ಭಾರತ ಕ್ರಿಕೆಟ್ ಲೋಕದ ವಿಸ್ಮಯ ಬಾಲಕ, ಕೇವಲ 15 ವರ್ಷದ ವೈಭವ್ ಸೂರ್ಯವಂಶಿ ಅವರ ಜೀವಮಾನದ ಕನಸು ನನಸಾಗಿದೆ. ಮುಂಬರುವ ಐರ್ಲೆಂಡ್ ಹಾಗೂ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ (T20 Series) ಭಾರತ ಹಿರಿಯರ ತಂಡಕ್ಕೆ ಆಯ್ಕೆಯಾಗಿರುವ ವೈಭವ್, ಇದೀಗ ತಮ್ಮ ಹೆಸರಿರುವ ಐಕಾನಿಕ್ ನೀಲಿ ಜೆರ್ಸಿಯನ್ನು (Team India Blue Jersey) ಪಡೆದುಕೊಂಡಿದ್ದಾರೆ. ಈ ವಿಶೇಷ ಹಾಗೂ ಭಾವುಕ ಕ್ಷಣದ ವಿಡಿಯೋವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ತನ್ನ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದೆ.
ಬಿಸಿಸಿಐ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ, ವೈಭವ್ ಸೂರ್ಯವಂಶಿ ತಮ್ಮ ಹೆಸರಿರುವ ಭಾರತ ತಂಡದ ಜೆರ್ಸಿಯನ್ನು ಕೈಯಲ್ಲಿ ಹಿಡಿದು ಅತ್ಯಂತ ಭಾವುಕರಾಗಿರುವುದು ಕಂಡುಬಂದಿದೆ. ಈ ವೇಳೆ ಮಾತನಾಡಿದ ಅವರು, “ಭಾರತ ತಂಡದ ಜೆರ್ಸಿ ಧರಿಸುವುದು ನನ್ನ ಜೀವಮಾನದ ಬಹುದೊಡ್ಡ ಕನಸಾಗಿತ್ತು. ನನ್ನ ಕೈಯಲ್ಲಿ ನನ್ನದೇ ಹೆಸರಿರುವ ಈ ನೀಲಿ ಜೆರ್ಸಿಯನ್ನು ನೋಡಿ ನನಗೆ ಇನ್ನೂ ನಂಬಲು ಸಾಧ್ಯವಾಗುತ್ತಿಲ್ಲ” ಎಂದು ಸಂತಸದ ಕಣ್ಣೀರಿಟ್ಟಿದ್ದಾರೆ. ಸದ್ಯ ಈ ವಿಡಿಯೋ ಕ್ರಿಕೆಟ್ ವಲಯದಲ್ಲಿ ಭಾರಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಈ ಯುವ ಪ್ರತಿಭೆಗೆ ಶುಭ ಹಾರೈಸುತ್ತಿದ್ದಾರೆ.

ಇದನ್ನೂ ಓದಿ: Vaibhav Suryavanshi: ಸ್ಫೋಟಕ ಅರ್ಧಶತಕ: ತನ್ನದೇ ದಾಖಲೆ ಮುರಿದ ವೈಭವ್ ಸೂರ್ಯವಂಶಿ
ಇಲ್ಲಿದೆ ನೋಡಿ ವಿಡಿಯೋ
Ladies & Gentlemen
The moment the nation has been waiting for has arrived!
Vaibhav Sooryavanshi in #TeamIndia jersey. Witness this incredibly special moment ❤️ pic.twitter.com/sUUytFMPVw
— BCCI (@BCCI) June 23, 2026
ಈ ಸರಣಿಯಲ್ಲಿ ವೈಭವ್ ಸೂರ್ಯವಂಶಿ ಭಾರತದ ಪ್ಲೇಯಿಂಗ್ ಇಲೆವೆನ್‌ನಲ್ಲಿ (Playing XI) ಸ್ಥಾನ ಪಡೆದು ಕಣಕ್ಕಿಳಿದರೆ, ಕ್ರಿಕೆಟ್ ಇತಿಹಾಸದಲ್ಲೇ ಸುವರ್ಣ ಅಕ್ಷರಗಳಲ್ಲಿ ಹೊಸ ದಾಖಲೆ ಬರೆಯಲಿದ್ದಾರೆ. ಏಕೆಂದರೆ, ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಈವರೆಗೆ ಯಾವುದೇ ಆಟಗಾರ ಕೇವಲ 15ನೇ ವಯಸ್ಸಿನಲ್ಲಿ ಹಿರಿಯರ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದ ಉದಾಹರಣೆಯಿಲ್ಲ. ಈ ಮೂಲಕ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನೂ ಮೀರಿಸಿ, ಅತ್ಯಂತ ಕಿರಿಯ ವಯಸ್ಸಿನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ ಇತಿಹಾಸಕ್ಕೆ ವೈಭವ್ ಪಾತ್ರರಾಗಲಿದ್ದಾರೆ.
ಕ್ರಿಕೆಟ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

