T20: 19 ಎಸೆತಗಳಲ್ಲಿ ಮಿಂಚಿದ ವೈಭವ್ ಸೂರ್ಯವಂಶಿ: ಜಿಂಬಾಬ್ವೆ ವಿರುದ್ಧ ಭಾರತಕ್ಕೆ ಭರ್ಜರಿ ಜಯ

ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆದ ಜಿಂಬಾಬ್ವೆ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ 7 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ ತಂಡವು ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 125 ರನ್ ಗಳಿಸಿತು. ತಂಡದ ಪರ ವೆಸ್ಲಿ ಮಧೆವೆರೆ 39 ರನ್ (ರನ್ ಔಟ್) ಗಳಿಸಿ ಅಗ್ರ ಸ್ಕೋರರ್ ಎನಿಸಿದರೆ, ತಡಿವನಾಶೆ ಮರುಮಾನಿ 27, ರಯಾನ್ ಬರ್ಲ್ 26, ಬೆನ್ ಕರನ್ 10, ಡಿಯೋನ್ ಮೈಯರ್ಸ್ 6, ಸಿಕಂದರ್ ರಝಾ 4 ಹಾಗೂ ನ್ಯೂಮನ್ ನ್ಯಾಮಹುರಿ 1 ರನ್ ಗಳಿಸಿದರು. ಬ್ರಿಯಾನ್ ಬೆನೆಟ್ ಮತ್ತು ಬ್ರಾಡ್ ಇವಾನ್ಸ್ ಖಾತೆ ತೆರೆಯುವಲ್ಲಿ ವಿಫಲರಾದರು.

ಇದನ್ನೂ ಓದಿ: ಕಾಮನ್‌ವೆಲ್ತ್ ಗೇಮ್ಸ್ 2026 ಇಂದಿನಿಂದ ಆರಂಭ: 126 ಭಾರತೀಯ ಅಥ್ಲೀಟ್‌ಗಳ ಸಂಪೂರ್ಣ ದಿನಾವಾರು ವೇಳಾಪಟ್ಟಿ ಇಲ್ಲಿದೆ

ಭಾರತದ ಪರ ಮಯಾಂಕ್ ಯಾದವ್ ಹಾಗೂ ಪ್ರಿನ್ಸ್ ಯಾದವ್ ತಲಾ 2 ವಿಕೆಟ್ ಪಡೆದು ಮಿಂಚಿದರೆ, ಶಿವಂ ದುಬೆ ಮತ್ತು ರವಿ ಬಿಷ್ಣೋಯಿ ತಲಾ 1 ವಿಕೆಟ್ ಕಬಳಿಸಿದರು.

126 ರನ್‌ಗಳ ಗುರಿ ಬೆನ್ನತ್ತಿದ ಭಾರತಕ್ಕೆ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ ಸ್ಫೋಟಕ ಆರಂಭ ಒದಗಿಸಿದರು. ಕೇವಲ 19 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 4 ಬೌಂಡರಿಗಳ ನೆರವಿನಿಂದ 50 ರನ್ ಸಿಡಿಸಿ ಅರ್ಧಶತಕ ಪೂರೈಸಿದರು. ಇಶಾನ್ ಕಿಶನ್ 35 ರನ್, ನಾಯಕ ಶ್ರೇಯಸ್ ಅಯ್ಯರ್ ಅಜೇಯ 28 ರನ್ ಹಾಗೂ ತಿಲಕ್ ವರ್ಮಾ ಅಜೇಯ 6 ರನ್ ಗಳಿಸಿ ತಂಡವನ್ನು ಸುಲಭವಾಗಿ ಗೆಲುವಿನ ದಡ ಸೇರಿಸಿದರು. ಅಭಿಷೇಕ್ ಶರ್ಮಾ 1 ರನ್ ಗಳಿಸಿದರು.

ಭಾರತವು ಕೇವಲ 13.2 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 126 ರನ್ ಗಳಿಸಿ 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು. ಜಿಂಬಾಬ್ವೆ ಪರ ಬ್ಲೆಸ್ಸಿಂಗ್ ಮುಜರಬಾನಿ 2 ವಿಕೆಟ್ ಪಡೆದರೆ, ರಿಚರ್ಡ್ ನ್ಗರವ 1 ವಿಕೆಟ್ ಕಬಳಿಸಿದರು.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *