಿಕೊಂಡಿದ್ದಾರೆ. ಸಾವು ಸಂಭವಿಸಿದ್ದು ಹೇಗೆ ಎಂಬುದನ್ನು ಕಂಡುಕೊಳ್ಳಲು ಫೊರೆನ್ಸಿಕ್ ತಂಡವು ಸಾಕ್ಷ್ಯಗಳನ್ನು ಸಂಗ್ರಹಿಸಿದೆ.
ಇದನ್ನೂ ಓದಿ: ಯುವತಿಯ ಮದುವೆ ವಿಚಾರದಲ್ಲಿ ಜಗಳ, ದೂರು-ಪ್ರತಿದೂರು ದಾಖಲು
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ವರದಿ ಬಂದ ನಂತರವಷ್ಟೇ ಈ ಸಸ್ಪೆನ್ಸ್ ಸಾವಿನ ಹಿಂದಿರುವ ನಿಜವಾದ ಸತ್ಯಾಂಶ ಬಯಲಾಗಬೇಕಿದೆ.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

