ಪಿಸಿಎ ನ್ಯೂ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 29ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 55 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಪಂಜಾಬ್ ಕಿಂಗ್ಸ್ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ ದಿಗ್ಗಜ 254 ರನ್ ಕಲೆಹಾಕಿತು. ತಂಡದ ಪರ ಪ್ರಿಯಾಂಶ್ ಆರ್ಯ ಮತ್ತು ಕೂಪರ್ ಕನೋಲಿ ಸಿಡಿಲಾಟದ ಇನ್ನಿಂಗ್ಸ್ ಆಡಿದ್ದು, ಭಾರೀ ಮೊತ್ತಕ್ಕೆ ಬಲ ನೀಡಿದರು.

ಪ್ರಿಯಾಂಶ್ ಆರ್ಯ ಕೇವಲ 37 ಎಸೆತಗಳಲ್ಲಿ 93 ರನ್ ಬಾರಿಸಿ ಮಿಂಚಿದರು. ಅವರ ಇನ್ನಿಂಗ್ಸ್‌ನಲ್ಲಿ 4 ಬೌಂಡರಿ ಹಾಗೂ 9 ಸಿಕ್ಸರ್‌ಗಳು ಸೇರಿದ್ದವು. ಮತ್ತೊಂದೆಡೆ ಕೂಪರ್ ಕನೋಲಿ 46 ಎಸೆತಗಳಲ್ಲಿ 87 ರನ್ ಗಳಿಸಿ 8 ಬೌಂಡರಿ ಮತ್ತು 7 ಸಿಕ್ಸರ್‌ಗಳನ್ನು ಸಿಡಿಸಿದರು. ಇವರಿಬ್ಬರ ಜತೆಯಾಟ ಪಂಜಾಬ್ ತಂಡವನ್ನು ದೊಡ್ಡ ಮೊತ್ತದತ್ತ ಕೊಂಡೊಯ್ದಿತು.
ಇನ್ನುಳಿದಂತೆ ಮಾರ್ಕಸ್ ಸ್ಟೊಯಿನಿಸ್ 29, ನೆಹಾಲ್ ವಧೇರಾ 13, ಶಶಾಂಕ್ ಸಿಂಗ್ 17 ರನ್ ಗಳಿಸಿದರು. ಲಕ್ನೋ ಪರ ಎಂ. ಸಿದ್ಧಾರ್ಥ್ ಮತ್ತು ಪ್ರಿನ್ಸ್ ಯಾದವ್ ತಲಾ 2 ವಿಕೆಟ್ ಪಡೆದರೆ, ಮೊಹಮ್ಮದ್ ಶಮಿ ಮತ್ತು ಮೊಹ್ಸಿನ್ ಖಾನ್ ತಲಾ ಒಂದು ವಿಕೆಟ್ ಪಡೆದರು.

ಇದನ್ನೂ ಓದಿ: IPL: ಪ್ರಿಯಾಂಶ್-ಕನೋಲಿ ಆರ್ಭಟಕ್ಕೆ ಆರ್‌ಸಿಬಿ ದಾಖಲೆಗಳು ಪುಡಿಪುಡಿ
255 ರನ್‌ಗಳ ಬೃಹತ್ ಗುರಿ ಬೆನ್ನತ್ತಿದ ಲಕ್ನೋ ಸೂಪರ್ ಜೈಂಟ್ಸ್ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 200 ರನ್ ಗಳಿಸಲಷ್ಟೇ ಶಕ್ತವಾಯಿತು. ಮಿಚೆಲ್ ಮಾರ್ಷ್ 40, ರಿಷಭ್ ಪಂತ್ 43, ಐಡೆನ್ ಮಾರ್ಕ್ರಾಮ್ 42 ಮತ್ತು ಆಯುಷ್ ಬಡೋನಿ 35 ರನ್ ಗಳಿಸಿದರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ.
ಪಂಜಾಬ್ ಪರ ಮಾರ್ಕೊ ಜಾನ್ಸೆನ್ 2 ವಿಕೆಟ್ ಪಡೆದರೆ, ಯಜುವೇಂದ್ರ ಚಾಹಲ್, ವಿಜಯ್ ಕುಮಾರ್ ವೈಶಾಕ್ ಮತ್ತು ಅರ್ಷದೀಪ್ ಸಿಂಗ್ ತಲಾ ಒಂದು ವಿಕೆಟ್ ಕಬಳಿಸಿದರು.
ಒಟ್ಟಿನಲ್ಲಿ, ಪಂಜಾಬ್ ಕಿಂಗ್ಸ್‌ನ ಸ್ಫೋಟಕ ಬ್ಯಾಟಿಂಗ್ ಹಾಗೂ ಸಮತೋಲನ ಬೌಲಿಂಗ್ ಲಕ್ನೋ ವಿರುದ್ಧ ಭರ್ಜರಿ ಜಯಕ್ಕೆ ಕಾರಣವಾಯಿತು.
ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

