ಸ್ಯಾಂಡಲ್‌ವುಡ್‌ನಲ್ಲೇ ಅತ್ಯಂತ ದುಬಾರಿ ಕ್ಯಾರವನ್ ಒಡೆಯನಾದ ಕಿಚ್ಚ ಸುದೀಪ್

ಬೆಂಗಳೂರು: ಕನ್ನಡ ಚಿತ್ರರಂಗದ ಹೆಮ್ಮೆಯ ನಟ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಕಾರು ಹಾಗೂ ಗ್ಯಾಜೆಟ್‌ಗಳ ಕ್ರೇಜ್ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಇದೀಗ ಸುದೀಪ್ ಅವರ ರಾಜ ಗಾಂಭೀರ್ಯಕ್ಕೆ ತಕ್ಕಂತೆ, ಅವರಿಗಾಗಿ ಪ್ರತ್ಯೇಕವಾಗಿ ವಿನ್ಯಾಸಗೊಳಿಸಲಾದ ಅತ್ಯಾಧುನಿಕ ಹಾಗೂ ಅಲ್ಟ್ರಾ-ಲಕ್ಸುರಿ ಕ್ಯಾರವನ್ (Caravan) ಒಂದು ಸಿದ್ಧವಾಗಿ ಬಂದಿದೆ. ಸದ್ಯ ಇಡೀ ಸ್ಯಾಂಡಲ್‌ವುಡ್ ಚಿತ್ರರಂಗದಲ್ಲೇ ಅತ್ಯಂತ ದುಬಾರಿ ಹಾಗೂ ಹೈಟೆಕ್ ಸೌಲಭ್ಯಗಳನ್ನು ಹೊಂದಿರುವ ಕ್ಯಾರವನ್ ಇದಾಗಿದೆ ಎಂದು ಹೇಳಲಾಗುತ್ತಿದ್ದು, ಇದರ ಒಟ್ಟು ಬೆಲೆ ಬರೋಬ್ಬರಿ ಸುಮಾರು 6.5 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.

ಭಾರತದ ಜಗತ್ಪ್ರಸಿದ್ಧ ಕಾರ್ ಡಿಸೈನರ್ ದಿಲೀಪ್ ಛಾಬ್ರಿಯಾ ಒಡೆತನದ ಪ್ರತಿಷ್ಠಿತ ‘DC2’ ಸಂಸ್ಥೆಯು ಈ ಕ್ಯಾರವನ್ ಅನ್ನು ಅತ್ಯಂತ ಕಲಾತ್ಮಕವಾಗಿ ರೂಪಿಸಿದೆ. ಸುದೀಪ್ ಅವರ ಫಿಟ್‌ನೆಸ್ ಕಾಳಜಿ ಮತ್ತು ಶೂಟಿಂಗ್ ಸೆಟ್‌ಗಳಲ್ಲಿನ ವೈಯಕ್ತಿಕ ಇಷ್ಟಗಳನ್ನು ಗಮನದಲ್ಲಿಟ್ಟುಕೊಂಡು ಇದನ್ನು ವಿಶೇಷವಾಗಿ ‘ಜಿಮ್ ಮಾಡ್ಯುಲರ್’ ಮಾದರಿಯಲ್ಲಿ ಕಸ್ಟಮೈಸ್ ಮಾಡಲಾಗಿದೆ. ಮಹಾರಾಷ್ಟ್ರದ ಪುಣೆಯಲ್ಲಿರುವ ಡಿಸಿ ವರ್ಕ್‌ಶಾಪ್‌ನಲ್ಲಿ ಕಳೆದ ಕೆಲವು ತಿಂಗಳುಗಳಿಂದ ಈ ಕ್ಯಾರವನ್‌ನ ವಿನ್ಯಾಸ ಕಾರ್ಯ ಭರದಿಂದ ನಡೆದಿತ್ತು, ಈಗ ಅದು ಸಂಪೂರ್ಣವಾಗಿ ಸಿದ್ಧಗೊಂಡು ಸುದೀಪ್ ಅವರ ಕೈಸೇರಲು ಸಜ್ಜಾಗಿದೆ.

Advertisement

ಇಲ್ಲಿದೆ ನೋಡಿ ವಿಡಿಯೋ:

ಈ ಐಷಾರಾಮಿ ಕ್ಯಾರವನ್‌ನ ಹೊರಭಾಗದಲ್ಲಿ ನಟ ಕಿಚ್ಚ ಸುದೀಪ್ ಅವರ ಹೆಸರನ್ನು ಸೂಚಿಸುವ ಐಕಾನಿಕ್ ‘K’ ಎಂಬ ಸ್ಪೆಷಲ್ ಸಿಂಬಲ್ ಅನ್ನು ಕ್ರಿಯೇಟಿವ್ ಆಗಿ ವಿನ್ಯಾಸಗೊಳಿಸಲಾಗಿದೆ. ಸುದೀಪ್ ಅವರು ಈಗಾಗಲೇ ತಮ್ಮ ಐಷಾರಾಮಿ ಕಾರುಗಳ ಮೇಲೂ ಇದೇ ರೀತಿಯ ‘K’ ಲೋಗೋ ಹೊಂದಿದ್ದು, ಈಗ ಅದೇ ಲೋಗೋ ಮುದ್ರೆ ಹೊಸ ಕ್ಯಾರವನ್ ಮೇಲೂ ರಾರಾಜಿಸುತ್ತಿದೆ.

ಇದನ್ನೂ ಓದಿ: ಬೆಂಗಳೂರಲ್ಲಿ ನಟಿ ಕ್ರಿಷಿ ತಾಪಂಡ ಮನೆಯಲ್ಲಿ ಆಪ್ತ ಸ್ನೇಹಿತ ವೈಶಾಕ್ ಆತ್ಮಹತ್ಯೆ!

ಕ್ಯಾರವನ್ ಒಳಭಾಗವು ಪಂಚತಾರಾ ಹೋಟೆಲ್ ರೂಮ್‌ಗಿಂತಲೂ ಐಷಾರಾಮಿಯಾಗಿದ್ದು, ಅತ್ಯಾಧುನಿಕ ಮಿನಿ ಜಿಮ್, ವಿಶಾಲವಾದ ಮೇಕಪ್ ರೂಮ್, ಹೈಟೆಕ್ ಸೌಂಡ್ ಸಿಸ್ಟಮ್, ವಿಶ್ರಾಂತಿ ಕೊಠಡಿ ಸೇರಿದಂತೆ ಒಬ್ಬ ಸೂಪರ್‌ಸ್ಟಾರ್‌ಗೆ ಶೂಟಿಂಗ್ ಸೆಟ್‌ಗಳಲ್ಲಿ ಬೇಕಾಗುವ ಎಲ್ಲಾ ಹೈ-ಎಂಡ್ ಸೌಲಭ್ಯಗಳನ್ನು ಇದು ಒಳಗೊಂಡಿದೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಈ ಕ್ಯಾರವನ್‌ನ ವೀಡಿಯೋ ಮತ್ತು ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಕಿಚ್ಚನ ಅಭಿಮಾನಿಗಳು ಜೈಕಾರ ಹಾಕುತ್ತಿದ್ದಾರೆ.

ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *