ಟಿಸಿಎಸ್ ಕಂಪನಿಯಲ್ಲಿ ಮುಂದುವರಿದ ಹಿಂದೂ ವಿರೋಧಿ ಧೋರಣೆ: ಅಯ್ಯಪ್ಪ ವೃತಧಾರಿಗೆ ಪ್ರವೇಶ ನಿರಾಕರಣೆ

ಹೈದರಾಬಾದ್: ದೇಶದ ಪ್ರಮುಖ ಐಟಿ ಸಂಸ್ಥೆಗಳಲ್ಲಿ ಒಂದಾಗಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ಕಂಪನಿಯಲ್ಲಿನ ಹಿಂದೂ ವಿರೋಧಿ ಧೋರಣೆ ಮುಂದುವರಿದಿದ್ದು, ಅಯ್ಯಪ್ಪ ಸ್ವಾಮಿ ದೀಕ್ಷೆ ಪಾಲಿಸುತ್ತಿದ್ದ ಉದ್ಯೋಗಿಯೊಬ್ಬರಿಗೆ ಸಾಂಪ್ರದಾಯಿಕ ಉಡುಪು ಧರಿಸಿದ ಕಾರಣ ಕಚೇರಿಗೆ ಪ್ರವೇಶ ನಿರಾಕರಿಸಿದ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.

ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಆದಿಬಟ್ಲಾದಲ್ಲಿರುವ ಟಿಸಿಎಸ್ ಕಚೇರಿಯಲ್ಲಿ ನವೆಂಬರ್ 19ರಂದು ಈ ಘಟನೆ ನಡೆದಿದೆ. ಮನೀಶ್ ಯಾದವ್ ಎಂಬ ಉದ್ಯೋಗಿ ಕಳೆದ ಎರಡು ವರ್ಷಗಳಿಂದ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಅಯ್ಯಪ್ಪ ಸ್ವಾಮಿ ದೀಕ್ಷೆ ಕೈಗೊಳ್ಳುವ ಬಗ್ಗೆ ಎರಡು ತಿಂಗಳ ಹಿಂದೆಯೇ ಆಡಳಿತ ಮಂಡಳಿಗೆ ಮಾಹಿತಿ ನೀಡಿದ್ದೆ ಎಂದು ತಿಳಿಸಿದ್ದಾರೆ.

Advertisement

ದೀಕ್ಷೆಯ ಹಿನ್ನೆಲೆಯಲ್ಲಿ ಸಾಂಪ್ರದಾಯಿಕ ಉಡುಪು ಧರಿಸಿ ಕಚೇರಿಗೆ ತೆರಳಿದ್ದಾಗ ಡ್ರೆಸ್ ಕೋಡ್ ಉಲ್ಲಂಘನೆಯ ನೆಪದಲ್ಲಿ ಒಳ ಪ್ರವೇಶಿಸಲು ಅವಕಾಶ ನೀಡಲಿಲ್ಲ ಎಂದು ಅವರು ಆರೋಪಿಸಿದ್ದಾರೆ. ಇದೇ ವೇಳೆ ಇತರ ಉದ್ಯೋಗಿಗಳಿಗೆ ಉಡುಪು ನಿಯಮಗಳಲ್ಲಿ ವಿನಾಯಿತಿ ನೀಡಲಾಗುತ್ತಿದೆ ಎಂಬ ಪ್ರಶ್ನೆಯನ್ನೂ ಎತ್ತಿದ್ದಾರೆ.

ಈ ಘಟನೆ ತಿಳಿಯುತ್ತಿದ್ದಂತೆ ಅಯ್ಯಪ್ಪ ಭಕ್ತರು ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರು ಟಿಸಿಎಸ್ ಕಚೇರಿ ಎದುರು ಪ್ರತಿಭಟನೆ ನಡೆಸಿ, ದೀಕ್ಷೆ ಪಾಲಿಸುವ ಉದ್ಯೋಗಿಗೆ ಕೆಲಸ ಮಾಡಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.

Advertisement

ಇದನ್ನೂ ಓದಿ: 2035ರ ವೇಳೆಗೆ ವಿಶ್ವದ ಅತಿದೊಡ್ಡ ಧರ್ಮವಾಗಲಿದೆ ಇಸ್ಲಾಂ: ಪ್ಯೂ ರಿಸರ್ಚ್ ಸೆಂಟರ್ ವರದಿಯಲ್ಲಿ ಮಹತ್ವ ಹೇಳಿಕೆ

ಆದರೆ ಆದಿಬಟ್ಲಾ ಪೊಲೀಸರು ಈ ಘಟನೆಯನ್ನು ಧಾರ್ಮಿಕ ತಾರತಮ್ಯ ಎಂದು ಪರಿಗಣಿಸದೆ, ಸಾಂಪ್ರದಾಯಿಕ ಧೋತಿ ಧರಿಸುವ ವಿಚಾರದಲ್ಲಿ ಉಂಟಾದ ತಪ್ಪು ತಿಳುವಳಿಕೆ ಎಂದು ತಿಳಿಸಿದ್ದಾರೆ. ಕಚೇರಿಯ ಹೆಚ್.ಆರ್. ವಿಭಾಗವು ಪಾಶ್ಚಾತ್ಯ ಗ್ರಾಹಕರಿಗೆ ಈ ಉಡುಪು ಪರಿಚಯವಿಲ್ಲ ಎಂಬ ಕಾರಣ ನೀಡಿ ಪ್ಯಾಂಟ್ ಧರಿಸುವಂತೆ ಸೂಚಿಸಿತ್ತು ಎನ್ನಲಾಗಿದೆ. ಯಾವುದೇ ಕೋಮು ಆಯಾಮವಿಲ್ಲ, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಈ ಸಂಬಂಧ ಅಧಿಕೃತ ದೂರು ಬಂದಿಲ್ಲ ಎಂದು ವರದಿಯಾಗಿದೆ. TCS ಕೂಡ ಈ ಘಟನೆಯ ಕುರಿತು ಅಧಿಕೃತ ಹೇಳಿಕೆ ನೀಡಿಲ್ಲ.

Advertisement

TCS ಕಚೇರಿಯಲ್ಲಿ ಹಿಂದೂ ಧರ್ಮದ ಅವಹೇಳನ

ಇದಕ್ಕೂ ಮೊದಲು ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ TCS ಕಚೇರಿಯಲ್ಲಿ ಮಹಿಳಾ ಉದ್ಯೋಗಿಗಳಿಗೆ ಲೈಂಗಿಕ ಕಿರುಕುಳ, ಮಾನಸಿಕ ಹಿಂಸೆ ಹಾಗೂ ಧಾರ್ಮಿಕ ವಿಚಾರದಲ್ಲಿ ಒತ್ತಡ ಹೇರಲಾಗಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿದ್ದವು.

ಈ ಪ್ರಕರಣದ ಕುರಿತು ರಾಷ್ಟ್ರೀಯ ಮಹಿಳಾ ಆಯೋಗ (NCW) ರಚಿಸಿದ್ದ ಸತ್ಯಶೋಧನಾ ಸಮಿತಿ 2026ರ ಮೇ ತಿಂಗಳಲ್ಲಿ ತನ್ನ ವರದಿಯನ್ನು ಸಲ್ಲಿಸಿತ್ತು.

ವರದಿಯಲ್ಲಿ ಉಲ್ಲೇಖಿಸಿರುವ ಪ್ರಮುಖ ಅಂಶಗಳೆಂದರೆ- ಹಿಂದೂ ಪುರಾಣಗಳು, ದೇವತೆಗಳು, ನಂಬಿಕೆಗಳು ಮತ್ತು ಸಂಪ್ರದಾಯಗಳ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಲಾಗಿದೆ. ಹಿಂದೂ ಧರ್ಮಕ್ಕಿಂತ ಇಸ್ಲಾಂ ಶ್ರೇಷ್ಠ ಎಂಬ ಅಭಿಪ್ರಾಯವನ್ನು ಮಹಿಳಾ ಉದ್ಯೋಗಿಗಳ ಮೇಲೆ ಹೇರಲು ಪ್ರಯತ್ನಿಸಲಾಗಿದೆ ಎಂದು ಸಮಿತಿ ವರದಿ ಮಾಡಿದೆ.

ಧಾರ್ಮಿಕ ವಿಚಾರಗಳ ಮೂಲಕ ಮಹಿಳಾ ಉದ್ಯೋಗಿಗಳಿಗೆ ಮಾನಸಿಕ ಒತ್ತಡ ಮತ್ತು ಕಿರುಕುಳ ನೀಡಲಾಗಿದೆ ಎಂಬ ಅಂಶವನ್ನು ವರದಿ ಉಲ್ಲೇಖಿಸಿದೆ. ಮಹಿಳಾ ಉದ್ಯೋಗಿಗಳಿಗೆ ಲೈಂಗಿಕ ಕಿರುಕುಳ, ಹಿಂಸೆ ಮತ್ತು ಬೆದರಿಕೆ ನೀಡಲಾಗಿದೆ ಎಂಬ ದೂರುಗಳನ್ನೂ ಸಮಿತಿ ಪರಿಶೀಲಿಸಿದೆ. ಉದ್ಯೋಗಿಗಳ ದೂರುಗಳನ್ನು ನಿರ್ವಹಿಸುವ ವ್ಯವಸ್ಥೆ ಹಾಗೂ POSH ಕಾಯ್ದೆಯ ಅನುಷ್ಠಾನದಲ್ಲಿ ಗಂಭೀರ ಲೋಪಗಳಿರುವುದಾಗಿ ಸಮಿತಿ ಹೇಳಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂಬತ್ತು FIRಗಳು ದಾಖಲಾಗಿದ್ದು, ಹಲವು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ