ಮಡಿಕೇರಿ, ಏಪ್ರಿಲ್ 04: ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಚೆಂಬೆಬೆಳ್ಳೂರು ಗ್ರಾಮದಲ್ಲಿರುವ ವಿಧಾನ ಪರಿಷತ್ ಸದಸ್ಯ (MLC) ಸುಜಾ ಕುಶಾಲಪ್ಪ ಅವರ ಎಸ್ಟೇಟ್‌ನಲ್ಲಿ ಸುಮಾರು 7 ಲಕ್ಷ ರೂಪಾಯಿ ಮೌಲ್ಯದ ಕಾಫಿ ಕಳ್ಳತನವಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ವಿಶೇಷವೆಂದರೆ, ಶಾಸಕರು ಕಳ್ಳನನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.
ಸುಜಾ ಕುಶಾಲಪ್ಪ ಅವರ ಎಸ್ಟೇಟ್‌ನಲ್ಲಿ ನೌಕರನಾಗಿದ್ದ ಪೊನ್ನಪ್ಪ ಎಂಬಾತನೇ ಈ ಕಳ್ಳತನ ಎಸಗಿರುವ ಆರೋಪಿ. ಎಸ್ಟೇಟ್‌ನಿಂದ ದೀರ್ಘಕಾಲದವರೆಗೆ ಕಾಫಿ ನಾಪತ್ತೆಯಾಗುತ್ತಿರುವುದನ್ನು ಗಮನಿಸಿದ ಶಾಸಕರು, ತಾವೇ ಖುದ್ದಾಗಿ ನಿಗಾ ಇರಿಸಿದ್ದರು. ಈ ವೇಳೆ ಪೊನ್ನಪ್ಪ ಕಾಫಿ ಕದಿಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ.

ಇದನ್ನೂ ಓದಿ: ಭಾಲ್ಕಿ: ಕಣ್ಣೆದುರೇ ತಾಯಿಗೆ ಡಿಕ್ಕಿ ಹೊಡೆದ ಪೊಲೀಸ್ ಪೇದೆಯ ಕಾರು; ಪುಟ್ಟ ಮಗನ ರೋದನೆ ಕಂಡು ಕರುಳು ಚುರುಕ್!
ವಿಚಾರಣೆ ವೇಳೆ ಆರೋಪಿ ಪೊನ್ನಪ್ಪ ತಾನು ಸುಮಾರು 7 ಲಕ್ಷ ರೂಪಾಯಿ ಮೌಲ್ಯದ ಕಾಫಿಯನ್ನು ಕದ್ದಿರುವುದಾಗಿ ಒಪ್ಪಿಕೊಂಡಿದ್ದಾನೆ. ತಿಂಗಳ ಹಿಂದೆ ನಡೆದ ಈ ಘಟನೆ ಇದೀಗ ಬಹಿರಂಗವಾಗಿದೆ. ಆದರೆ, ಆರೋಪಿಯು ತನ್ನ ತಪ್ಪನ್ನು ಒಪ್ಪಿಕೊಂಡು ಕ್ಷಮೆಯಾಚಿಸಿದ ಹಿನ್ನೆಲೆಯಲ್ಲಿ, ಸುಜಾ ಕುಶಾಲಪ್ಪ ಅವರು ಮಾನವೀಯತೆಯ ದೃಷ್ಟಿಯಿಂದ ಆತನ ವಿರುದ್ಧ ಯಾವುದೇ ಪೊಲೀಸ್ ದೂರು ದಾಖಲಿಸದೆ ಕ್ಷಮಿಸಿ ಬಿಟ್ಟಿದ್ದಾರೆ. ಶಾಸಕರ ಈ ನಡೆಗೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


