ಸಾರಾ ತೆಂಡೂಲ್ಕರ್ ಮತ್ತು ರಾಜವೀರ್ ಡಿಯೋಲ್ ಮದುವೆ? 2027ರಲ್ಲಿ ಎರಡು ದಿಗ್ಗಜ ಕುಟುಂಬಗಳು ಒಂದಾಗಲಿವೆಯೇ?

ಮುಂಬೈ: ಭಾರತೀಯ ಕ್ರೀಡಾ ಲೋಕ ಮತ್ತು ಬಾಲಿವುಡ್‌ನ ಎರಡು ಅತ್ಯಂತ ಜನಪ್ರಿಯ ಕುಟುಂಬಗಳಿಗೆ ಸಂಬಂಧಿಸಿದ ಹೊಸ ಗಾಸಿಪ್‌ವೊಂದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಮತ್ತು ಬಾಲಿವುಡ್ ನಟ ಸನ್ನಿ ಡಿಯೋಲ್ ಪುತ್ರ ರಾಜವೀರ್ ಡಿಯೋಲ್ ನಡುವೆ 2027ರಲ್ಲಿ ಮದುವೆ ನಡೆಯಲಿದೆ ಎಂಬ ವದಂತಿಗಳು ನೆಟ್ಟಿಗರಲ್ಲಿ ಕುತೂಹಲ ಮೂಡಿಸಿವೆ. ಆದರೆ, ಈ ಸುದ್ದಿಯಲ್ಲಿ ಎಷ್ಟು ಸತ್ಯಾಂಶವಿದೆ ಎಂಬುದರ ಬಗ್ಗೆಯೂ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.

ಮದುವೆ ವದಂತಿ ಹಬ್ಬಿದ್ದು ಹೇಗೆ? ಸೋಶಿಯಲ್ ಮೀಡಿಯಾ ಪೋಸ್ಟ್‌ನ ಅಸಲಿಯತ್ತು

Advertisement

ಎಕ್ಸ್ (X) ಹಾಗೂ ರೆಡ್ಡಿಟ್‌ನಲ್ಲಿ ಶುರುವಾದ ಚರ್ಚೆ: ಸಾರಾ ತೆಂಡೂಲ್ಕರ್ ಮತ್ತು ರಾಜವೀರ್ ಡಿಯೋಲ್ ಕುರಿತ ಮದುವೆ ವದಂತಿಗೆ ಮೂಲ ಕಾರಣವಾಗಿದ್ದು ಸೋಶಿಯಲ್ ಮೀಡಿಯಾ ಪೋಸ್ಟ್‌ಗಳು. ನಿರ್ದಿಷ್ಟವಾಗಿ ‘ಎಕ್ಸ್’ (X – ಹಿಂದಿನ ಟ್ವಿಟರ್) ಖಾತೆಯೊಂದರಲ್ಲಿ ಪ್ರಕಟವಾದ ಪೋಸ್ಟ್‌ನಲ್ಲಿ, ರಾಜವೀರ್ ಡಿಯೋಲ್ ಅವರು ಸಾರಾ ತೆಂಡೂಲ್ಕರ್ ಅವರಿಗೆ ದುಬಾರಿ ಉಡುಗೊರೆಗಳನ್ನು ನೀಡುತ್ತಿದ್ದಾರೆ ಹಾಗೂ 2027ರಲ್ಲೇ ಇಬ್ಬರ ವಿವಾಹ ನಡೆಯುವ ಸಾಧ್ಯತೆಯಿದೆ ಎಂದು ಹೇಳಲಾಗಿತ್ತು. ಇದೇ ರೀತಿಯ ಪೋಸ್ಟ್‌ಗಳು ರೆಡ್ಡಿಟ್‌ನಲ್ಲೂ (Reddit) ಹರಿದಾಡತೊಡಗಿದವು.

ಸಾರಾ ಅವರ ಅತ್ತಿಗೆ ಸಾನಿಯಾ ಚಾಂದೋಕ್ ಮುಂದಿನ ವರ್ಷ ಮದುವೆ ನಡೆಯುವ ಸುಳಿವು ನೀಡಿದ್ದು, ವರ ಹತ್ತಿರದಲ್ಲೇ ವಾಸವಾಗಿದ್ದಾರೆ ಎಂದು ಹೇಳಿದ್ದಾರೆ ಎಂಬ ಅಂಶವನ್ನೂ ಆ ಪೋಸ್ಟ್‌ನಲ್ಲಿ ಉಲ್ಲೇಖಿಸಲಾಗಿತ್ತು. ಸದ್ಯ ಹರಿದಾಡುತ್ತಿರುವ ಈ ಮಾಹಿತಿ ಕೇವಲ ಸೋಶಿಯಲ್ ಮೀಡಿಯಾ ಪೋಸ್ಟ್‌ಗಳಿಂದ ಹುಟ್ಟಿಕೊಂಡ ವದಂತಿಯಷ್ಟೇ ಹೊರತು, ಯಾವುದೇ ವಿಶ್ವಾಸಾರ್ಹ ಸುದ್ದಿ ಮೂಲಗಳಿಂದ ದೃಢಪಟ್ಟಿಲ್ಲ. ಸಾನಿಯಾ ಚಾಂದೋಕ್ ಆಗಲಿ, ತೆಂಡೂಲ್ಕರ್ ಅಥವಾ ಡಿಯೋಲ್ ಕುಟುಂಬದ ಯಾರೊಬ್ಬರೂ ಆಗಲಿ ಇಂತಹ ಹೇಳಿಕೆ ನೀಡಿಲ್ಲ. ಸಾರಾ ಮತ್ತು ರಾಜವೀರ್ ಕೂಡ ತಮ್ಮ ಸಂಬಂಧ ಅಥವಾ ಮದುವೆಯ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

Advertisement

ಸಾರಾ ತೆಂಡೂಲ್ಕರ್ ವೈಯಕ್ತಿಕ ಜೀವನ ಏಕೆ ಸದಾ ಸುದ್ದಿಯಲ್ಲಿರುತ್ತದೆ?

ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಪುತ್ರಿಯಾಗಿರುವ ಕಾರಣ ಸಾರಾ ತೆಂಡೂಲ್ಕರ್ ಅವರ ಪ್ರತಿಯೊಂದು ಹೆಜ್ಜೆಯೂ ಸಾರ್ವಜನಿಕವಾಗಿ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಗಮನ ಸೆಳೆಯುತ್ತಿರುತ್ತದೆ. ಈ ಹಿಂದೆ ಕ್ರಿಕೆಟಿಗ ಶುಭ್‌ಮನ್ ಗಿಲ್ ಜೊತೆ ಸಾರಾ ಹೆಸರು ತಳಕು ಹಾಕಿಕೊಂಡು ಸಾಕಷ್ಟು ಸುದ್ದಿಯಾಗಿತ್ತು. 2025ರಲ್ಲಿ ಬಾಲಿವುಡ್ ನಟ ಸಿದ್ಧಾಂತ್ ಚತುರ್ವೇದಿ ಜೊತೆಯೂ ಅವರ ಹೆಸರು ಕೇಳಿಬಂದಿತ್ತು. ಆದರೆ ಈ ಯಾವ ವದಂತಿಗಳಿಗೂ ಸಾರಾ ಅಥವಾ ಸಂಬಂಧಪಟ್ಟವರು ಅಧಿಕೃತ ಮುದ್ರೆ ಒತ್ತಿರಲಿಲ್ಲ.

Advertisement

ಸಾರಾ ತಮ್ಮ ಖಾಸಗಿ ಬದುಕನ್ನು ಹೆಚ್ಚಾಗಿ ಗೌಪ್ಯವಾಗಿಯೇ ಇಟ್ಟುಕೊಂಡಿದ್ದಾರೆ. ಇತ್ತೀಚೆಗೆ ‘ವೋಗ್ ಇಂಡಿಯಾ’ (Vogue India) ಸಂದರ್ಶನದಲ್ಲಿ ತಮ್ಮ ಭವಿಷ್ಯದ ಸಂಗಾತಿಯಲ್ಲಿ ತಾವು ಯಾವ ಗುಣಗಳನ್ನು ಬಯಸುತ್ತಾರೆ ಎಂಬುದರ ಕುರಿತು ಮಾತನಾಡಿದ್ದರು. ಇದೀಗ ರಾಜವೀರ್ ಡಿಯೋಲ್ ಜೊತೆಗಿನ ಮದುವೆ ಗಾಸಿಪ್ ಹಬ್ಬಿದ ಬೆನ್ನಲ್ಲೇ ಆ ಹಳೆಯ ಸಂದರ್ಶನದ ಮಾತುಗಳೂ ಮತ್ತೆ ಮುನ್ನೆಲೆಗೆ ಬಂದಿವೆ.

ಇದನ್ನೂ ಓದಿ:ಪುತ್ತೂರಿನ ಬಿಜೆಪಿಯಲ್ಲಿ ಅರುಣ್‌ ಕುಮಾರ್ ಪುತ್ತಿಲರಿಗೆ ಯಾಕಿಲ್ಲ ಮನ್ನಣೆ? ರಾಜಕೀಯದ ಒಳಸುಳಿ ಏನು?

ಯಾರು ಈ ರಾಜವೀರ್ ಡಿಯೋಲ್?

ರಾಜವೀರ್ ಡಿಯೋಲ್ ಬಾಲಿವುಡ್‌ನಲ್ಲಿ ಉದಯೋನ್ಮುಖ ನಟನಾಗಿದ್ದು, ನಟ ಸನ್ನಿ ಡಿಯೋಲ್ ಮತ್ತು ಪೂಜಾ ಡಿಯೋಲ್ ಅವರ ಕಿರಿಯ ಪುತ್ರ. ಅಲ್ಲದೆ, ಹಿಂದಿ ಚಿತ್ರರಂಗದ ಹಿರಿಯ ನಟ ಧರ್ಮೇಂದ್ರ ಅವರ ಮೊಮ್ಮಗನಾಗಿರುವ ರಾಜವೀರ್, ಬಾಲಿವುಡ್‌ನ ಪ್ರಭಾವಶಾಲಿ ಸಿನಿಮಾ ಕುಟುಂಬದ ಹಿನ್ನೆಲೆ ಹೊಂದಿದ್ದಾರೆ.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್‌ ಮಾಡಿ