ಮಹಾರಾಷ್ಟ್ರ: ದಿನಗಟ್ಟಲೆ ಡೀಸೆಲ್ ಇಲ್ಲದೆ ತತ್ತರಿಸಿದ್ದ ಲೋನಾರ್ ಜನ!; ಟ್ಯಾಂಕರ್ ಬರುತ್ತಿದ್ದಂತೆ ಪೆಟ್ರೋಲ್ ಬಂಕ್‌ಗೆ ಮುಗಿಬಿದ್ದ ವಾಹನ ಸವಾರರು

ಬುಲ್ಧಾನಾ : ಮಹಾರಾಷ್ಟ್ರದ ಬುಲ್ಧಾನಾ ಜಿಲ್ಲೆಯ ಲೋನಾರ್ ಪಟ್ಟಣದಲ್ಲಿ ಕಳೆದ ಕೆಲವು ದಿನಗಳಿಂದ ವಾಹನ ಸವಾರರು ಎದುರಿಸುತ್ತಿದ್ದ ಡೀಸೆಲ್ ಭೀಕರ ಕೊರತೆಗೆ ಕೊನೆಗೂ ತೆರೆ ಬಿದ್ದಿದೆ. ಬಂಕ್‌ಗಳಿಗೆ ಕೊನೆಗೂ ಡೀಸೆಲ್ ಪೂರೈಕೆಯಾಗುತ್ತಿದ್ದಂತೆ, ಇಂಧನ ತುಂಬಿಸಿಕೊಳ್ಳಲು ಪೆಟ್ರೋಲ್ ಬಂಕ್‌ಗಳ ಮುಂದೆ ವಾಹನಗಳ ಕಿಲೋಮೀಟರ್ ಗಟ್ಟಲೆ ಉದ್ದದ ಕ್ಯೂ ಹಾಗೂ ಬೃಹತ್ ಜನಸ್ತೋಮ ಕಂಡುಬಂದಿದೆ.

ಲೋನಾರ್ ಪ್ರದೇಶದಲ್ಲಿ ಕಳೆದ ಹಲವು ದಿನಗಳಿಂದ ಡೀಸೆಲ್ ಸಿಗದೆ ಸಾರ್ವಜನಿಕರು, ಪ್ರಮುಖವಾಗಿ ರೈತರು ಮತ್ತು ಸರಕು ಸಾಗಣೆ ವಾಹನಗಳ ಮಾಲೀಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರು. ಹೀಗಾಗಿ, ಇಂಧನ ಬರುವುದನ್ನೇ ನಿರೀಕ್ಷಿಸಿ ನೂರಾರು ವಾಹನ ಸವಾರರು ದಿನವಿಡೀ ಬಂಕ್‌ಗಳ ಬಳಿಯೇ ಕಾದು ಕುಳಿತಿದ್ದರು. ಕೊನೆಗೂ ಡೀಸೆಲ್ ಟ್ಯಾಂಕರ್ ಬಂಕ್ ಆವರಣಕ್ಕೆ ಆಗಮಿಸಿ, ಇಂಧನ ಪೂರೈಕೆ ಆರಂಭವಾಗುತ್ತಿದ್ದಂತೆ ಜನ ಏಕಾಏಕಿ ಮುಗಿಬಿದ್ದಿದ್ದಾರೆ.

ಇದನ್ನೂ ಓದಿ: Viral Video: ಕೇವಲ 5 ಗ್ರಾಹಕರಷ್ಟೇ ಈ ಕ್ಯಾಂಟಿನ್‌ಗೆ ಬರುತ್ತಾರೆ; 70 ವರ್ಷದ ಅಜ್ಜಿಯ ಕರುಣಾಜನಕ ಜೀವನ

ಇಲ್ಲಿದೆ ನೋಡಿ ವಿಡಿಯೋ

ಒಮ್ಮೆಲೇ ನೂರಾರು ವಾಹನಗಳು ಮತ್ತು ಜನರು ಒಟ್ಟಿಗೆ ನುಗ್ಗಿದ್ದರಿಂದ ಪೆಟ್ರೋಲ್ ಬಂಕ್‌ನಲ್ಲಿ ಗೊಂದಲದ ಹಾಗೂ ತೀವ್ರ ನೂಕುನುಗ್ಗಲಿನ ವಾತಾವರಣ ಸೃಷ್ಟಿಯಾಯಿತು. ಮೊದಲು ತಮಗೇ ಡೀಸೆಲ್ ಸಿಗಬೇಕು ಎಂದು ಚಾಲಕರು ಪರಸ್ಪರ ನೂಕಾಡಿಕೊಂಡ ಘಟನೆಯೂ ನಡೆದಿದೆ. ಸದ್ಯ ಈ ಜನದಟ್ಟಣೆಯನ್ನು ನಿಯಂತ್ರಿಸಲು ಬಂಕ್ ಸಿಬ್ಬಂದಿ ಹರಸಾಹಸ ಪಡಬೇಕಾಯಿತು. ಪ್ರಸ್ತುತ ಇಂಧನ ಪೂರೈಕೆ ಯಥಾಸ್ಥಿತಿಗೆ ಮರಳುತ್ತಿರುವುದರಿಂದ ಸವಾರರು ನಿಟ್ಟುಸಿರು ಬಿಟ್ಟಿದ್ದಾರೆ.

ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು