ಬುಧವಾರ ಚಿನ್ನದ ದರದಲ್ಲಿ ಜಿಗಿತ, ಬೆಳ್ಳಿ ಬೆಲೆಯಲ್ಲಿ ಸ್ಥಿರತೆ

ದೆಹಲಿ: ಕಳೆದ ಎರಡು ದಿನಗಳಲ್ಲಿ ಪ್ರತಿ ಗ್ರಾಂಗೆ 140 ರೂಪಾಯಿಗಳಷ್ಟು ಭಾರಿ ಇಳಿಕೆ ಕಂಡಿದ್ದ ಹಳದಿ ಲೋಹದ ಬೆಲೆ, ಇಂದು ಬುಧವಾರದ ವಹಿವಾಟಿನಲ್ಲಿ ಮತ್ತೆ ಚೇತರಿಸಿಕೊಂಡಿದ್ದು ಗ್ರಾಂಗೆ 70 ರೂಪಾಯಿಗಳಷ್ಟು ಏರಿಕೆಯಾಗಿದೆ. ಆದಾಗ್ಯೂ, ಕಳೆದ ಎರಡು ವಾರಗಳ ಒಟ್ಟಾರೆ ದರವನ್ನು ಗಮನಿಸಿದರೆ ಗ್ರಾಹಕರಿಗೆ ದೊಡ್ಡ ನಿರಾಳತೆ ಸಿಕ್ಕಿದ್ದು, ಚಿನ್ನದ ಬೆಲೆ ಸುಮಾರು 1,700 ರೂಪಾಯಿಗಳಷ್ಟು ಗಣನೀಯವಾಗಿ ಕಡಿತಗೊಂಡಿದೆ. ಮೇ ತಿಂಗಳ ಎರಡನೇ ವಾರದಲ್ಲಿ ಆಭರಣ ಚಿನ್ನದ ಬೆಲೆ ಗರಿಷ್ಠ 14,850 ರೂಪಾಯಿಗಳವರೆಗೂ ಏರಿಕೆಯಾಗಿ ದಾಖಲೆ ಬರೆದಿತ್ತು.

ಮತ್ತೊಂದೆಡೆ, ಕೈಗಾರಿಕಾ ವಲಯದಲ್ಲಿ ಅತಿ ಹೆಚ್ಚು ಬಳಕೆಯಾಗುವ ಬೆಳ್ಳಿ ದರದಲ್ಲಿ ಇಂದು ಯಾವುದೇ ಬದಲಾವಣೆ ಕಂಡುಬಂದಿಲ್ಲ. ದೇಶದಲ್ಲಿ ಸದ್ಯ 10 ಗ್ರಾಂ ತೂಕದ 22 ಕ್ಯಾರಟ್ ಆಭರಣ ಚಿನ್ನದ ಬೆಲೆ 1,30,900 ರೂಪಾಯಿ ತಲುಪಿದ್ದು, 24 ಕ್ಯಾರಟ್‌ನ ಅಪರಂಜಿ ಚಿನ್ನದ ಬೆಲೆ 1,42,800 ರೂಪಾಯಿ ಆಗಿದೆ. 100 ಗ್ರಾಂ ತೂಕದ ಬೆಳ್ಳಿಯ ಬೆಲೆ ಇವತ್ತು 23,500 ರೂಪಾಯಿ ತಲುಪಿದೆ. ತಮಿಳುನಾಡು ಹಾಗೂ ಕೇರಳದ ಕೆಲವೊಂದು ಭಾಗಗಳಲ್ಲಿ ಬೆಳ್ಳಿ ದರವು ಗರಿಷ್ಠ 24,000 ರೂಪಾಯಿಗಳವರೆಗೂ ವಹಿವಾಟು ನಡೆಸುತ್ತಿದೆ.

ಬೆಂಗಳೂರಿನಲ್ಲೂ ಸಹ ಚಿನ್ನ ಹಾಗೂ ಬೆಳ್ಳಿಯ ದರವು ರಾಷ್ಟ್ರೀಯ ದರಕ್ಕೆ ಪೂರಕವಾಗಿದ್ದು, 10 ಗ್ರಾಂ ಆಭರಣ ಚಿನ್ನದ ಬೆಲೆ 1,30,900 ರೂಪಾಯಿ ಹಾಗೂ 100 ಗ್ರಾಂ ಬೆಳ್ಳಿಯ ಬೆಲೆ 23,500 ರೂಪಾಯಿ ಇದೆ.

ಇದನ್ನೂ ಓದಿ: ಆನ್‌ಲೈನ್ ವಂಚನೆಗೆ ಒಳಗಾದವರಿಗೆ ಆರ್‌ಬಿಐ ಭರ್ಜರಿ ರಿಲೀಫ್!: ಇನ್ಮುಂದೆ ನಷ್ಟದ ಶೇ. 85 ರಷ್ಟು ಹಣ ವಾಪಸ್; ಹೊಸ ರೂಲ್ಸ್ ಜಾರಿ

ದೇಶದ ವಿವಿಧ ಪ್ರಮುಖ ನಗರಗಳಲ್ಲಿರುವ 22 ಕ್ಯಾರಟ್ ಆಭರಣ ಚಿನ್ನದ ದರ (ಪ್ರತಿ 1 ಗ್ರಾಂಗೆ):
ಬೆಂಗಳೂರು: 13,160 ರೂ

ಚೆನ್ನೈ: 13,180 ರೂ

ದೆಹಲಿ: 13,175 ರೂ

ಲಕ್ನೋ: 13,175 ರೂ

ಜೈಪುರ್: 13,175 ರೂ

ಅಹ್ಮದಾಬಾದ್: 13,165 ರೂ

ಮುಂಬೈ: 13,160 ರೂ

ಕೋಲ್ಕತಾ: 13,160 ರೂ

ಕೇರಳ: 13,160 ರೂ

ಭುವನೇಶ್ವರ್: 13,160 ರೂ

ವಿದೇಶ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *