ಐಪಿಎಸ್ ಅಧಿಕಾರಿ ಬಿ. ದಯಾನಂದಗೆ ಬಿಗ್ ರಿಲೀಫ್: ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಪ್ರಕರಣದ ಇಲಾಖಾ ತನಿಖೆ ಕೈಬಿಟ್ಟ ಸರ್ಕಾರ

ಬೆಂಗಳೂರು: ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಐಪಿಎಸ್ (IPS) ಅಧಿಕಾರಿ ಬಿ. ದಯಾನಂದ ಅವರಿಗೆ ದೊಡ್ಡ ನಿರಾಳತೆ ದೊರೆತಿದೆ. ಬಿ. ದಯಾನಂದ ಅವರ ವಿರುದ್ಧ ಇಲಾಖಾ ವಿಚಾರಣೆಯನ್ನು ಅಧಿಕೃತವಾಗಿ ಕೈಬಿಟ್ಟಿರುವ ಕರ್ನಾಟಕ ರಾಜ್ಯ ಸರ್ಕಾರ, ಅವರನ್ನು ಎಲ್ಲಾ ಆರೋಪಗಳಿಂದ ಮುಕ್ತಗೊಳಿಸಿ ಆದೇಶ ಹೊರಡಿಸಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಐಪಿಎಸ್ ಅಧಿಕಾರಿ ಬಿ. ದಯಾನಂದ ಅವರು 2025ರ ಸೆಪ್ಟೆಂಬರ್ 8ರಂದು ಸರ್ಕಾರಕ್ಕೆ ತಮ್ಮ ಲಿಖಿತ ಸಮರ್ಥನೆಯನ್ನು ಸಲ್ಲಿಸಿದ್ದರು.

ತಮ್ಮ ಲಿಖಿತ ಉತ್ತರದಲ್ಲಿ ಬಿ. ದಯಾನಂದ ಅವರು ತಮ್ಮ ವಿರುದ್ಧ ಹೊರಿಸಲಾಗಿದ್ದ ಎಲ್ಲಾ ಆರೋಪಗಳನ್ನು ಬಲವಾಗಿ ತಳ್ಳಿಹಾಕಿದ್ದರು ಹಾಗೂ ಇಲಾಖಾ ವಿಚಾರಣೆಯಿಂದ ತಮ್ಮನ್ನು ಮುಕ್ತಗೊಳಿಸುವಂತೆ ಸಕ್ಷಮ ಪ್ರಾಧಿಕಾರಕ್ಕೆ ಮನವಿ ಮಾಡಿಕೊಂಡಿದ್ದರು.

ಇದನ್ನೂ ಓದಿ:“ಅವರ ಬಳಿ ಹೋಗುವಾಗ‌ ಜಾಗ್ರತೆ”: ರೈ, ಖಾದರ್ ವಿರುದ್ಧ ಕುಕ್ಕೆ ದೇವಾಲಯ ಅಧ್ಯಕ್ಷರ ಮಾತು ವೈರಲ್, ಆಕ್ರೋಶ

ಹಿರಿಯ ಅಧಿಕಾರಿಯ ಲಿಖಿತ ಸಮರ್ಥನೆ ಮತ್ತು ಸಂಬಂಧಪಟ್ಟ ಆಡಳಿತ ಇಲಾಖೆ ಸಲ್ಲಿಸಿದ ವಿಸ್ತೃತ ಅಭಿಪ್ರಾಯಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ಸರ್ಕಾರದ ಸಕ್ಷಮ ಪ್ರಾಧಿಕಾರವು, ಇಲಾಖಾ ವಿಚಾರಣೆಯನ್ನು ಸಂಪೂರ್ಣವಾಗಿ ಕೈಬಿಡಲು ತೀರ್ಮಾನಿಸಿ ಅಧಿಕೃತ ಕ್ಲೀನ್ ಚೀಟ್ ನೀಡಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *