ಬೆಂಗಳೂರು: ರಾಜ್ಯ ಬಜೆಟ್‌ನಲ್ಲಿ ಅಲ್ಪಸಂಖ್ಯಾತ ಸಮುದಾಯದ ಶೈಕ್ಷಣಿಕ ಮತ್ತು ಸಾಮಾಜಿಕ ಸಬಲೀಕರಣಕ್ಕೆ ಸಿಎಂ ಸಿದ್ದರಾಮಯ್ಯ ಆದ್ಯತೆ ನೀಡಿದ್ದಾರೆ. ಜೊತೆಗೆ, ‘ಸರ್ವರಿಗೂ ಸೂರು’ ಯೋಜನೆಯಡಿ ವಸತಿ ಸಹಾಯಧನವನ್ನು ಗಣನೀಯವಾಗಿ ಹೆಚ್ಚಿಸುವ ಮೂಲಕ ಬಡವರ ಮನೆ ನಿರ್ಮಾಣದ ಕನಸಿಗೆ ಬಲ ತುಂಬಿದ್ದಾರೆ.
ಅಲ್ಪಸಂಖ್ಯಾತರ ಕಲ್ಯಾಣದ ಪ್ರಮುಖ ಅಂಶಗಳು:

ಹಜ್ ಭವನಗಳ ನಿರ್ಮಾಣ: ಉತ್ತರ ಕರ್ನಾಟಕದ ಭಕ್ತಾದಿಗಳ ಅನುಕೂಲಕ್ಕಾಗಿ ಹುಬ್ಬಳ್ಳಿ ಮತ್ತು ಕಲಬುರಗಿಯಲ್ಲಿ ಸುಸಜ್ಜಿತ ಹಜ್ ಭವನಗಳನ್ನು ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ.
ಅಭಿವೃದ್ಧಿ ಮತ್ತು ತರಬೇತಿ ಕೇಂದ್ರ: ಸೇಲಂನ ಬೆನೆಡಿಕ್ಟಿನ್ ಮೊನಾಸ್ಟರಿಯ ಜಾಗದಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿ ಕೇಂದ್ರ ಸ್ಥಾಪನೆಗೆ 5 ಕೋಟಿ ರೂ. ಮೀಸಲಿಡಲಾಗಿದೆ.
ಶೈಕ್ಷಣಿಕ ಕ್ರಾಂತಿ: ವಕ್ಫ್ ಸಂಸ್ಥೆಗಳ ಅಡಿಯಲ್ಲಿದ್ದ 31 ಮಹಿಳಾ ಪಿಯು ಕಾಲೇಜುಗಳನ್ನು ಪದವಿ ಕಾಲೇಜುಗಳನ್ನಾಗಿ ಉನ್ನತೀಕರಿಸಲಾಗುವುದು. ಸವಣೂರಿನಲ್ಲಿ ಹೊಸ ಮಹಿಳಾ ಪಿಯು ಕಾಲೇಜು ಪ್ರಾರಂಭವಾಗಲಿದೆ.
ಸಂಸ್ಕೃತಿ ಮತ್ತು ಸಾಹಿತ್ಯ: ಡಾ. ಬಿ.ಆರ್. ಅಂಬೇಡ್ಕರ್ ಸೇರಿದಂತೆ ಪ್ರಮುಖ ಸಮಾಜ ಸುಧಾರಕರ ಕೃತಿಗಳನ್ನು ಉರ್ದು ಭಾಷೆಗೆ ಅನುವಾದಿಸಲು ಕ್ರಮ.
ವಕ್ಫ್ ಆಸ್ತಿ ಅಭಿವೃದ್ಧಿ: ಆರ್ಥಿಕ ಲಾಭದ ದೃಷ್ಟಿಯಿಂದ ವಕ್ಫ್ ಆಸ್ತಿಗಳನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ (PPP Model) ಅಭಿವೃದ್ಧಿಪಡಿಸುವ ಯೋಜನೆ.
ಸಿಖ್ ಸಮುದಾಯ: ಬೀದರ್‌ನ ಪ್ರಸಿದ್ಧ ಶ್ರೀ ನಾನಕ್ ಝೀರಾ ಸಾಹೇಬ್ ಗುರುದ್ವಾರದಲ್ಲಿ ಗ್ರಂಥಾಲಯ ಸ್ಥಾಪನೆ.
ಇದನ್ನೂ ಓದಿ: ಕರ್ನಾಟಕ ಬಜೆಟ್ 2026: ಗೃಹಲಕ್ಷ್ಮೀಯರಿಗೆ ಸಿದ್ದರಾಮಯ್ಯ ಬಂಪರ್ ಕೊಡುಗೆ; 28,608 ಕೋಟಿ ರೂ. ಅನುದಾನ ಘೋಷಣೆ!
ವಸತಿ ಯೋಜನೆಯಲ್ಲಿ ಭಾರಿ ಬದಲಾವಣೆ:
ಸಹಾಯಧನ ಏರಿಕೆ: ಬಿಎಲ್‌ಸಿ (Beneficiary Led Construction) ಅಡಿಯಲ್ಲಿ ಮನೆ ನಿರ್ಮಿಸುವ ಸಾಮಾನ್ಯ ವರ್ಗದವರಿಗೆ ನೀಡುತ್ತಿದ್ದ ಸಹಾಯಧನವನ್ನು 1.20 ಲಕ್ಷದಿಂದ 2 ಲಕ್ಷಕ್ಕೆ ಮತ್ತು ಎಸ್‌ಸಿ/ಎಸ್‌ಟಿ ಫಲಾನುಭವಿಗಳಿಗೆ 2 ಲಕ್ಷದಿಂದ 3 ಲಕ್ಷಕ್ಕೆ ಹೆಚ್ಚಿಸಲಾಗಿದೆ.
ಗುರಿ: ಈವರೆಗೆ ಸುಮಾರು 5 ಲಕ್ಷ ಮನೆಗಳನ್ನು ಪೂರ್ಣಗೊಳಿಸಲಾಗಿದ್ದು, ಪ್ರಸಕ್ತ ವರ್ಷದಲ್ಲಿ 3 ಲಕ್ಷ ಹೊಸ ಮನೆಗಳನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

