‘ಹಿಟ್‌ಮ್ಯಾನ್’ ಕ್ರಿಕೆಟ್ ಯುಗಾಂತ್ಯಕ್ಕೆ ಕೌಂಟ್‌ಡೌನ್? ಜುಲೈ 19ರ ಪಂದ್ಯವೇ ರೋಹಿತ್ ಶರ್ಮಾ ಕೊನೆಯ ODI?

ಲಂಡನ್: ಭಾರತ ಕ್ರಿಕೆಟ್ ತಂಡದ ಹಿರಿಯ ಆರಂಭಿಕ ಆಟಗಾರ ಹಾಗೂ ಮಾಜಿ ನಾಯಕ ರೋಹಿತ್ ಶರ್ಮಾ ಅವರ ಏಕದಿನ ಕ್ರಿಕೆಟ್ ಭವಿಷ್ಯದ ಮೇಲಿದ್ದ ಅನುಮಾನದ ಮೋಡಗಳು ಈಗ ಮತ್ತಷ್ಟು ದಟ್ಟವಾಗಿವೆ. ಇಂಗ್ಲೆಂಡ್ ವಿರುದ್ಧ ಗುರುವಾರ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಕೇವಲ 26 ರನ್ ಗಳಿಸಿ ಔಟಾದ ಬೆನ್ನಲ್ಲೇ, ಅವರ ಕ್ರಿಕೆಟ್ ಕೆರಿಯರ್ ಕುರಿತು ದೊಡ್ಡ ಮಟ್ಟದ ಚರ್ಚೆ ಆರಂಭವಾಗಿದೆ. 2027ರ ಏಕದಿನ ವಿಶ್ವಕಪ್‌ಗೆ (2027 ODI World Cup) ಟೀಮ್ ಇಂಡಿಯಾ ಈಗಿನಿಂದಲೇ ಹೊಸ ಪ್ಲಾನ್ ರೂಪಿಸುತ್ತಿರುವುದರಿಂದ, 39 ವರ್ಷದ ರೋಹಿತ್ ಶರ್ಮಾ ಅವರನ್ನು ಮುಂದಿನ ದಿನಗಳಲ್ಲಿ ತಂಡಕ್ಕೆ ಪರಿಗಣಿಸದಿರಲು ಆಯ್ಕೆ ಮಂಡಳಿ ನಿರ್ಧರಿಸಿದೆ ಎಂದು ತಿಳಿದುಬಂದಿದೆ.

ಇಂಗ್ಲೆಂಡ್ ಪ್ರವಾಸದಲ್ಲಿ ರೋಹಿತ್ ಅವರ ಬ್ಯಾಟಿಂಗ್ ಅಷ್ಟೇನೂ ಲಯಬದ್ಧವಾಗಿ ಕಂಡುಬಂದಿಲ್ಲ. ಮೊದಲ ಏಕದಿನ ಪಂದ್ಯದಲ್ಲಿ 11 ರನ್ ಗಳಿಸಿದ್ದ ಅವರು, ಎರಡನೇ ಪಂದ್ಯದಲ್ಲಿ ಸಾಕಷ್ಟು ಪ್ರಯಾಸಪಟ್ಟು 47 ಎಸೆತಗಳಲ್ಲಿ 26 ರನ್ ಗಳಿಸಿದರು. ಕಳೆದ 8 ಏಕದಿನ ಪಂದ್ಯಗಳಲ್ಲಿ ರೋಹಿತ್ ಕೇವಲ 30.1 ರೇಟಿಂಗ್ ಸರಾಸರಿಯಲ್ಲಿ 241 ರನ್‌ಗಳನ್ನಷ್ಟೇ ಗಳಿಸಿದ್ದಾರೆ.

ಇಂಗ್ಲೆಂಡ್ ಪ್ರವಾಸದಲ್ಲಿ ರೋಹಿತ್ ಅವರ ಬ್ಯಾಟಿಂಗ್ ಅಷ್ಟೇನೂ ಲಯಬದ್ಧವಾಗಿ ಕಂಡುಬಂದಿಲ್ಲ. ಮೊದಲ ಏಕದಿನ ಪಂದ್ಯದಲ್ಲಿ 11 ರನ್ ಗಳಿಸಿದ್ದ ಅವರು, ಎರಡನೇ ಪಂದ್ಯದಲ್ಲಿ ಸಾಕಷ್ಟು ಪ್ರಯಾಸಪಟ್ಟು 47 ಎಸೆತಗಳಲ್ಲಿ 26 ರನ್ ಗಳಿಸಿದರು. ಕಳೆದ 8 ಏಕದಿನ ಪಂದ್ಯಗಳಲ್ಲಿ ರೋಹಿತ್ ಕೇವಲ 30.1 ರೇಟಿಂಗ್ ಸರಾಸರಿಯಲ್ಲಿ 241 ರನ್‌ಗಳನ್ನಷ್ಟೇ ಗಳಿಸಿದ್ದಾರೆ.

ಪ್ರಖ್ಯಾತ ಸುದ್ದಿ ಸಂಸ್ಥೆ ಪಿಟಿಐ (PTI) ಬಿಡುಗಡೆ ಮಾಡಿರುವ ವರದಿಯ ಪ್ರಕಾರ, ಜುಲೈ 19 ರಂದು ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯಲಿರುವ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯವೇ ರೋಹಿತ್ ಶರ್ಮಾ ಅವರ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್ ಬದುಕಿನ ಕೊನೆಯ ಪಂದ್ಯವಾಗುವ ಎಲ್ಲಾ ಸಾಧ್ಯತೆಗಳಿವೆ.

ಭಾರತ ತಂಡದ ಉದಯೋನ್ಮುಖ ಯುವ ಆಟಗಾರ ಯಶಸ್ವಿ ಜೈಸ್ವಾಲ್ ಸದ್ಯ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಮೂರು ಇನಿಂಗ್ಸ್‌ಗಳಲ್ಲಿ ಭರ್ಜರಿ ಎರಡು ಶತಕ ಸಿಡಿಸಿ ಮಿಂಚಿರುವ ಜೈಸ್ವಾಲ್‌ಗೆ ಸುದೀರ್ಘ ಅವಕಾಶ ನೀಡಲು ಆಯ್ಕೆ ಸಮಿತಿ ಉತ್ಸುಕವಾಗಿದೆ.

“ಮುಂದಿನ ದಿನಗಳಲ್ಲಿ ಜೈಸ್ವಾಲ್‌ಗೆ ಕನಿಷ್ಠ 20 ಏಕದಿನ ಪಂದ್ಯಗಳನ್ನಾದರೂ ಆಡಲು ನೀಡಬೇಕಿದೆ. ರೋಹಿತ್ ಅವರಿಗೆ ಯಾರೂ ಬಲವಂತವಾಗಿ ನಿವೃತ್ತಿ ಘೋಷಿಸಲು ಹೇಳಲು ಸಾಧ್ಯವಿಲ್ಲ. ಆದರೆ, ಬರುವ ಸೆಪ್ಟೆಂಬರ್ ತಿಂಗಳಿನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆಯಲಿರುವ ತವರು ಸರಣಿಯಿಂದ ಯುವ ಆಟಗಾರರೊಂದಿಗೆ ಮುನ್ನಡೆಯಲು ಸೆಲೆಕ್ಟರ್ಸ್ ನಿರ್ಧರಿಸಿದ್ದಾರೆ. ತಮ್ಮ ಭವಿಷ್ಯದ ಬಗ್ಗೆ ರೋಹಿತ್ ಅವರೇ ಸ್ವತಃ ಅಂತಿಮ ತೀರ್ಮಾನ ಕೈಗೊಳ್ಳಬೇಕಿದೆ,” ಎಂದು ಬಿಸಿಸಿಐನ ಹಿರಿಯ ಮೂಲಗಳು ತಿಳಿಸಿವೆ.

ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಮತ್ತು ಹೆಡ್ ಕೋಚ್ ಗೌತಮ್ ಗಂಭೀರ್ ಅವರು ಮುಂದಿನ ವರ್ಷದ ಏಕದಿನ ವಿಶ್ವಕಪ್‌ಗೆ ರೋಹಿತ್ ಶರ್ಮಾ ಅವರನ್ನು ತಂಡದಲ್ಲಿ ಮುಂದುವರಿಸದಿರಲು ಒಮ್ಮತದ ತೀರ್ಮಾನಕ್ಕೆ ಬಂದಿದ್ದಾರೆ ಎನ್ನಲಾಗಿದೆ.

ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ, ಬಿಸಿಸಿಐ ಆಯ್ಕೆಗಾರರು ಈಗಾಗಲೇ ರೋಹಿತ್ ಶರ್ಮಾಗೆ ಈ ಪ್ರವಾಸದ ನಂತರ ತಮ್ಮ ಯೋಜನೆಗಳಲ್ಲಿ ಅವರಿಗೆ ಜಾಗವಿಲ್ಲ ಎಂಬ ಮುನ್ಸೂಚನೆಯನ್ನು ಅಧಿಕೃತವಾಗಿ ನೀಡಿದ್ದಾರೆ. ರೋಹಿತ್ ಶರ್ಮಾ ಅವರು ತಮ್ಮ ಫಿಟ್‌ನೆಸ್ (Fitness) ಕಡೆಗೆ ಹೆಚ್ಚು ಗಮನ ಹರಿಸಿ ತಂಡದಲ್ಲಿ ಮುಂದುವರಿಯಲು ಇಷ್ಟಪಟ್ಟಿದ್ದರೂ, ಸೆಲೆಕ್ಟರ್ಸ್ ಮಾತ್ರ ಅವರ ಮುಂದಿನ ಹಾದಿಯನ್ನು ಅವರ ನಿರ್ಧಾರಕ್ಕೇ ಬಿಟ್ಟಿದ್ದಾರೆ. ಇಂಗ್ಲೆಂಡ್ ಸರಣಿಯ ವೇಳೆ ರೋಹಿತ್ ಬಿಸಿಸಿಐನ ಕೆಲವು ಪ್ರಮುಖ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದು, ಮಂಡಳಿಯ ಈ ನಿಲುವಿನ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: T20: ಬಟ್ಲರ್-ಬ್ರೂಕ್ ಅಬ್ಬರ: ಇಂಗ್ಲೆಂಡ್‌ಗೆ 56 ರನ್ ಜಯ; ಭಾರತಕ್ಕೆ ಗೆಲುವಿಲ್ಲದೆ ಸರಣಿ ಅಂತ್ಯ

ಕೊಹ್ಲಿಗೆ ಫುಲ್ ಸಪೋರ್ಟ್, ರೋಹಿತ್‌ಗೆ ಕೊಕ್; ಟೆಸ್ಟ್‌ನಲ್ಲೂ ಇತ್ತು ಭಿನ್ನಾಭಿಪ್ರಾಯ:

ಕೋಚ್ ಗೌತಮ್ ಗಂಭೀರ್ ಹಾಗೂ ಅಜಿತ್ ಅಗರ್ಕರ್ ಇಬ್ಬರೂ ವಿರಾಟ್ ಕೊಹ್ಲಿ ಅವರ ಪ್ರಸ್ತುತ ಫಾರ್ಮ್ ಮತ್ತು ಫಿಟ್‌ನೆಸ್ ನೋಡಿ ಅವರನ್ನು ತಂಡದ ಖಾಯಂ ಆಟಗಾರನಾಗಿ ಪರಿಗಣಿಸಿದ್ದಾರೆ. ಆದರೆ ರೋಹಿತ್ ವಿಷಯದಲ್ಲಿ ಈ ಒಮ್ಮತ ಮೂಡಿಬಂದಿಲ್ಲ. ರೋಹಿತ್ ಅವರನ್ನೇ ಮುಂದುವರಿಸಿದರೆ ಜೈಸ್ವಾಲ್ ಅವರಂತಹ ಯುವ ಪ್ರತಿಭೆಗಳಿಗೆ ಅಗತ್ಯವಿರುವ ಪಂದ್ಯಗಳ ಸಮಯ (Game Time) ಸಿಗುವುದಿಲ್ಲ ಎಂಬುದು ಮಂಡಳಿಯ ಸ್ಪಷ್ಟ ವಾದ.

ಈ ಹಿಂದೆ ರೋಹಿತ್ ಅವರ ಟೆಸ್ಟ್ ಕ್ರಿಕೆಟ್ ನಿವೃತ್ತಿಯ ವಿಷಯದಲ್ಲೂ ಆಯ್ಕೆ ಸಮಿತಿ ಮತ್ತು ರೋಹಿತ್ ನಡುವೆ ಭಿನ್ನಾಭಿಪ್ರಾಯವಿತ್ತು. ಇಂಗ್ಲೆಂಡ್ ವಿರುದ್ಧದ ಐದು ಟೆಸ್ಟ್‌ಗಳ ಪೈಕಿ ಕೇವಲ ಎರಡು ಪಂದ್ಯಗಳನ್ನು ಆಡಿ ರೋಹಿತ್ ನಿರ್ಧಾರ ಕೈಗೊಳ್ಳುವುದು ಸೆಲೆಕ್ಟರ್ಸ್‌ಗೆ ಇಷ್ಟವಿರಲಿಲ್ಲ. ಆದರೆ ರೋಹಿತ್ ಮಾತ್ರ ತಾವು ಇಡೀ ಸರಣಿಗೆ ಲಭ್ಯವಿರುವುದಾಗಿ ತಿಳಿಸಿದ್ದರು ಎನ್ನಲಾಗಿದೆ.

ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *