ದೇಶದ ಜೀವನಾಡಿ ಎನ್ನಲಾಗುವ ಭಾರತೀಯ ರೈಲ್ವೆಯಲ್ಲಿ (IRCTC) ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. 75 ವರ್ಷದ ವೃದ್ಧೆಯೊಬ್ಬರನ್ನ ರೈಲ್ವೆ ಸಿಬ್ಬಂದಿ ಸಾರ್ವಜನಿಕವಾಗಿ ಅವಮಾನಿಸಿದ ಘಟನೆ ಬೆಳಕಿಗೆ ಬಂದಿದೆ. ಅತ್ಯಂತ ದುಃಖದ ಸಂಗತಿಯೆಂದರೆ, ಇಷ್ಟೆಲ್ಲಾ ನಡೆಯುತ್ತಿದ್ದರೂ ಅಲ್ಲಿ ನೆರೆದಿದ್ದ ನೂರಾರು ಪ್ರಯಾಣಿಕರು ಧೈರ್ಯ ತೋರದೆ ಮೂಕ ಪ್ರೇಕ್ಷಕರಾಗಿ ಕುಳಿತಿದ್ದರು.
ವಯಸ್ಸಾದ ತಾಯಿಯನ್ನು ಗೌರವಿಸಬೇಕಾದ ಜಾಗದಲ್ಲಿ, ರೈಲ್ವೆ ಸಿಬ್ಬಂದಿ ಅತಿ ವಿನಯ ಮರೆತು ಸಾರ್ವಜನಿಕವಾಗಿ ಆಕೆಯನ್ನು ಅವಮಾನಿಸಿದ್ದಾರೆ. ಭಯವು ಮನುಷ್ಯನ ಧೈರ್ಯ ಮತ್ತು ಕರುಣೆಯನ್ನು ನುಂಗಿ ಹಾಕಿದಾಗ ಮಾನವೀಯತೆ ಹೇಗೆ ಸತ್ತೋಗಿದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. “ಯಾರಾದರೂ ತಡೆದಾರು” ಎಂಬ ನಿರೀಕ್ಷೆಯಲ್ಲಿ ಯಾರೊಬ್ಬರೂ ಧ್ವನಿ ಎತ್ತದ ಕಾರಣ, ಆ ವೃದ್ಧೆ ಏಕಾಂಗಿಯಾಗಿ ಅವಮಾನವನ್ನು ಸಹಿಸಿಕೊಳ್ಳಬೇಕಾಯಿತು.
ಇಲ್ಲಿದೆ ನೋಡಿ:
An 75 Year Old Woman Was
Humiliated Publicly by IRCTC
Stuff While Silent Crowds
Watched. Humanity Dies When
Fear Overpowers Courage And
Compassion Completely. pic.twitter.com/ClElp4W08e
— Riya Ghosh (@Riyaghoshm) May 13, 2026
ಇದನ್ನೂ ಓದಿ: ರಾಜ್ಯದಾನಿಯನ್ನೇ ಬೆಚ್ಚಿ ಬೀಳಿಸಿದ ಕೊಲೆ ಪ್ರಕರಣ: ನವವಿವಾಹಿತೆಯ ಶವ ಪತ್ತೆ
ಸೋಷಿಯಲ್ ಮೀಡಿಯಾದಲ್ಲಿ ಈ ವಿಷಯ ತಿಳಿಯುತ್ತಿದ್ದಂತೆಯೇ ಸಾರ್ವಜನಿಕರು ರೈಲ್ವೆ ಸಚಿವಾಲಯ ಮತ್ತು ಐಆರ್ಸಿಟಿಸಿ (IRCTC) ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮನುಷ್ಯತ್ವಕ್ಕಿಂತ ಭಯವೇ ಮಿಗಿಲಾದಾಗ ಸಮಾಜ ಎಷ್ಟು ಕ್ರೂರವಾಗುತ್ತದೆ ಎಂಬ ಚರ್ಚೆ ಈಗ ಶುರುವಾಗಿದೆ.
ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ


