ರಾಜ್ಯದ ಜನತೆಗೆ ಕರಂಟ್ ಶಾಕ್: ಪ್ರತಿ ಯೂನಿಟ್ ವಿದ್ಯುತ್ ದರ 56 ಪೈಸೆ ಏರಿಕೆ; ಮೇ ತಿಂಗಳಿನಿಂದ ಹೊಸ ದರ ಜಾರಿ!

ಬೆಂಗಳೂರು: ಬೇಸಿಗೆಯ ಬಿಸಿಲಿನ ನಡುವೆಯೇ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (KERC) ಗ್ರಾಹಕರಿಗೆ ದರ ಏರಿಕೆಯ ಬಿಸಿ ಮುಟ್ಟಿಸಿದೆ. ರಾಜ್ಯದ ಎಲ್ಲಾ ವಿದ್ಯುತ್ ಸರಬರಾಜು ಕಂಪನಿಗಳ (Escoms) ವ್ಯಾಪ್ತಿಯಲ್ಲಿ ಪ್ರತಿ ಯೂನಿಟ್ ವಿದ್ಯುತ್ ದರವನ್ನು 56 ಪೈಸೆ ಹೆಚ್ಚಳ ಮಾಡಲು ಅನುಮತಿ ನೀಡಲಾಗಿದೆ.

ಪ್ರತಿ ಯೂನಿಟ್‌ಗೆ ಸರಾಸರಿ 56 ಪೈಸೆ ಹೆಚ್ಚಳ ಮಾಡಲಾಗಿದೆ. ಇದು ಎಲ್ಲಾ ವರ್ಗದ ಗ್ರಾಹಕರಿಗೂ (ಗೃಹಬಳಕೆ, ವಾಣಿಜ್ಯ ಮತ್ತು ಕೈಗಾರಿಕೆ) ಅನ್ವಯವಾಗಲಿದೆ. ಪರಿಷ್ಕೃತ ದರವು ಮೇ 1, 2026 ರಿಂದ ಜಾರಿಗೆ ಬರಲಿದೆ. ಅಂದರೆ ಜೂನ್ ತಿಂಗಳಲ್ಲಿ ಬರುವ ಬಿಲ್‌ನಲ್ಲಿ ಈ ಹೆಚ್ಚುವರಿ ದರ ಸೇರ್ಪಡೆಯಾಗಿರುತ್ತದೆ.

Advertisement

ಇಂಧನ ಹೊಂದಾಣಿಕೆ ವೆಚ್ಚ (FPPCA) ಮತ್ತು ವಿದ್ಯುತ್ ಖರೀದಿ ವೆಚ್ಚದಲ್ಲಿನ ಏರಿಕೆಯನ್ನು ಸರಿದೂಗಿಸಲು ಎಸ್ಕಾಂಗಳು ಸಲ್ಲಿಸಿದ್ದ ಪ್ರಸ್ತಾವನೆಯನ್ನು ಕೆಇಆರ್‌ಸಿ ಪುರಸ್ಕರಿಸಿದೆ.

200 ಯೂನಿಟ್‌ಗಿಂತ ಕಡಿಮೆ ಬಳಸುವ ‘ಗೃಹ ಜ್ಯೋತಿ’ ಯೋಜನೆಯ ಫಲಾನುಭವಿಗಳಿಗೆ ಸರ್ಕಾರವೇ ಸಬ್ಸಿಡಿ ನೀಡುತ್ತಿರುವುದರಿಂದ ನೇರ ಹೊರೆ ಬೀಳದಿರಬಹುದು. ಆದರೆ, ಮಿತಿ ಮೀರಿದ ಬಳಕೆಗೆ ಹೆಚ್ಚಿನ ಹಣ ತೆರಬೇಕಾಗುತ್ತದೆ.

Advertisement

ಇದನ್ನೂ ಓದಿ: ಶಾಸಕ ವಿನಯ್ ಕುಲಕರ್ಣಿಗೆ ಬಿಗ್ ಶಾಕ್: ಯೋಗೀಶ್ ಗೌಡ ಕೊಲೆ ಕೇಸ್‌ನಲ್ಲಿ ಜೀವಾವಧಿ ಶಿಕ್ಷೆ! ಶಾಸಕ ಸ್ಥಾನವೂ ಪತರುಗುಟ್ಟಿ ಹೋಗುವ ಭೀತಿ

ಎಸ್ಕಾಂಗಳ ವ್ಯಾಪ್ತಿ:

ಬೆಸ್ಕಾಂ (ಬೆಂಗಳೂರು), ಮೆಸ್ಕಾಂ (ಮಂಗಳೂರು), ಚೆಸ್ಕಾಂ (ಮೈಸೂರು), ಹೆಸ್ಕಾಂ (ಹುಬ್ಬಳ್ಳಿ) ಮತ್ತು ಜೆಸ್ಕಾಂ (ಗುಲ್ಬರ್ಗ) ವ್ಯಾಪ್ತಿಯ ಎಲ್ಲಾ ಗ್ರಾಹಕರಿಗೂ ಈ ಬೆಲೆ ಏರಿಕೆ ಅನ್ವಯವಾಗಲಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು