ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪರಿಶಿಷ್ಟ ಜಾತಿ ಸಮುದಾಯದ ಮೂಲಭೂತ ಸೌಕರ್ಯ ಅಭಿವೃದ್ದಿಗೆ ಕರ್ನಾಟಕ ಸರಕಾರದಿಂದ 3 ಕೋಟಿ ಅನುದಾನ ಮಂಜೂರಾಗಿದೆ ಎಂದು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.
ತನ್ನ ವಿಧಾನಸಭಾ ಕ್ಷೇತ್ರದಲ್ಲಿ ಪ.ಜಾತಿ ಕಾಲನಿಗಳಲ್ಲಿ ಇನ್ನೂ ಮೂಲಭೂತ ಸೌಕರ್ಯದಿಂದ ವಂಚಿತರಾಗಿದ್ದಾರೆ, ಸಮುದಾಯದ ಅಭಿವೃದ್ದಿಗಾಗಿ ಸರಕಾರಕ್ಕೆ ಮನವಿ ಸಲ್ಲಿಸಿದ್ದು ಸರಕಾರ 3 ಕೋಟಿ ಅನುದಾನವನ್ನು ಮಂಜೂರುಗೊಳಿಸಿದೆ. ಬಂದ ಅನುದಾನವನ್ನು ಆದ್ಯತೆ ಮೇಲೆ ಹಂಚುವ ಕೆಲಸವನ್ನು ಮಾಡಿದ್ದೇನೆ. ಪುತ್ತೂರು ವಿಧಾನಸಭಾ ಕ್ಷೇತ್ರದ ಪುತ್ತೂರು ಹಾಗೂ ಬಂಟ್ವಾಳ ತಾಲೂಕು ವ್ಯಾಪ್ತಿಗೆ ಸಮ ಪ್ರಮಾಣದಲ್ಲಿ ಹಂಚಿಕೆ ಮಾಡಿದ್ದೇನೆ ಎಂದು ತಿಳಿಸಿದರು.

ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅನುಧನ ಬಿಡುಗಡೆಯಾಗಲಿದ್ದು ಅಭಿವೃದ್ದಿಯೊಂದೇ ನಮ್ಮ ಗುರಿ ಹಗೂ ಅಭಿವೃದ್ದಿಯೇ ನಮ್ಮ ಮೂಲಮಂತ್ರವಾಗಿದೆ ಎಂದು ಶಾಕರು ತಿಳಿಸಿದರು. ಎಲ್ಲಾ ಸಮುದಾಯಗಳ ಅಭಿವೃದ್ದಿಗೆ ಸರಕಾರ ಕಠಿಬದ್ದವಾಗಿದ್ದು ಸಾಕಷ್ಟು ಪ್ರಮಾಣದಲ್ಲಿ ಅನುದಾನ ಹರಿದು ಬರುತ್ತಿದೆ ಎಂದು ಅವರು ಹೇಳಿದರು.
ಕಾಮಗಾರಿಯ ವಿವರಗಳು:

ಪುತ್ತೂರು ತಾಲೂಕಿನ ಕೊಡಿಪ್ಪಾಡಿ ಗ್ರಾಮದ ಕುದೇರತಡ್ಕ- ಬಟ್ರಪಾಡಿ ರಸ್ತೆ ಅಭಿವೃದ್ಧಿ 25ಲಕ್ಷ , ಕುರಿಯ ಗ್ರಾಮಧ ಇಡಬೆಟ್ಟು ಶಾಲಾ ಬಳಿಯಿಂದ ಇಡಬೆಟ್ಟು ರಸ್ತೆ ಅಭಿವೃದ್ಧಿ 10 ಲಕ್ಷ, ಬೆಳ್ಳಿಪ್ಪಾಡಿ ಗ್ರಾಮದ ನೆಕ್ಕರೆ ಎಂಬಲ್ಲಿ ಪರಿಶಿಷ್ಟ ಜಾತಿ ಕಾಲೋನಿ ರಸ್ತೆ ಅಭಿವೃದ್ಧಿ 10 ಲಕ್ಷ, ಕೊಳ್ತಿಗೆ ಗ್ರಾಮದ ಮೊಗಪ್ಪೆ ತಮಿಳು ಸಿ.ಆರ್.ಸಿ ಕಾಲೋನಿ ರಸ್ತೆ ಅಭಿವೃದ್ಧಿ 10 ಲಕ್ಷ, ಬಂಟ್ವಾಳ ತಾಲೂಕಿನ ವಿಟ್ಲಮುಡ್ನೂರು ಗ್ರಾಮದ ಬೇರಿಕೆ ಪಿಲಿಂಜ ಪೆರ್ವಾಜೆ ಕಾಲೋನಿ ರಸ್ತೆ ಅಭಿವೃದ್ಧಿಗರ 10 ಲಕ್ಷ ರೂ.ಮಂಜೂರಾಗಿದೆ.
ಇದನ್ನೂ ಓದಿ: ಮುಕ್ರಂಪಾಡಿ ಬಾಲಕಿಯರ ಪಿಯು ಕಾಲೇಜಿನ ನೂತನ ಸಭಾಭವನ ಉದ್ಘಾಟಿಸಿದ ಶಾಸಕ ಅಶೋಕ್ ರೈ

ರಿಯಡ್ಕ ಗ್ರಾಮದ ಕೌಡಿಚ್ಚಾರ್-ಗುಂಡ್ಯಡ್ಕ-ಮಾಯಿಲ ಕೊಚ್ಚಿ ಎಂಬಲ್ಲಿ ರಸ್ತೆ ಅಭಿವೃದ್ಧಿ 15 ಲಕ್ಷ, ಪಾಣಾಜೆ ಗ್ರಾಮದ ಅರ್ಲಪದವು (ನೆಲ್ಲಿತ್ತಿಮಾರು)ಭರಣ್ಯ ಗಿಳಿಯಾಲು, ಜಾಂಬ್ರಿ ರಸ್ತೆ ಅಭಿವೃದ್ಧಿ 20 ಲಕ್ಷ, ಕೆದಂಬಾಡಿ ಗ್ರಾಮದ ತ್ಯಾಗರಾಜ ನಗರದ ಪರಿಶಿಷ್ಟ ಜಾತಿ ಕಾಲೋನಿ ರಸ್ತೆ ಅಭಿವೃದ್ಧಿ 10 ಲಕ್ಷ, ಬಂಟ್ವಾಳ ತಾಲೂಕಿನ ಮಾಣಿಲ ಗ್ರಾಮದ ಮುರುವದಿಂದ ಓಟೆಪಡ್ಪು ಪರಿಶಿಷ್ಟ ಜಾತಿ ಕಾಲೋನಿ ರಸ್ತೆ ಅಭಿವೃದ್ಧಿ 10 ಲಕ್ಷ ರೂ. ಮಂಜೂರಾಗಿದೆ.
ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದ ಮಿತ್ತೂರು ಹಳೇ ರೈಲ್ವೆ ಗೇಟಿನಿಂದ ಎಮಾಜೆ ಪರಿಶಿಷ್ಟ ಜಾತಿ ಕಾಲೋನಿ ರಸ್ತೆ ಅಭಿವೃದ್ಧಿ 10 ಲಕ್ಷ, ಬಡಗನ್ನೂರು ಗ್ರಾಮದ ಕೆಳಗಿನ ಪೇರಾಲು, ಚೆಕ್ಕಿತ್ತಡಿ, ಬಡಕ್ಕಾಯೂರು, ಅಣಿಲೆ, ನೇರೋಳ್ತಡ್ಕ ಪರಿಶಿಷ್ಟ ಜಾತಿ ಕಾಲೋನಿ ರಸ್ತೆ ಅಭಿವೃದ್ಧಿ 15 ಲಕ್ಷ, ಬಂಟ್ವಾಳ ತಾಲೂಕು ಬಿಳಿಯೂರು ಬಗ್ರಾಮದ ಕಳೆಂಜ-ಕೆಳಗಿನ ಮನೆ ಸಂಪರ್ಕ ರಸ್ತೆ ಅಭಿವೃದ್ಧಿ 10 ಲಕ್ಷ ರೂ. ಮಂಜೂರಾಗಿದೆ.
ನೆಟ್ಟಣಿಗೆ ಮುಡ್ನೂರು ಗ್ರಾಮದ ಕುದ್ಕುಳಿ, ಸಣ್ಣಪಾದೆ, ಮಿಂಚಿಪದವು ರಸ್ತೆ ಅಭಿವೃದ್ದಿ 10 ಲಕ್ಷ,ಬಂಟ್ವಾಳ ತಾಲೂಕಿನ ಕೆದಿಲ ಗ್ರಾಮದ ಗಾಂಧಿನಗರ ಬಡೆಕ್ಕಿಲ ಗಾಳಿಗುಡ್ಡೆ ಪರಿಶಿಷ್ಟ ಜಾತಿ ಕಾಲೋನಿ ರಸ್ತೆ ಅಭಿವೃದ್ಧಿ 10 ಲಕ್ಷ, ಶಾಂತಿಗೋಡು ಗ್ರಾಮದ ಕೈಂದಾಡಿ ಪಜಿರೋಡಿ ರಸ್ತೆ ಅಭಿವೃದ್ಧಿ 10 ಲಕ್ಷ, ಕೆಯ್ಯೂರು ಗ್ರಾಮದ ಅಬುನಡ್ಕ -ಇಳಂತಾಜೆ ಪರಿಶಿಷ್ಟ ಜಾತಿ ಕಾಲೋನಿ ರಸ್ತೆ ಅಭಿವೃದ್ಧಿ 10 ಲಕ್ಷ, ಕಬಕ ಗ್ರಾಮದ ಪೋಳ್ಯ ಮೂಲೆಕಾಡು ಪರಿಶಿಷ್ಟ ಜಾತಿ ಕಾಲೋನಿ ರಸ್ತೆ ಅಭಿವೃದ್ಧಿ 15 ಲಕ್ಷ ರೂ. ಮಂಜೂರಾಗಿದೆ.
ಮುಂಡೂರು ಗ್ರಾಮದ ಕಾಲಿಂಗಹಿತ್ಲು ಎಂಬಲ್ಲಿ ಪರಿಶಿಷ್ಟ ಜಾತಿ ಕಾಲೋನಿ ರಸ್ತೆ ಅಭಿವೃದ್ಧಿ 10 ಲಕ್ಷ, ನೆಟ್ಟಣಿಗೆ ಮುಡ್ನೂರು ಗ್ರಾಮದ ಮಡ್ಯಾಲಮಜಲು ಆಲಂತ್ತಡ್ಕ ಪರಿಶಿಷ್ಟ ಜಾತಿ ಕಾಲೋನಿ ರಸ್ತೆ ಅಭಿವೃದ್ಧಿ 10ಲಕ್ಷ, ಬನ್ನೂರು ಗ್ರಾಮದ ಅಡೆಂಚಿಲಡ್ಕ ಬಲ್ಯ ಪರಿಶಿಷ್ಟ ಜಾತಿ ಕಾಲೋನಿ ರಸ್ತೆ ಅಭಿವೃದ್ಧಿಗೆ 10 ಲಕ್ಷ, ಮಾಡ್ನೂರು ಗ್ರಾಮದ ಆಚಾರಿಮೂಲೆ ಮದ್ಲ ಸಂಪರ್ಕ ರಸ್ತೆ ಅಭಿವೃದ್ಧಿ 10 ಲಕ್ಷ, ಬೆಟ್ಟಂಪಾಡಿ ಗ್ರಾಮದ ಗುಂಡ್ಯಡ್ಕ-ಕೂವೆಂಜ ಪರಿಶಿಷ್ಟ ಜಾತಿ ಕಾಲೋನಿ ರಸ್ತೆ ಅಭಿವೃದ್ಧಿ 10 ಲಕ್ಷ ರೂ. ಮಂಜೂರಾಗಿದೆ.
ಕೆಯ್ಯೂರು ಗ್ರಾಮದ ಸಿ.ಆರ್.ಸಿ ಕಾಲನಿ ಪರಿಸರ ಕಣಿಯಾರು ರಸ್ತೆ ಅಭಿವೃದ್ಧಿ 15 ಲಕ್ಷ, ಮಾಡ್ನೂರು ಗ್ರಾಮದ ಮಾಣಿಯಡ್ಕ- ಮುಂಡಾಲೆ ಪರಿಶಿಷ್ಟ ಜಾತಿ ಕಾಲೋನಿ ರಸ್ತೆ ಅಭಿವೃದ್ಧಿ 10 ಲಕ್ಷ, ಕೊಡಿಂಬಾಡಿ ಗ್ರಾಮದ ನೆಕ್ರಾಜೆಯಿಂದ ಮೋನಡ್ಕ-ಚೀಮುಳ್ಳು ವೆರೆಗೆ ರಸ್ತೆ ಅಭಿವೃದ್ಧಿ 10 ಲಕ್ಷ, ಇರ್ದೆ ಗ್ರಾಮದ ಪೇರಲ್ತಡ್ಕ ಬೇರಿಕೆ ರಸ್ತೆ ಅಭಿವೃದ್ಧಿ 5 ಲಕ್ಷ ಅನುದಾನ ಮಂಜೂರಾಗಿದೆ ಎಂದು ತಿಳಿಸಿದರು.

