ಮದುವೆ ದಿಬ್ಬಣ ಹೊರಡುವಾಗಲೇ ತಂದೆಯ ಕಳ್ಳಾಟ ಬಯಲು ಮಾಡಿದ ಮಗಳು!

ಮೊರಾದಾಬಾದ್: ಮೊದಲ ಮದುವೆಯನ್ನು ಮುಚ್ಚಿಟ್ಟು, ಇಬ್ಬರು ಮಕ್ಕಳ ತಂದೆಯಾಗಿದ್ದರೂ ಮತ್ತೊಂದು ಮದುವೆಯಾಗಲು ಹೋದ ಮಹಾಶಯನೊಬ್ಬನಿಗೆ ಆತನ ಸ್ವಂತ ಮಗಳೇ ಮದುವೆ ಮಂಟಪದಲ್ಲೇ ಬಿಗ್ ಶಾಕ್ ನೀಡಿರುವ ವಿಚಿತ್ರ ಘಟನೆಯೊಂದು ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ಮಗಳ ಸಮಯಪ್ರಜ್ಞೆಯಿಂದಾಗಿ ವರನ ಕಳ್ಳಾಟ ಬಯಲಾಗಿದ್ದು, ಆತನಿಗೆ ಭಾರೀ ದಂಡದ ಶಿಕ್ಷೆಯಾಗಿದೆ.

ಆರೋಪಿ ವ್ಯಕ್ತಿಗೆ ಈಗಾಗಲೇ ಮದುವೆಯಾಗಿದ್ದು, ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಆದರೂ ತನ್ನ ಮೊದಲ ಮದುವೆಯ ವಿಚಾರವನ್ನು ಸಂಪೂರ್ಣವಾಗಿ ಮುಚ್ಚಿಟ್ಟ ಈತ, ಮತ್ತೊಬ್ಬ ಯುವತಿಯನ್ನು ಮದುವೆಯಾಗಲು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದನು. ಮದುವೆಯ ಮೆರವಣಿಗೆ (ಬಾರಾತ್) ಹೊರಡಲು ಕೆಲವೇ ಕ್ಷಣಗಳು ಬಾಕಿ ಇರುವಾಗ, ಆತನ ಎರಡನೇ ಮಗಳು ಅತ್ಯಂತ ಧೈರ್ಯದಿಂದ ವಧುವಿನ ಕುಟುಂಬಸ್ಥರ ಮೊಬೈಲ್ ಸಂಖ್ಯೆಗೆ ಕರೆ ಮಾಡಿದ್ದಾಳೆ. ಅಷ್ಟೇ ಅಲ್ಲದೆ, ತನ್ನ ತಂದೆಯ ಮೊದಲ ಮದುವೆಯ ಫೋಟೋಗಳು ಮತ್ತು ದಾಖಲೆಗಳನ್ನು ವಧುವಿನ ಮನೆಗೆ ವಾಟ್ಸಾಪ್ ಮೂಲಕ ಕಳುಹಿಸಿಕೊಟ್ಟಿದ್ದಾಳೆ.

ಇದನ್ನೂ ಓದಿ:Viral Video: ಬಣ್ಣ ಎರಚಿದ ಪುಟ್ಟ ಬಾಲಕನ ಮೇಲೆ ಬಿಸಿಬಿಸಿ ನೀರು ಸುರಿದ ಅಜ್ಜಿ! ಬಾಲಕನ ನರಳಾಟ

ವರನಿಗೆ ಈಗಾಗಲೇ ಮದುವೆಯಾಗಿ ಮಕ್ಕಳಿದ್ದಾರೆ ಎಂಬ ಆಘಾತಕಾರಿ ಸತ್ಯ ತಿಳಿಯುತ್ತಿದ್ದಂತೆ ವಧುವಿನ ಕಡೆಯವರು ಮದುವೆಯನ್ನು ತಕ್ಷಣವೇ ರದ್ದುಗೊಳಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ವರನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವಧುವಿನ ಕುಟುಂಬಕ್ಕೆ ವಂಚಿಸಲು ಯತ್ನಿಸಿದ ಹಾಗೂ ಮದುವೆಯ ಸಿದ್ಧತೆಗಾಗಿ ಅವರು ಮಾಡಿದ್ದ ನಷ್ಟದ ಹಿನ್ನೆಲೆಯಲ್ಲಿ ಪಂಚಾಯತ್ ಹಾಗೂ ಪೊಲೀಸರ ಮಧ್ಯಸ್ಥಿಕೆಯಲ್ಲಿ ಆರೋಪಿ ವರನಿಗೆ ಬರೋಬ್ಬರಿ 5.20 ಲಕ್ಷ ರೂಪಾಯಿಗಳ ದಂಡ ವಿಧಿಸಲಾಗಿದೆ. ಮಗಳ ಈ ಸಾಹಸ ಮತ್ತು ಧೈರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು