ಟ್ರಂಟ್ ಬ್ರಿಡ್ಜ್‌ನಲ್ಲಿ ನಡೆದ ಮೂರನೇ ಟಿ20 ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡವು ಭಾರತವನ್ನು 125 ರನ್‌ಗಳ ಭಾರೀ ಅಂತರದಿಂದ ಮಣಿಸಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್ ತಂಡ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 201 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಆರಂಭಿಕ ಬ್ಯಾಟರ್ ಫಿಲ್ ಸಾಲ್ಟ್ 70 ರನ್‌ಗಳ ಸಿಡಿಲಬ್ಬರದ ಇನ್ನಿಂಗ್ಸ್ ಆಡಿದರೆ, ಸ್ಯಾಮ್ ಕರನ್ ಅಜೇಯ 41 ರನ್‌ಗಳ ಕೊಡುಗೆ ನೀಡಿದರು.

ಜೋಸ್ ಬಟ್ಲರ್ 36, ಹ್ಯಾರಿ ಬ್ರೂಕ್ 16, ಜಾಕೋಬ್ ಬೆಥೆಲ್ 13 ಹಾಗೂ ವಿಲ್ ಜ್ಯಾಕ್ಸ್ 14 ರನ್ ಗಳಿಸಿದರು. ಭಾರತದ ಪರ ಹರ್ಷಿತ್ ರಾಣಾ ಮತ್ತು ಪ್ರಿನ್ಸ್ ಯಾದವ್ ತಲಾ 2 ವಿಕೆಟ್ ಪಡೆದರೆ, ಅಕ್ಷರ್ ಪಟೇಲ್ 1 ವಿಕೆಟ್ ಕಬಳಿಸಿದರು.
ಇದನ್ನೂ ಓದಿ: ಇಂಡಿಯಾ ವಿರುದ್ಧ ಇಂಗ್ಲೆಂಡ್‌ಗೆ ಭರ್ಜರಿ ಜಯ: ಜೇಕಬ್ ಬೆಥೆಲ್ ಸ್ಫೋಟಕ ಬ್ಯಾಟಿಂಗ್, ಭಾರತಕ್ಕೆ 4 ವಿಕೆಟ್‌ಗಳ ಸೋಲು
202 ರನ್‌ಗಳ ಕಠಿಣ ಗುರಿ ಬೆನ್ನಟ್ಟಿದ ಭಾರತ ಆರಂಭದಿಂದಲೇ ಕುಸಿತ ಕಂಡಿತು. ಇಂಗ್ಲೆಂಡ್ ಬೌಲರ್‌ಗಳ ಶಿಸ್ತುಬದ್ಧ ದಾಳಿಗೆ ತತ್ತರಿಸಿದ ಭಾರತ ಕೇವಲ 11.4 ಓವರ್‌ಗಳಲ್ಲಿ 76 ರನ್‌ಗಳಿಗೆ ಆಲೌಟ್ ಆಯಿತು.
ಅಭಿಷೇಕ್ ಶರ್ಮಾ 10, ವೈಭವ್ ಸೂರ್ಯವಂಶಿ 13, ಇಶಾನ್ ಕಿಶನ್ 5, ಅಕ್ಷರ್ ಪಟೇಲ್ 10, ತಿಲಕ್ ವರ್ಮಾ 3, ಶಿವಂ ದುಬೆ 2, ಹರ್ಷಿತ್ ರಾಣಾ 9, ಅರ್ಶದೀಪ್ ಸಿಂಗ್ 4, ವರುಣ್ ಚಕ್ರವರ್ತಿ 5 ರನ್ ಗಳಿಸಿದರು. ಪ್ರಿನ್ಸ್ ಯಾದವ್ 2 ರನ್‌ಗಳೊಂದಿಗೆ ಅಜೇಯರಾಗಿ ಉಳಿದರು.
ಇಂಗ್ಲೆಂಡ್ ಪರ ಜೋಶ್ ಟಂಗ್ 4 ವಿಕೆಟ್ ಪಡೆದು ಭಾರತದ ಬ್ಯಾಟಿಂಗ್ ಬೆನ್ನೆಲುಬು ಮುರಿದರೆ, ಜೋಫ್ರಾ ಆರ್ಚರ್ 3, ಆದಿಲ್ ರಶೀದ್ 2 ಹಾಗೂ ವಿಲ್ ಜ್ಯಾಕ್ಸ್ 1 ವಿಕೆಟ್ ಪಡೆದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

