ಭಾರತಕ್ಕೆ ನುಗ್ಗಲು ಯತ್ನಿಸಿದ ಡ್ರೋನ್‌ಗಳನ್ನು ಹೊಡೆದುರುಳಿಸಿದ ಭಾರತೀಯ ಸೇನೆ

pakistan drone

ನವದೆಹಲಿ: ಸಾವಿರಕ್ಕೂ ಹೆಚ್ಚು ಆತ್ಮಹತ್ಯಾ ಬಾಂಬರ್‌ಗಳು ಸಿದ್ಧರಿದ್ದಾರೆ ಮತ್ತು ಭಾರತಕ್ಕೆ ನುಸುಳಲು ಅವಕಾಶ ನೀಡುವಂತೆ ತನ್ನ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಪಾಕಿಸ್ತಾನದ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ ಹೇಳಿದ ಆಡಿಯೋ ಸಂದೇಶವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ, ಇದರ ಬೆನ್ನಲ್ಲೇ ಜಮ್ಮು ಮತ್ತು ಕಾಶ್ಮೀರದ ನೌಶೇರಾ ಸೆಕ್ಟರ್‌ನಲ್ಲಿ ಗಡಿ ನಿಯಂತ್ರಣ ರೇಖೆಯ ಹತ್ತಿರ ಭಾನುವಾರ ಸಂಜೆ ಪಾಕಿಸ್ತಾನದ ಡ್ರೋನ್ ಗಳಹಾರಾಟ ಪತ್ತೆಯಾಗಿದೆ.

ಭಾರತೀಯ ಯೋಧರು ಈ ಡ್ರೋನ್ ಗಳನ್ನು ಗುಂಡು ಹಾರಿಸಿ ಹೊಡೆದುರುಳಿಸಿದ್ದು, ಇನ್ನೂ ಹಲವಾರು ಡ್ರೋನ್ ಗಳು ಗಡಿ ದಾಟಿ ಬಂದಿವೆ ಎನ್ನಲಾಗುತ್ತಿದೆ. ಕಳೆದ  ಆಪರೇಷನ್ ಸಿಂಧೂರದ ಸಮಯದಲ್ಲಿ ಬರುತ್ತಿದ್ದ ಡ್ರೋನ್ ನಂತೆ ಆಕಾಶದಲ್ಲಿ ಮಿನುಗುತ್ತಾ ಡ್ರೋನ್ ಗಳು ಪಾಕ್ ಆಕ್ರಮಿತ ಕಾಶ್ಮೀರ ಭಾರತದ ಗಡಿಭಾಗಕ್ಕೆ ನುಗ್ಗಲು  ಯತ್ನಿಸಿವೆ. ಭಾರತೀಯ ಸೇನೆಯ ಯೋಧರು ಎಲ್ಲ ಡ್ರೋನ್ ಗಳನ್ನು ಆಗಸದಲ್ಲೇ ಯಶಸ್ವಿಯಾಗಿ ಹೊಡೆದುರುಳಿಸಿ ದ್ದಾರೆ, ಅವು ಹೊತ್ತು ತಂದಿರಬಹುದಾದ ಶಸ್ತ್ರಾಸ್ತ್ರಗಳ ಹುಡುಕಾಟದಲ್ಲಿ ತೋಡಗಿದ್ದಾರೆ.

ಇದನ್ನೂ ಓದಿ‌ : Puttur: ಮೂರು ದಿನಗಳ ಕೃಷಿ ಮೇಳ – ಸಸ್ಯ ಜಾತ್ರೆ ಸಮಾರೋಪPuttur: ಮೂರು ದಿನಗಳ ಕೃಷಿ ಮೇಳ – ಸಸ್ಯ ಜಾತ್ರೆ ಸಮಾರೋಪ

ಪಾಕ್ ಆಕ್ರಮಿತ ಕಾಶ್ಮೀರ ದಿಕ್ಕಿನಿಂದ ಬಂದ ಡ್ರೋನ್ ಸಾಂಬಾ ಸೆಕ್ಟರ್‌ನಲ್ಲಿ ಶಸ್ತ್ರಾಸ್ತ್ರಗಳನ್ನು ಹೊತ್ತು ತಂದಿದ್ದವು. ಮಷಿನ್ ಗನ್   ಈ ಡ್ರೋನ್ ಗಳಲ್ಲಿ ಇದ್ದವು ಎಂದು ಸೇನೆ ಹೇಳಿದೆ. ರಾಜೌರಿ ಜಿಲ್ಲೆಯಲ್ಲಿ ಸಂಜೆ 6.35 ಕ್ಕೆ ಮತ್ತೊಂದು ಡ್ರೋನ್ ಕಾಣಿಸಿಕೊಂಡಿದ್ದು, ಮಿನುಗುವ ಬೆಳಕನ್ನು ಹೊಂದಿರುವ ಹಾರುವ ವಸ್ತು ಕಲಕೋಟ್‌ನ ಧರ್ಮಸಾಲ್ ಗ್ರಾಮದಿಂದ ಬಂದು ಭರಖ್ ಕಡೆಗೆ ಚಲಿಸಿದೆ. ಮತ್ತೊಂದು ಡ್ರೋನ್ 7.15ರ ಸುಮಾರಿಗೆ ಸಾಂಬಾದ ರಾಮಗಢ ಸೆಕ್ಟರ್‌ನಲ್ಲಿ ಚಕ್ ಬಾಬ್ರಾಲ್ ಗ್ರಾಮದ ಮೇಲೆ ಕೆಲವು ನಿಮಿಷಗಳ ಕಾಲ ಹಾರಾಟ ನಡೆಸಿದೆ ಎಂದು ಭಾರತೀಯ ಸೇನೆ ತಿಳಿಸಿದೆ.

ಸಂಜೆ 6.25ಕ್ಕೆ ಪೂಂಛ್ ಜಿಲ್ಲೆಯ ಮಂಕೋಟೆ ಸೆಕ್ಟರ್‌ನ ಟೋಪಾ ಕಡೆಗೆ ಮತ್ತೊಂದು ಪಾಕ್ ಡ್ರೋನ್ ಚಲನೆ ಕಂಡುಬಂದಿದೆ.ಈ ಎಲ್ಲ ಡ್ರೋನ್ ಗಳನ್ನು ಮಷಿನ್ ಗನ್ ನಿಂದ ಹೊಡೆದುರುಳಿಸಲಾಗಿದ್ದು, ಅವು ಹೊತ್ತು ತಂದಿರಬಹುದಾದ ವಸ್ತುಗಳ ಶೋಧ ಕಾರ್ಯ  ಮುಂದುವರಿದಿದೆ ಎಂದು ಸೇನಾ ಮೂಲಗಳು ತಿಳಿಸಿವೆ.

ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್:‌ 7353833811, ಇ-ಮೇಲ್-‌ g1newsdpt@gmail.com

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು