IPL: ಪ್ರಿಯಾಂಶ್-ಕನೋಲಿ ಆರ್ಭಟಕ್ಕೆ ಆರ್‌ಸಿಬಿ ದಾಖಲೆಗಳು ಪುಡಿಪುಡಿ

punjab kings-254 runs break rcb record ipl

ಐಪಿಎಲ್ 2026ರ 29ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ ಬ್ಯಾಟಿಂಗ್ ದಾಳಿಯಿಂದ ಹೊಸ ಇತಿಹಾಸ ನಿರ್ಮಿಸಿದೆ. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ ಭರ್ಜರಿ 254 ರನ್ ಕಲೆಹಾಕಿ, ಈ ಆವೃತ್ತಿಯ ಅತ್ಯಧಿಕ ಮೊತ್ತ ದಾಖಲಿಸಿದೆ. ಈ ಹಿಂದೆ ಸಿಎಸ್​ಕೆ ವಿರುದ್ಧ ಆರ್​ಸಿಬಿ ಬಾರಿಸಿದ್ದ 250 ರನ್​ಗಳು ಇದುವರೆಗಿನ ದಾಖಲೆಯಾಗಿತ್ತು.

ತಂಡದ ಪರ ಪ್ರಿಯಾಂಶ್ ಆರ್ಯ ಮತ್ತು ಕೂಪರ್ ಕನೋಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿ ಪಂದ್ಯವನ್ನು ಏಕಪಕ್ಷೀಯಗೊಳಿಸಿದರು. ಈ ಜೋಡಿ ಎರಡನೇ ವಿಕೆಟ್‌ಗೆ ಕೇವಲ 81 ಎಸೆತಗಳಲ್ಲಿ 181 ರನ್‌ಗಳ ಭಾರೀ ಜೊತೆಯಾಟ ಕಟ್ಟಿತು.

Advertisement

ಪ್ರಿಯಾಂಶ್ ಆರ್ಯ ಕೇವಲ 19 ಎಸೆತಗಳಲ್ಲಿ ಅರ್ಧಶತಕ ಪೂರೈಸಿ, 37 ಎಸೆತಗಳಲ್ಲಿ 93 ರನ್ ಸಿಡಿಸಿದರು. ಅವರ ಈ ಇನ್ನಿಂಗ್ಸ್‌ನಲ್ಲಿ 4 ಬೌಂಡರಿ ಮತ್ತು 9 ಸಿಕ್ಸರ್‌ಗಳು ಸೇರಿದ್ದು, ಕೇವಲ 7 ರನ್‌ಗಳಿಂದ ಶತಕ ಕೈ ತಪ್ಪಿತು. ಇನ್ನೊಂದೆಡೆ ಕೂಪರ್ ಕನೋಲಿ 46 ಎಸೆತಗಳಲ್ಲಿ 87 ರನ್ ಬಾರಿಸಿ 8 ಬೌಂಡರಿ ಮತ್ತು 7 ಸಿಕ್ಸರ್‌ಗಳನ್ನು ಸಿಡಿಸಿದರು.

ಇದನ್ನೂ ಓದಿ: ಸೋಲಿನ ನಡುವೆಯೂ ಮಿಂಚಿದ ಆರ್ಚರ್; ಐಪಿಎಲ್‌ ಇತಿಹಾಸದಲ್ಲಿ ಇತಿಹಾಸ ಸೃಷ್ಟಿ

Advertisement

ಇವರಿಬ್ಬರ ಸಿಡಿಲಾಟದ ತೀವ್ರತೆ 13ನೇ ಓವರ್‌ನಲ್ಲಿ ಸ್ಪಷ್ಟವಾಗಿದ್ದು, ಆ ಓವರ್‌ನಲ್ಲಿ ಬರೋಬ್ಬರಿ 32 ರನ್‌ಗಳು ಹರಿದುಬಂದವು. ಮಾರ್ಕ್ರಮ್ ಬೌಲಿಂಗ್‌ನಲ್ಲಿ 5 ಸಿಕ್ಸರ್‌ಗಳು ಸಿಡಿದವು. ಈ ಮೂಲಕ ಒಂದೇ ಓವರ್‌ನಲ್ಲಿ ಅತ್ಯಧಿಕ ರನ್ ದಾಖಲೆಯೂ ಪಂಜಾಬ್ ಪಾಲಾಯಿತು. ಈ ಹಿಂದೆ ಆರ್‌ಸಿಬಿ 30 ರನ್‌ಗಳ ದಾಖಲೆಯನ್ನು ಹೊಂದಿತ್ತು.

ಇದಕ್ಕೂ ಮೀರಿಸಿ, ಪಂಜಾಬ್ ತಂಡ ಈ ಪಂದ್ಯದಲ್ಲಿ ಒಟ್ಟು 21 ಸಿಕ್ಸರ್‌ಗಳನ್ನು ಬಾರಿಸಿ ಮತ್ತೊಂದು ದಾಖಲೆ ನಿರ್ಮಿಸಿತು. ಇದರಲ್ಲಿ 16 ಸಿಕ್ಸರ್‌ಗಳು ಪ್ರಿಯಾಂಶ್ ಮತ್ತು ಕನೋಲಿ ಬ್ಯಾಟ್‌ನಿಂದಲೇ ಬಂದವು. ಈ ಮೂಲಕ ಒಂದು ಇನ್ನಿಂಗ್ಸ್‌ನಲ್ಲಿ ಅತ್ಯಧಿಕ ಸಿಕ್ಸರ್ ಬಾರಿಸಿದ ತಂಡವಾಗಿ ಪಂಜಾಬ್ ಹೊಸ ಮೈಲಿಗಲ್ಲು ತಲುಪಿತು. ಈ ಹಿಂದೆ ಆ ದಾಖಲೆ ಆರ್‌ಸಿಬಿ (19 ಸಿಕ್ಸರ್) ಹೆಸರಿನಲ್ಲಿ ಇತ್ತು.

ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು