ಟಾಕ್ಸಿಕ್’ ಸಿನಿಮಾದ ‘ಮನಮೋಹಕ’ ಹಾಡಿಗೆ ಜೀವ ತುಂಬಿದ ಕರಾವಳಿ ಕಂಪು

ಬೆಂಗಳೂರು: ಚಿತ್ರರಂಗದಲ್ಲಿ ಒಂದು ಹಾಡು ಹಿಟ್ ಆಗಬೇಕಾದರೆ ಸಂಗೀತ ನಿರ್ದೇಶಕರು ಮತ್ತು ಗಾಯಕರಷ್ಟೇ ಶ್ರಮ ಗೀತಸಾಹಿತಿಗೂ ಇರುತ್ತದೆ. ಅದರಲ್ಲೂ ಮೆಲೋಡಿ ಹಾಗೂ ರೊಮ್ಯಾಂಟಿಕ್ ಹಾಡುಗಳಲ್ಲಿ ಬಳಸುವ ಪ್ರತಿಯೊಂದು ಶಬ್ದವೂ ಕೇಳುಗನ ಮನಸ್ಸಿನಾಳಕ್ಕೆ ಇಳಿಯಬೇಕು. ಅಂತಹದ್ದೇ ಶೃಂಗಾರಭರಿತ ಹಾಗೂ ಭಾವನಾತ್ಮಕ ಪದಗಳ ಮೂಲಕ ಸದಾ ಕಾವ್ಯಮಯ ಜಾದೂ ಮಾಡುವ ಯಶಸ್ವಿ ಗೀತಸಾಹಿತಿ ಪ್ರಮೋದ್ ಮರವಂತೆ. ಇದೀಗ ಅವರು ರೋಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ (Toxic) ಸಿನಿಮಾದ ‘ಮನಮೋಹಕ’ (Manamohaka) ಹಾಡಿನ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಇಂದು ಬಿಡುಗಡೆಯಾದ ‘ಮನಮೋಹಕ’ ಹಾಡು ಎಲ್ಲರ ಮನ ಗೆದ್ದಿದೆ.

‘ಟಾಕ್ಸಿಕ್’ ಸಿನಿಮಾದ ಎರಡನೇ ಪ್ರಣಯಗೀತೆಯಾದ ‘ಮನಮೋಹಕ’ ಸದ್ಯ ಐದೂ ಭಾಷೆಗಳಲ್ಲಿ ಬಿಡುಗಡೆಯಾಗಿ ಯೂಟ್ಯೂಬ್ ಹಾಗೂ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ. ಈ ಅದ್ಭುತ ಮೆಲೋಡಿ ಹಾಡಿಗೆ ಕನ್ನಡದಲ್ಲಿ ಸಾಹಿತ್ಯ ಹೆಣೆದಿರುವುದು ಸ್ಯಾಂಡಲ್‌ವುಡ್‌ನ ಯುವ ಪ್ರತಿಭಾವಂತ ಸಾಹಿತಿ ಪ್ರಮೋದ್ ಮರವಂತೆ. ತೆರೆಯ ಮೇಲೆ ಯಶ್ ಮತ್ತು ತಾರಾ ಸುತಾರಿಯಾ ಅವರ ಆಕರ್ಷಕ ಕೆಮಿಸ್ಟ್ರಿಗೆ, ಪ್ರಮೋದ್ ಅವರ ಮಾಂತ್ರಿಕ ಸಾಲುಗಳು ಮತ್ತಷ್ಟು ಶೋಭೆ ತಂದಿದ್ದು, ಎಲ್ಲೆಡೆಯಿಂದ ಪ್ರಶಂಸೆಗಳ ಮಹಾಪೂರವೇ ಹರಿದುಬರುತ್ತಿದೆ.

ಇದನ್ನೂ ಓದಿ:  ವಿನೀತ್ ಕುಮಾರ್ ಹೀರೋ ಆಗಿ ನಟಿಸಿರುವ ‘ಮ್ಯಾರೇಜ್ ಪಾರ್ಟಿ’ ಫಸ್ಟ್ ಲುಕ್ ಪೋಸ್ಟರ್ ಔಟ್

ಇಲ್ಲಿದೆ ನೋಡಿ ವಿಡಿಯೋ ಲಿಂಕ್:

ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ‘ಮರವಂತೆ’ ಎಂಬ ಪುಟ್ಟ ಕರಾವಳಿ ಗ್ರಾಮದಿಂದ ಬಂದ ಪ್ರಮೋದ್, ಇಂದು ಕನ್ನಡ ಚಿತ್ರರಂಗದಲ್ಲಿ ‘ಮೋಸ್ಟ್ ವಾಂಟೆಡ್ ಲಿರಿಸಿಸ್ಟ್’ ಆಗಿ ಬೆಳೆದು ನಿಂತಿದ್ದಾರೆ. ಆರಂಭಿಕ ದಿನಗಳಲ್ಲಿ ಚಿತ್ರರಂಗದಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸಿ ನೆಲೆ ಕಂಡುಕೊಂಡ ಇವರು, ತಮ್ಮ ವಿಭಿನ್ನ ಪದಬಳಕೆ ಹಾಗೂ ಭಾವನಾತ್ಮಕ ಶೈಲಿಯಿಂದಲೇ ಚಿತ್ರಪ್ರೇಮಿಗಳ ಹೃದಯ ಗೆದ್ದಿದ್ದಾರೆ. ತಮ್ಮ ಹುಟ್ಟೂರಿನ ಹೆಸರನ್ನು ಹೆಮ್ಮೆಯಿಂದ ಹೊತ್ತು ತಿರುಗುವ ಪ್ರಮೋದ್ ಮರವಂತೆ, ಇಂದು ಸ್ಯಾಂಡಲ್‌ವುಡ್‌ನ ಬಿಗ್ ಬಜೆಟ್ ಹಾಗೂ ಸ್ಟಾರ್ ಸಿನಿಮಾಗಳ ಸಾಹಿತ್ಯದ ಜವಾಬ್ದಾರಿ ಹೊರಬಲ್ಲ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ.

ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Leave a Reply

Your email address will not be published. Required fields are marked *