ಇಟಾನಗರ: ಮುಖಲಕ್ಷಣಗಳನ್ನು ನೋಡಿ ‘ಚೈನೀಸ್’ ಎಂದು ರೇಪಿಸಿದವರಿಗೆ ಅರುಣಾಚಲ ಪ್ರದೇಶದ ಇಟಾನಗರದ 4 ವರ್ಷದ ಬಾಲಕಿ ನೀಡಿದ ದಿಟ್ಟ ಹಾಗೂ ಮುಗ್ಧ ಉತ್ತರ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ದೇಶವಾಸಿಗಳ ಕಣ್ಣು ತೆರೆಸುವಂತೆ ಮಾಡಿದೆ.
“ಚೈನೀಸ್ ಅಂದಾಗ ಕೋಪ ಮತ್ತು ಬೇಸರವಾಗುತ್ತೆ”:
ಕಾರ್ಗಾ ಟಿಂಕಲ್ (Karga Tinkle) ಎಂಬ ನಾಲ್ಕು ವರ್ಷದ ಪುಟಾಣಿಯನ್ನು ಯಾರೋ ‘ನೀನು ಚೈನೀಸ್ ಅಲ್ಲವೇ?’ ಎಂದು ಪ್ರಶ್ನಿಸಿದಾಗ, ಆ ಮಗು ಮುಗ್ಧತೆಯಿಂದಲೇ ಖಡಕ್ ಆಗಿ ಉತ್ತರಿಸಿದ್ದಾಳೆ.
“ನಾವು ಭಾರತದಿಂದ ಬಂದವರು. ನೀವು ನಮ್ಮನ್ನು ‘ಚೈನೀಸ್’ ಎಂದು ಕರೆದಾಗ ನಮಗೆ ತುಂಬಾ ಕೋಪ ಮತ್ತು ಬೇಸರವಾಗುತ್ತದೆ. ನಮ್ಮನ್ನು ‘ಭಾರತೀಯರು’ ಎಂದು ಕರೆಯಿರಿ. ನಾವು ಭಾರತೀಯರು, ನಾವು ಇಟಾನಗರದಲ್ಲಿ ವಾಸಿಸುತ್ತಿದ್ದೇವೆ” ಎಂದು ಆ ಮಗು ವಿಡಿಯೋದಲ್ಲಿ ಹೇಳಿದ್ದಾಳೆ.
Video:
“प्लीज हमकों Chinese मत बोलो, हम लोग India हैं…
आप हमें चाइनीज बोलते हो, हमें बहुत दुःख होता है…” 💔अरुणाचल प्रदेश की इस मासूम बच्ची का दर्द पूरे देश को झकझोरने के लिए काफी है!
जब चीन हमारी सीमाओं पर आँखें दिखाता है, तब यही अरुणाचल के लोग दुश्मन देश की छोटी से छोटी… pic.twitter.com/C4Om413hqJ
— Bharat Jodo Abhiyaan (@withbharatjodo) August 20, 2026
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ, ಈಶಾನ್ಯ ಭಾರತದ (Northeast India) ಜನರ ಮೇಲೆ ನಡೆಯುವ ವರ್ಣಭೇದ ಹಾಗೂ ಜನಾಂಗೀಯ ನಿಂದನೆಯ ಕುರಿತು ಭಾರಿ ಚರ್ಚೆ ಆರಂಭವಾಗಿದೆ. ನೆಟ್ಟಿಗರೊಬ್ಬರು ಕಾಮೆಂಟ್ ಮಾಡುತ್ತಾ, “ಈ ಮುಗ್ಧ ಮಗುವಿನ ನೋವು ಇಡೀ ದೇಶವನ್ನು ಬೆಚ್ಚಿಬೀಳಿಸುವಂತಿದೆ. ಗಡಿಯಲ್ಲಿ ಚೀನಾ ಅತಿಕ್ರಮಣ ಮಾಡಲು ಬಂದಾಗ ನಮಗೆ ಮೊದಲು ಮಾಹಿತಿ ನೀಡುವುದೇ ಅರುಣಾಚಲ ಪ್ರದೇಶದ ನಮ್ಮ ಸಹೋದರ-ಸಹೋದರಿಯರು. ದೇಶಪ್ರೇಮದಲ್ಲಿ ಅವರು ಯಾರಿಗೂ ಕಮ್ಮಿಯಿಲ್ಲ” ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಮಳೆಗಾಲದಲ್ಲಿ ಕಾಡುತ್ತಿದೆಯೇ ವಸಡಿನ ರಕ್ತಸ್ರಾವ, ಬಾಯಿ ದುರ್ವಾಸನೆ?: ಕಾರಣ ನಿಮ್ಮ ಈ ಹವ್ಯಾಸಗಳೇ ಇರಬಹುದು
ಮತ್ತೊಬ್ಬ ಬಳಕೆದಾರರು, “ನಾಲ್ಕು ವರ್ಷದ ಮಗುವೊಂದು ತನ್ನದೇ ದೇಶದಲ್ಲಿ ‘ನಾನು ಭಾರತೀಯಳು’ ಎಂದು ಸಾಬೀತುಪಡಿಸುವ ಪರಿಸ್ಥಿತಿ ಬಂದಿರುವುದು ಅತ್ಯಂತ ದುಃಖಕರ. ಈಶಾನ್ಯ ಭಾರತೀಯರನ್ನು ಪರಕೀಯರಂತೆ ನೋಡುವುದನ್ನು ತಕ್ಷಣವೇ ನಿಲ್ಲಿಸಬೇಕು” ಎಂದು ಮನವಿ ಮಾಡಿದ್ದಾರೆ. ಈಶಾನ್ಯ ಭಾರತದ ವೈವಿಧ್ಯಮಯ ಸಂಸ್ಕೃತಿ ಮತ್ತು ಜನರನ್ನು ಭಾರತದ ಪ್ರಮುಖ ಭಾಗವಾಗಿ ಗೌರವಿಸಬೇಕು ಹಾಗೂ ಮುಖಲಕ್ಷಣಗಳ ಆಧಾರದ ಮೇಲೆ ಜನಾಂಗೀಯ ಕಾಮೆಂಟ್ ಮಾಡುವುದನ್ನು ನಿಲ್ಲಿಸಬೇಕು ಎಂದು ನೆಟ್ಟಿಗರು ಒತ್ತಾಯಿಸುತ್ತಿದ್ದಾರೆ.
ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ

