ಭಾಲ್ಕಿ: ರಕ್ಷಣೆ ನೀಡಬೇಕಾದ ಪೊಲೀಸರೇ ಅತಿ ವೇಗಕ್ಕೆ ಅಮಾಯಕ ಜೀವವೊಂದು ಸಾವು-ಬದುಕಿನ ನಡುವೆ ಹೋರಾಡುವಂತಾದ ಘಟನೆ ಬೀದರ್ ಜಿಲ್ಲೆಯ ಭಾಲ್ಕಿಯಲ್ಲಿ ನಡೆದಿದೆ. ರಸ್ತೆ ಗುಡಿಸುತ್ತಿದ್ದ 45 ವರ್ಷದ ಜ್ಞಾನಬಾಯಿ ಎಂಬುವವರಿಗೆ ಪೊಲೀಸ್ ಕಾನ್ಸ್ಟೇಬಲ್ ಓಡಿಸುತ್ತಿದ್ದ ಕಾರು ಭೀಕರವಾಗಿ ಡಿಕ್ಕಿ ಹೊಡೆದಿದೆ.
ಜ್ಞಾನಬಾಯಿ ಅವರು ರಸ್ತೆಯ ಬದಿಯಲ್ಲಿ ಕಸ ಗುಡಿಸುತ್ತಿದ್ದಾಗ ಅತಿ ವೇಗವಾಗಿ ಬಂದ ಕಾರೊಂದು ಅವರಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಅವರ ಪುಟ್ಟ ಮಗ ಅಲ್ಲೇ ಪಕ್ಕದಲ್ಲಿದ್ದನು. ತನ್ನ ಕಣ್ಣ ಮುಂದೆಯೇ ತಾಯಿ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡು ಆ ಬಾಲಕ ಅಸಹಾಯಕತೆಯಿಂದ ರೋದಿಸುತ್ತಿರುವ ಸಿಸಿಟಿವಿ (CCTV) ದೃಶ್ಯಗಳು ಎಂಥವರನ್ನೂ ಕಣ್ಣೀರು ಹಾಕಿಸುವಂತಿವೆ.

ಇದನ್ನೂ ಓದಿ: ಹುಬ್ಬಳ್ಳಿ: ಲವ್ ಜಿಹಾದ್ ಆರೋಪ; ಹಿಂದೂ ಯುವತಿಗೆ ದೈಹಿಕ ಕಿರುಕುಳ ನೀಡಿದ ಜಿಮ್ ಟ್ರೈನರ್ ಸಮೀರ್
ಇಲ್ಲಿದೆ ನೋಡಿ ವಿಡಿಯೋ:

🚨Heartbreaking: Police Constable Runs Over Woman in Front of Her Son – Child’s Agony Breaks Hearts
Bhalki (Bidar), Karnataka: 45-year-old Gyanabai was sweeping the road when a speeding car brutally mowed her down right in front of her young son.
The CCTV footage of the little… pic.twitter.com/njVU80cosV
— Ramesh Tiwari (@rameshofficial0) April 3, 2026
ಡಿಕ್ಕಿ ಹೊಡೆದ ಕಾರನ್ನು ಮೆಹಕರ್ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಉಮಾಕಾಂತ್ ಎಂಬುವವರು ಚಲಾಯಿಸುತ್ತಿದ್ದರು ಎಂದು ತಿಳಿದುಬಂದಿದೆ. ಅತಿ ವೇಗವೇ ಈ ಅಪಘಾತಕ್ಕೆ ಕಾರಣ ಎನ್ನಲಾಗಿದ್ದು, ಜ್ಞಾನಬಾಯಿ ಅವರ ಸ್ಥಿತಿ ಸದ್ಯ ಅತ್ಯಂತ ಗಂಭೀರವಾಗಿದೆ. ಕರ್ತವ್ಯ ಮರೆತು ಅಜಾಗರೂಕತೆಯಿಂದ ವಾಹನ ಚಲಾಯಿಸಿದ ಪೊಲೀಸ್ ಪೇದೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


