Breaking News

WPL: ಗುಜರಾತ್‌ ಜೈಂಟ್ಸ್‌ ವಿರುದ್ಧ ಮುಂಬೈ ಇಂಡಿಯನ್ಸ್‌ಗೆ ಗೆಲುವು

WPL: Mumbai Indians win against Gujarat Giants

ನವಿ ಮುಂಬೈ: ಇಲ್ಲಿನ ಡಾ.ಡಿ.ವೈ. ಪಾಟೀಲ್‌ ಸ್ಪೋರ್ಟ್ಸ್‌ ಅಕಾಡೆಮಿ ಕ್ರೀಡಾಂಗಣದಲ್ಲಿ ಜ.13 ರಂದು ನಡೆದ ಮಹಿಳಾ ಪ್ರೀಮಿಯರ್‌ ಲೀಗ್‌ (ಡಬ್ಲ್ಯುಪಿಎಲ್)‌ ಪಂದ್ಯದಲ್ಲಿ ಗುಜರಾತ್‌ ಜೈಂಟ್ಸ್‌ ವಿರುದ್ಧ ಮುಂಬೈ ಇಂಡಿಯನ್ಸ್‌ ತಂಡವು 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ.

ಟಾಸ್‌ ಸೋತು ಬ್ಯಾಟಿಂಗ್‌ ಮಾಡಿದ ಗುಜರಾತ್‌ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 192 ರನ್‌ ಬಾರಿಸಿತು. ತಂಡದ ಪರ ಬೆತ್‌ ಮೂನಿ 33 ರನ್‌, ಸೋಫಿ ಡಿವೈನ್‌ 8, ಕನಿಕ ಅಹುಜ 35, ಅಶ್ಲೀ ಗಾರ್ಡ್ನರ್‌ 20, ಜಾರ್ಜಿಯಾ ವೇರ್‌ಹ್ಯಾಮ್‌ 43, ಆಯುಷಿ ಸೋನಿ 11 ಭಾರ್ತಿ ಫುಲ್ಮಾಲಿ 36 ರನ್‌ ಬಾರಿಸಿದರು. ಮುಂಬೈ ಪರ ಅಮೆಲಿಯಾ ಕೆರ್‌, ಶಬ್ನಿಮ್‌ ಇಸ್ಮಾಯಿಲ್‌, ಹೇಲಿ ಮ್ಯಾಥ್ಯೂಸ್‌, ನಿಕೋಲಾ ಕ್ಯಾರಿ ತಲಾ ಒಂದೊಂದು ವಿಕೆಟ್‌ ಪಡೆದರು.

Advertisement

ಇದನ್ನೂ ಓದಿ: WPL: ಯುಪಿ ವಾರಿಯರ್ಸ್ ವಿರುದ್ಧ ಆರ್‌ಸಿಬಿಗೆ ಗೆಲುವು

ಜೈಂಟ್ಸ್‌ ನೀಡಿದ 193 ರನ್‌ಗಳ ಗೆಲುವಿನ ಗುರಿ ಬೆನ್ನಟಿದ ಮುಂಬೈ, 19.2 ಓವರ್‌ಗಳಲ್ಲಿ 3 ವಿಕೆಟ್‌ ಕಳೆದುಕೊಂಡು 193 ರನ್‌ ಬಾರಿಸಿ ಗೆಲುವಿನ ನಗೆ ಬೀರಿತು. ತಂಡದ ಪರ ಹರ್ಮನ್‌ಪ್ರೀತ್‌ ಕೌರ್‌ 71 (ಅಜೇಯ) ರನ್ ಬಾರಿಸಿದರು. ಇನ್ನುಳಿದಂತೆ, ಗುಣಲನ್‌ ಕಮಲಿನಿ 13, ಹೇಲಿ ಮ್ಯಾಥ್ಯೂಸ್‌ 22, ಅಮನ್‌ಜೋತ್‌ ಕೌರ್‌ 40, ನಿಕೋಲಾ ಕ್ಯಾರಿ 38 (ಅಜೇಯ)‌ ಗಳಿಸಿದರು. ಜೈಂಟ್ಸ್‌ ಪರ ರೇಣುಕಾ ಸಿಂಗ್‌, ಕಾಶ್ವಿ ಗೌತಮ್‌, ಸೋಫಿ ಡಿವೈನ್‌ ತಲಾ ಒಂದು ವಿಕೆಟ್‌ ಪಡೆದರು.

ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು