ನಾಯಿ ಪರಚಿದ 6 ತಿಂಗಳ ನಂತರ ರೇಬಿಸ್‌ನಿಂದ 4ನೇ ತರಗತಿ ವಿದ್ಯಾರ್ಥಿನಿ ಸಾವು

ಮುಂಬೈ: ಚುಚ್ಚುಮದ್ದು ಎಂದರೆ ಇದ್ದ ವಿಪರೀತ ಭಯವು 9 ವರ್ಷದ ಪುಟ್ಟ ಬಾಲಕಿಯ ಪ್ರಾಣವನ್ನೇ ಬಲಿಪಡೆದಿದೆ. ಮುಂಬೈ ನಿವಾಸಿ, 4ನೇ ತರಗತಿಯ ವಿದ್ಯಾರ್ಥಿನಿ ಕಶಿಶ್ ಸಹಾನಿ ರೇಬಿಸ್ ರೋಗದಿಂದ ಮೃತಪಟ್ಟಿದ್ದು, ನಾಯಿ ಪರಚಿದ ಆರು ತಿಂಗಳ ನಂತರ ಈ ರೋಗದ ಲಕ್ಷಣಗಳು ಕಾಣಿಸಿಕೊಂಡಿರುವುದು ಪೋಷಕರನ್ನು ಆತಂಕಕ್ಕೆ ತಳ್ಳಿದೆ.

ಆರು ತಿಂಗಳ ಹಿಂದೆ ಕಶಿಶ್ ತನ್ನ ಅಜ್ಜನೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ಬೀದಿ ನಾಯಿಯೊಂದು ಆಕೆಯನ್ನು ಪರಚಿತ್ತು. ಘಟನೆಯ ನಂತರ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಚುಚ್ಚುಮದ್ದು (Vaccine) ಎಂದರೆ ಇದ್ದ ವಿಪರೀತ ಭಯದಿಂದಾಗಿ ಆಕೆ ಲಸಿಕೆ ಪಡೆಯಲು ನಿರಾಕರಿಸಿ ಹಠ ಹಿಡಿದಿದ್ದಳು.

ಇದನ್ನೂ ಓದಿ: ಗೋರಕ್ಷಕ ಬಾಬಾ ಹತ್ಯೆ: ಮಥುರಾದಲ್ಲಿ ಭುಗಿಲೆದ್ದ ಆಕ್ರೋಶ, ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಿಎಂ ಯೋಗಿ ಸೂಚನೆ

ಆರಂಭದಲ್ಲಿ ಗಾಯವು ಸಾಮಾನ್ಯವಾಗಿದ್ದರಿಂದ ಮತ್ತು ಆಕೆ ಚೇತರಿಸಿಕೊಂಡಿದ್ದರಿಂದ, ಕುಟುಂಬಸ್ಥರು ಕೂಡ ಆಕೆಗೆ ಲಸಿಕೆ ಪಡೆಯಲು ಹೆಚ್ಚು ಬಲವಂತ ಮಾಡಿರಲಿಲ್ಲ. ಆರು ತಿಂಗಳ ಕಾಲ ಯಾವುದೇ ತೊಂದರೆ ಇರಲಿಲ್ಲ. ಆದರೆ ಇತ್ತೀಚೆಗೆ ಆಕೆಯಲ್ಲಿ ನೀರಿನ ಭಯ (Hydrophobia) ಮತ್ತು ರೇಬಿಸ್‌ನ ತೀವ್ರ ಲಕ್ಷಣಗಳು ಕಾಣಿಸಿಕೊಂಡವು. ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಸಾವನ್ನಪ್ಪಿದ್ದಾಳೆ.

ದೇಶದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು