ಜೈಪುರ: ರಾಜಸ್ಥಾನದ ಟೋಂಕ್ ಜಿಲ್ಲೆಯ ತೋದಾರೈಸಿಂಗ್ ಪಟ್ಟಣದಲ್ಲಿ ಸೋಮವಾರದಂದು ಭೀತಿ ಮತ್ತು ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಜನನಿಬಿಡ ಪ್ರದೇಶದಲ್ಲಿ ಬಂದ ಚಿರತೆಯೊಂದು ಮದ್ಯದ ಅಂಗಡಿಯೊಳಗೆ (Liquor Shop) ನುಗ್ಗಿ ಇಬ್ಬರ ಮೇಲೆ ದಾಳಿ ನಡೆಸಿ ತೀವ್ರವಾಗಿ ಗಾಯಗೊಳಿಸಿದೆ. ಕೊನೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಚಿರತೆಯನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ (PTI) ವರದಿ ಮಾಡಿದೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಚಿರತೆಯು ಮೊದಲು ಮದ್ಯದ ಅಂಗಡಿಯ ಹೊರಗೆ ನಿಂತಿದ್ದ ವ್ಯಕ್ತಿಯೊಬ್ಬನ ಮೇಲೆ ಏಕಾಏಕಿ ದಾಳಿ ನಡೆಸಿದೆ. ಇದರಿಂದ ತಪ್ಪಿಸಿಕೊಂಡು ಚಿರತೆ ಓಡುತ್ತಿದ್ದಂತೆ, ನೇರವಾಗಿ ವೈನ್ ಶಾಪ್ ಒಳಗಡೆ ನುಗ್ಗಿದೆ. ಅಂಗಡಿಯೊಳಗೆ ನುಗ್ಗಿದ ಬಿಗ್ ಕ್ಯಾಟ್, ಅಲ್ಲಿ ಕೆಲಸ ಮಾಡುತ್ತಿದ್ದ ಸೇಲ್ಸ್‌ಮನ್ ಮೇಲೆ ಭೀಕರವಾಗಿ ದಾಳಿ ನಡೆಸಿ ಕಚ್ಚಿ ಗಾಯಗೊಳಿಸಿದೆ. ಈ ದೃಶ್ಯವನ್ನು ನೋಡಿ ಅಂಗಡಿಯಲ್ಲಿದ್ದ ಗ್ರಾಹಕರು ಹಾಗೂ ಸುತ್ತಮುತ್ತಲಿನ ಸಾರ್ವಜನಿಕರು ಭಯದಿಂದ ದಿಕ್ಕಾಪಾಲಾಗಿ ಓಡಿದ್ದಾರೆ. ಗಾಯಗೊಂಡ ಇಬ್ಬರನ್ನೂ ತಕ್ಷಣವೇ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಲ್ಲಿದ ನೋಡಿ ವಿಡಿಯೋ:
सुकून की तलाश में लेपर्ड भी पहुंच गया शराब के ठेके
टोंक जिले के टोडारायसिंह कस्बे में शनिवार सुबह एक लेपर्ड शराब की दुकान में घुस गया। दुकान के बाहर बैठे एक व्यक्ति पर हमला करने के बाद वह ठेके के अंदर घुस गया और वहां मौजूद सेल्समैन समेत कुल तीन लोगों को घायल कर दिया।
हमले के… pic.twitter.com/gg12CPHCaa— pankaj soni (@pankaj0506) July 20, 2026
ಘಟನೆಯ ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯ ಪೊಲೀಸರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ಅಷ್ಟರಲ್ಲೇ ಚಿರತೆಯನ್ನು ನೋಡಲು ಸಾವಿರಾರು ಜನರ ದಂಡು ಅಂಗಡಿಯ ಸುತ್ತಲೂ ಜಮಾಯಿಸಿತ್ತು. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಇಡೀ ಪ್ರದೇಶವನ್ನು ಸಾರ್ವಜನಿಕ ಮುಕ್ತ ವಲಯವನ್ನಾಗಿ (Cordoned off) ಮಾಡಿದರು.
ಬಳಿಕ ಚಿರತೆಗೆ ಅರಿವಳಿಕೆ ನಿಷ್ಕ್ರಿಯಗೊಳಿಸಲು ಜೈಪುರ ಮೃಗಾಲಯದಿಂದ ವಿಶೇಷ ರಕ್ಷಣಾ ತಂಡವನ್ನು ಕರೆಯಿಸಲಾಯಿತು. ಸ್ಥಳಕ್ಕೆ ಬಂದ ತಜ್ಞರ ತಂಡವು ಮದ್ಯದ ಅಂಗಡಿಯಲ್ಲಿದ್ದ ಸುಮಾರು 4 ರಿಂದ 5 ವರ್ಷ ಪ್ರಾಯದ ಚಿರತೆಗೆ ಯಶಸ್ವಿಯಾಗಿ ಅರಿವಳಿಕೆ ಇಂಜೆಕ್ಷನ್ ನೀಡಿ, ಅದನ್ನು ಸುರಕ್ಷಿತವಾಗಿ ಬೋನಿಗೆ ಹಾಕುವಲ್ಲಿ ಯಶಸ್ವಿಯಾಗಿದೆ.
ಇದನ್ನೂ ಓದಿ: ಮಗು ಕುಳಿತಿದ್ದ ಸ್ಟ್ರೋಲರ್‌ಗೆ ಒದ್ದ ವ್ಯಾಪಾರಿಗೆ ಯಮಲೋಕ ದರ್ಶನ ಮಾಡಿಸಿದ ತಂದೆ
ಚಿರತೆಯು ಹಠಾತ್ತನೆ ಪಟ್ಟಣದೊಳಗೆ ನುಗ್ಗಿದ್ದು ಮತ್ತು ಮದ್ಯದ ಅಂಗಡಿಯ ಒಳಗೆ ನುಗ್ಗಿ ಜನರನ್ನು ಅಟ್ಯಾಕ್ ಮಾಡಿದ ಕಂಪ್ಲೀಟ್ ದೃಶ್ಯಗಳು ವೈನ್ ಶಾಪ್‌ನ ಸಿಸಿಟಿವಿ ಕ್ಯಾಮೆರಾಗಳಲ್ಲಿ ಲೈವ್ ಆಗಿ ಸೆರೆಯಾಗಿವೆ. ಕಾಡಿನಿಂದ ಈ ವನ್ಯಮೃಗವು ಪಟ್ಟಣದ ವಸತಿ ಪ್ರದೇಶಕ್ಕೆ ಹೇಗೆ ಬಂದಿತು ಎಂಬುದರ ಕುರಿತು ಅರಣ್ಯ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

