ಬೆಳ್ತಂಗಡಿಯಲ್ಲಿ ಕಳ್ಳರ ಕೈ ಚಳಕ: ಸಿಸಿಟಿವಿ ಧ್ವಂಸ, ಹಣದ ಜೊತೆ ಡಿವಿಆರ್ ಕದ್ದು ಪರಾರಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ನಿನ್ನೆ ರಾತ್ರಿ ಸರಣಿ ಕಳ್ಳತನ (Serial Theft) ನಡೆಸುವ ಮೂಲಕ ಖದೀಮರು ಸಾರ್ವಜನಿಕರು ಹಾಗೂ ಪೊಲೀಸರಿಗೆ ದೊಡ್ಡ ಸವಾಲು ಹಾಕಿದ್ದಾರೆ. ತಾಲೂಕಿನ ವಕೀಲರ ಕಚೇರಿ, ಹೋಟೆಲ್, ರಿಯಲ್ ಎಸ್ಟೇಟ್ ಕಚೇರಿ ಹಾಗೂ ಹಲವು ವಾಣಿಜ್ಯ ಅಂಗಡಿಗಳನ್ನು ಗುರಿಯಾಗಿಸಿಕೊಂಡು ಕಳ್ಳರು ಕೈಚಳಕ ತೋರಿಸಿದ್ದಾರೆ.

‘ಸಮೃದ್ಧಿ ಎಂಟರ್‌ಪ್ರೈಸಸ್’ ಅಂಗಡಿಗೆ ನುಗ್ಗಿದ ಕಳ್ಳರು ಅಲ್ಲಿ ಇಟ್ಟಿದ್ದ ಬರೋಬ್ಬರಿ ₹1.5 ಲಕ್ಷ ನಗದನ್ನು ದೋಚಿದ್ದಾರೆ. ಅಷ್ಟೇ ಅಲ್ಲದೆ, ತಮ್ಮ ಕಳ್ಳತನದ ದೃಶ್ಯಗಳು ಪೊಲೀಸರಿಗೆ ಸಿಗಬಾರದು ಎಂಬ ಮುನ್ನೆಚ್ಚರಿಕೆಯಿಂದ ಅಂಗಡಿಯ ಸಿಸಿಟಿವಿ ಕ್ಯಾಮೆರಾಗಳನ್ನು ಧ್ವಂಸಗೊಳಿಸಿದ್ದಾರೆ. ಬಳಿಕ ಅದರೊಳಗಿದ್ದ ಡಿವಿಆರ್ ಅಥವಾ ಮೆಮೊರಿ ಕಾರ್ಡ್‌ಗಳನ್ನು (Memory Cards) ತಮ್ಮೊಂದಿಗೆ ತೆಗೆದುಕೊಂಡು ಪರಾರಿಯಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಬೆಳ್ತಂಗಡಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಳ್ಳರ ಪತ್ತೆಗಾಗಿ ಜಾಲ ಬೀಸಿದ್ದಾರೆ.

ರಾಜ್ಯದ ಕ್ರೈಮ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು