ಶನಿವಾರದ ಶಾಲಾ ವೇಳಾಪಟ್ಟಿಯಲ್ಲಿ ಮಹತ್ವದ ಬದಲಾವಣೆ; ಇನ್ಮುಂದೆ ರಾಜ್ಯಾದ್ಯಂತ ಏಕರೂಪದ ಸಮಯ!

ಬೆಂಗಳೂರು: ರಾಜ್ಯದ ಶಾಲಾ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರಿಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು (Department of School Education and Literacy) ಭರ್ಜರಿ ರಿಲೀಫ್ ನೀಡಿದೆ. ರಾಜ್ಯದ ಎಲ್ಲಾ ಶಾಲೆಗಳಲ್ಲಿ ಶನಿವಾರದ ಶಾಲಾ ಅವಧಿಯನ್ನು ಏಕರೂಪಗೊಳಿಸಿ (Uniform Timings) ಸರ್ಕಾರ ಮಹತ್ವದ ಆದೇಶ ಹೊರಡಿಸಿದ್ದು, ಇನ್ಮುಂದೆ ರಾಜ್ಯಾದ್ಯಂತ ಎಲ್ಲಾ ಶಾಲೆಗಳು ಶನಿವಾರದಂದು ಬೆಳಗ್ಗೆ 8:30 ರಿಂದ ಮಧ್ಯಾಹ್ನ 12:30 ರವರೆಗೆ ಮಾತ್ರ ಕಾರ್ಯನಿರ್ವಹಿಸಲಿವೆ.

ಈ ಹೊಸ ನಿಯಮವು ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳಿಗೆ ಕಡ್ಡಾಯವಾಗಿ ಅನ್ವಯವಾಗಲಿದ್ದು, ಈ ಅವಧಿಯಲ್ಲಿ ಒಟ್ಟು 4 ಗಂಟೆಗಳ ಕಾಲ ಮಾತ್ರ ತರಗತಿಗಳನ್ನು ನಡೆಸಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

Advertisement

ಹಲವು ವರ್ಷಗಳ ಗೊಂದಲಕ್ಕೆ ಬಿದ್ದಿತು ತೆರೆ!

ಇದುವರೆಗೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಮತ್ತು ಪ್ರದೇಶಗಳಲ್ಲಿ ಶನಿವಾರದ ಶಾಲಾ ಅವಧಿಯು ವಿಭಿನ್ನವಾಗಿತ್ತು.

ಕೆಲವು ಜಿಲ್ಲೆಗಳಲ್ಲಿ ಬೆಳಗ್ಗೆ 7:30 ರಿಂದ 11:30 ರವರೆಗೆ ತರಗತಿಗಳು ನಡೆಯುತ್ತಿದ್ದವು.

ಇನ್ನು ಕೆಲವು ಕಡೆ ಬೆಳಗ್ಗೆ 8:00 ರಿಂದ ಮಧ್ಯಾಹ್ನ 12:00 ಗಂಟೆಯವರೆಗೆ ಶಾಲೆಗಳಿದ್ದವು.

ಪ್ರದೇಶದಿಂದ ಪ್ರದೇಶಕ್ಕೆ ಇದ್ದ ಈ ಸಮಯದ ಭಿನ್ನತೆಯಿಂದಾಗಿ, ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವ ಸಮಯದಲ್ಲಿ ತೀವ್ರ ಗೊಂದಲ ಎದುರಿಸುತ್ತಿದ್ದರು. ವಿಶೇಷವಾಗಿ ಕೆಲಸಕ್ಕೆ ಹೋಗುವ ಪೋಷಕರಿಗೆ ವಾಹನ ವ್ಯವಸ್ಥೆ ಕಲ್ಪಿಸಲು ತೊಂದರೆಯಾಗುತ್ತಿತ್ತು. ಈಗ ಇಲಾಖೆಯು ಈ ಎಲ್ಲಾ ಗೊಂದಲಗಳಿಗೆ ಮುಕ್ತಾಯ ಹಾಡಿದ್ದು, ಇಡೀ ರಾಜ್ಯಕ್ಕೆ ಒಂದೇ ಸಮಯವನ್ನು ನಿಗದಿಪಡಿಸಿದೆ.

ಇದನ್ನೂ ಓದಿ: 9ನೇ ತರಗತಿ ಸಮಾಜ ವಿಜ್ಞಾನ ಪುಸ್ತಕದಲ್ಲಿ ‘SIR’ ವಿಷಯ ಸೇರ್ಪಡೆ; ರಾಜಕೀಯ ಜಟಾಪಟಿ ನಡುವೆ ತಜ್ಞರ ನಿರ್ಧಾರ

ಬೆಳ್ಳಂಬೆಳಗ್ಗೆ ಏಳುವ ಅವಸರ ತಪ್ಪಿದಂತಾಯ್ತು!

ಸರ್ಕಾರದ ಈ ಹೊಸ ನಿರ್ಧಾರದಿಂದಾಗಿ ವಿದ್ಯಾರ್ಥಿಗಳು ಇನ್ಮುಂದೆ ಶನಿವಾರದ ದಿನದಂದು ಬೆಳ್ಳಂಬೆಳಗ್ಗೆ (7:30 ಕ್ಕೆ) ಶಾಲೆಗೆ ಓಡುವ ಅವಸರ ತಪ್ಪಿದಂತಾಗಿದೆ. ಪೋಷಕರಿಗೂ ಸಹ ನಿಗದಿತ ಸಮಯದ ಕುರಿತು ಸ್ಪಷ್ಟತೆ ಸಿಕ್ಕಿರುವುದರಿಂದ ಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಶಿಕ್ಷಕರಿಗೂ ಸಹ ಶೈಕ್ಷಣಿಕ ಚಟುವಟಿಕೆಗಳನ್ನು ಯೋಜಿಸಲು ಈ ಏಕರೂಪದ ವೇಳಾಪಟ್ಟಿ ಸಹಕಾರಿಯಾಗಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *