ಮೇಷ ರಾಶಿ (Aries)
ನಿಮ್ಮ ಸಂಗಾತಿಯು ಇಂದು ನಿಮ್ಮ ಬಗ್ಗೆ ಅತ್ಯಂತ ಸಕಾರಾತ್ಮಕ ಮತ್ತು ಉತ್ತಮ ಮನೋಭಾವವನ್ನು ಹೊಂದಿರಲಿದ್ದಾರೆ. ಹೊಸದಾಗಿ ವಾಹನ ಖರೀದಿ ಮಾಡುವ ನಿಮ್ಮ ಉತ್ಸಾಹ ಹೆಚ್ಚಾಗಲಿದೆ. ದೀರ್ಘಕಾಲದಿಂದ ಕಾಡುತ್ತಿದ್ದ ಅನಾರೋಗ್ಯದ ಸಮಸ್ಯೆಯಿಂದ ಇಂದು ಮುಕ್ತಿ ಪಡೆಯಲಿದ್ದೀರಿ. ಎದುರಾಗುವ ಸವಾಲುಗಳನ್ನು ಗಂಭೀರವಾಗಿ ಪರಿಗಣಿಸಿ ಪರಿಹರಿಸಿಕೊಳ್ಳುವಿರಿ. ದಿನದ ಕೊನೆಯಲ್ಲಿ ಸಂಗಾತಿಯಿಂದ ಅಚ್ಚರಿಯ ಉಡುಗೊರೆಯೊಂದು ಸಿಗಲಿದ್ದು, ನಿಮ್ಮ ಸಂತೋಷ ದ್ವಿಗುಣಗೊಳ್ಳಲಿದೆ. ಆದರೆ, ಮನೆಯ ಶುಭ ಸಮಾರಂಭವೊಂದರಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದೆ ನಿರಾಶೆ ಮೂಡಬಹುದು.
ವೃಷಭ ರಾಶಿ (Taurus)
ಹೊಸ ಮನೆಯನ್ನು ಖರೀದಿಸಲು ಅಥವಾ ಹುಡುಕಾಟ ನಡೆಸಲು ಇಂದು ಸೂಕ್ತ ದಿನ. ನಿಮ್ಮ ಸೌಂದರ್ಯದ ಬಗ್ಗೆ ನಿಮ್ಮಲ್ಲೇ ಒಂದು ರೀತಿಯ ಹಮ್ಮು ಇರಲಿದೆ. ಸಾಲ ಕೊಟ್ಟವರಿಂದ ಹಣದ ವಸೂಲಾತಿಗಾಗಿ ಒತ್ತಡ ಹೆಚ್ಚಾಗಲಿದ್ದು, ಇದರಿಂದ ಕೊಂಚ ಹತಾಶರಾಗುವಿರಿ. ಹಳೆಯ ಪರಿಚಿತರ ಭೇಟಿಯಾಗಲಿದ್ದು, ಆ ಸ್ನೇಹ ಮತ್ತಷ್ಟು ಆತ್ಮೀಯವಾಗಲಿದೆ. ಕುಟುಂಬದ ಪ್ರಮುಖ ಜವಾಬ್ದಾರಿಯನ್ನು ನಿರ್ವಹಿಸುವ ಹೊಣೆಗಾರಿಕೆ ನಿಮ್ಮ ಹೆಗಲೇರಲಿದೆ. ಅತಿಯಾದ ನಿಯಂತ್ರಣ ಅಥವಾ ಬಂಧನ ನಿಮಗೆ ಕಿರಿಕಿರಿ ಎನಿಸಬಹುದು. ಇಂದು ಸ್ನೇಹಿತರ ಹಠಾತ್ ಆಗಮನ ದಿನವನ್ನು ಆನಂದಮಯವಾಗಿಸಲಿದೆ.
ಮಿಥುನ ರಾಶಿ (Gemini)
ಸುತ್ತಮುತ್ತಲಿನವರು ನಿಮ್ಮನ್ನು ತಾತ್ಸಾರ ಮಾಡುತ್ತಿದ್ದಾರೆ ಎಂಬ ನಕಾರಾತ್ಮಕ ಭಾವನೆ ಮೂಡುವ ಸಾಧ್ಯತೆ ಇದೆ. ಮನಸ್ಸಿನ ನಿಗ್ರಹವನ್ನು ಮಾಡಲು ನೀವು ಬಹಳ ಶ್ರಮಪಡಬೇಕಾಗಬಹುದು. ಸಾಲಬಾಧೆಯ ಚಿಂತೆ ನಿಮ್ಮನ್ನು ಸತತವಾಗಿ ಕಾಡಲಿದೆ. ಇಂದು ಪ್ರವಾಸ ಕೈಗೊಳ್ಳುವಾಗ ಮನಸ್ಸಿನಲ್ಲಿ ಒಂದು ರೀತಿಯ ಭೀತಿ ಇರಲಿದೆ. ಅಸಮತೋಲಿತ ಆಹಾರ ಪದ್ಧತಿಯಿಂದಾಗಿ ಆರೋಗ್ಯದಲ್ಲಿ ವ್ಯತ್ಯಾಸವಾಗಿ ಕಷ್ಟ ಅನುಭವಿಸುವಿರಿ. ನಿಮ್ಮ ಮಾತುಗಳು ಸರಿಯಾಗಿ ಸಂವಹನವಾಗದೆ ತಪ್ಪು ತಿಳುವಳಿಕೆ ಮೂಡಬಹುದು. ಮನೆಯವರ ಜೊತೆ ಸಣ್ಣ ಪ್ರಯಾಣ ಮಾಡುವಿರಿ. ಬೇಡದ ಮೂರನೇ ವ್ಯಕ್ತಿಯ ಸಲಹೆಗಳಿಗೆ ಕಿವಿಗೊಡಬೇಡಿ.
ಕರ್ಕಾಟಕ ರಾಶಿ (Cancer)
ಕೈತುಂಬಾ ಕೆಲಸಗಳಿದ್ದರೂ ಇಂದು ಸೋಮಾರಿತನದಿಂದ ಸಮಯವನ್ನು ವ್ಯರ್ಥ ಮಾಡುವ ಸಾಧ್ಯತೆ ಇದೆ. ದೂರದ ಊರಿಗೆ ಅನಿರೀಕ್ಷಿತವಾಗಿ ಪ್ರಯಾಣ ಬೆಳೆಸಬೇಕಾಗಬಹುದು. ಸತತ ಕೆಲಸದಿಂದಾಗಿ ನಿಮಗೆ ಅತಿಯಾದ ಮಾನಸಿಕ ಹಾಗೂ ದೈಹಿಕ ಆಯಾಸವಾಗಬಹುದು, ಹೀಗಾಗಿ ಸ್ವಲ್ಪ ವಿಶ್ರಾಂತಿ ಪಡೆಯುವುದು ಅತ್ಯಗತ್ಯ. ಹಲವು ದಿನಗಳ ನಂತರ ಓದುವ ಹವ್ಯಾಸವನ್ನು ಮತ್ತೆ ಆರಂಭಿಸಲಿದ್ದೀರಿ. ಉನ್ನತ ಹುದ್ದೆಗೆ ಏರುವ ಸುವರ್ಣ ಅವಕಾಶಗಳು ಹುಡುಕಿಕೊಂಡು ಬರಲಿವೆ, ಆದರೆ ಅದರಲ್ಲಿ ನಿಮಗೆ ಆಸಕ್ತಿ ಕೊಂಚ ಕಡಿಮೆಯಿರಲಿದೆ.
ಸಿಂಹ ರಾಶಿ (Leo)
ಉಲ್ಲಾಸ ಮತ್ತು ಸಂತೋಷಗಳು ಎಂದಿಗಿಂತ ಇಂದು ನಿಮ್ಮಲ್ಲಿ ದುಪ್ಪಟ್ಟಾಗಿರಲಿವೆ. ಅಪರೂಪದ ರುಚಿಕರ ಆಹಾರವನ್ನು ಅತಿಯಾಗಿ ತಿಂದು ಆರೋಗ್ಯವನ್ನು ಕೆಡಿಸಿಕೊಳ್ಳಬೇಡಿ. ಸಂಶೋಧನಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವವರಿಗೆ ಇಂದು ಹೆಚ್ಚಿನ ಬೆಂಬಲ ಮತ್ತು ಪ್ರೋತ್ಸಾಹಗಳು ದೊರೆಯಲಿವೆ. ಸೊಂಟದ ಭಾಗದಲ್ಲಿ ನೋವು ಕಾಣಿಸಿಕೊಳ್ಳುವ ಸಾಧ್ಯತೆ ಇದೆ, ಆರೋಗ್ಯದ ಕಡೆ ಗಮನವಿರಲಿ. ದೂರದ ಬಂಧುಗಳ ಆಗಮನದಿಂದ ಮನೆಯಲ್ಲಿ ಸಂಭ್ರಮವಿರಲಿದೆ. ನಿಮ್ಮ ವಿವೇಕವನ್ನು ಬಳಸಿ, ದೌರ್ಬಲ್ಯವನ್ನು ಮೆಟ್ಟಿ ನಿಂತು ಸಾಧಿಸಬೇಕಾದುದು ಸಾಕಷ್ಟಿದೆ.
ಕನ್ಯಾ ರಾಶಿ (Virgo)
ಇತರರ ವಿಷಯದಲ್ಲಿ ಅತಿಯಾಗಿ ಮಾತನಾಡಿ ಅವರಿಗೆ ಕಿರಿಕಿರಿ ಉಂಟುಮಾಡಬೇಡಿ. ಇಂದು ಸಹನೆಯನ್ನೇ ನಿಮ್ಮ ಮುಖ್ಯ ಆಯುಧವನ್ನಾಗಿ ಮಾಡಿಕೊಳ್ಳಿ. ಅವಿವಾಹಿತರನ್ನು ಕಾಡುತ್ತಿದ್ದ ಮದುವೆಯ ಕೊರಗು ದೂರಾಗುವ ಶುಭ ಸೂಚನೆಗಳಿವೆ. ಮನಸ್ಸಿನಲ್ಲಿ ದ್ವೇಷವನ್ನು ಇಟ್ಟುಕೊಂಡು ಪ್ರಕ್ಷುಬ್ಧಗೊಳ್ಳುವುದು ಬೇಡ, ನಿಮ್ಮ ಅಸೂಯೆಯೇ ನಿಮ್ಮಿಂದ ಕೆಟ್ಟ ಕೆಲಸವನ್ನು ಮಾಡಿಸಬಹುದು, ಎಚ್ಚರ! ನಿಮ್ಮ ವೃತ್ತಿಯನ್ನು ಆನಂದಿಸಿ, ಖುಷಿಯಿಂದ ಕೆಲಸಮಾಡಿ. ನಿಮ್ಮದೇ ಆದ ಸ್ವತಂತ್ರ ಚಿಂತನೆಯಿಂದ ಕಾರ್ಯಗಳನ್ನು ಪೂರೈಸುವಿರಿ. ಒಂದೇ ಸಿದ್ಧಸೂತ್ರದ ರೀತಿಯಲ್ಲಿ ಜೀವನ ಸಾಗಿಸಲು ಕೊಂಚ ಕಷ್ಟವಾದೀತು.
ತುಲಾ ರಾಶಿ (Libra)
ನಿಮಗೆ ಸಮಾಜದಲ್ಲಿ ಅಪಮಾನ ಮಾಡಲು ಕೆಲವರು ಪಿತೂರಿ ನಡೆಸುವ ಸಾಧ್ಯತೆ ಇದೆ, ಆದ್ದರಿಂದ ನಿಮ್ಮ ಕೆಲಸದ ಮೇಲೆ ಮಾತ್ರ ಹೆಚ್ಚು ಗಮನವಿಡಿ. ನಿಮ್ಮ ಉತ್ತಮವಾದ ಹವ್ಯಾಸಗಳಿಗೆ ಸೂಕ್ತ ಗೌರವ ಸಿಗಲಿದೆ. ಅನವರತ ದುಡಿಮೆಯಿಂದ ಬಳಲಿದ್ದ ನಿಮಗೆ ಇಂದು ಕೊಂಚ ವಿಶ್ರಾಂತಿ ದೊರೆಯಲಿದೆ. ಹೊಸ ಉದ್ಯೋಗದ ಶುಭ ಸುದ್ದಿ ನಿಮ್ಮ ಮನಸ್ಸಿಗೆ ನೆಮ್ಮದಿ ನೀಡಲಿದೆ. ನೂತನ ಗೃಹ ನಿರ್ಮಾಣದ ಬಗ್ಗೆ ಕುಟುಂಬಸ್ಥರ ಜೊತೆ ಕುಳಿತು ಮಹತ್ವದ ಯೋಜನೆ ರೂಪಿಸುವಿರಿ. ಯಾರನ್ನೂ ಹೆದರಿಸಿ ಅಥವಾ ದಬ್ಬಾಳಿಕೆಯಿಂದ ಕೆಲಸ ಮಾಡಿಸಿಕೊಳ್ಳುವ ಸಾಹಸಕ್ಕೆ ಕೈಹಾಕಬೇಡಿ.
ವೃಶ್ಚಿಕ ರಾಶಿ (Scorpio)
ಕೆಲಸವಿಲ್ಲದಿದ್ದರೂ ಸುಮ್ಮನೆ ಕುಳಿತುಕೊಂಡು ಸಮಯ ಹಾಳು ಮಾಡಬೇಡಿ. ಅಸಾಧ್ಯವಾದುದನ್ನು ಸಾಧಿಸುವ ಹಠವನ್ನು ಬಿಟ್ಟು, ಪ್ರಸ್ತುತ ಯಾವುದು ಸರಿಯೋ ಅದರ ಕಡೆಗೆ ಗಮನ ಹರಿಸುವುದು ಒಳ್ಳೆಯದು. ಮಕ್ಕಳು ನಿಮ್ಮ ಜೊತೆ ಪ್ರವಾಸ ಅಥವಾ ಸುತ್ತಾಟಕ್ಕೆ ಬರಲು ಹಠ ಮಾಡಬಹುದು. ಹೂಡಿಕೆಯ ನೆಪದಲ್ಲಿ ನಿಮಗೆ ತಿಳಿಯದಂತೆ ಒಂದಿಷ್ಟು ಆರ್ಥಿಕ ನಷ್ಟವಾಗುವ ಭೀತಿ ಇದೆ. ಸಮಯ ಹಾಗೂ ಹಣ ಎರಡನ್ನೂ ಜೋಪಾನವಾಗಿ ಬಳಸಿಕೊಳ್ಳಿ. ನಿಮ್ಮ ಹಳೆಯ ಭೂಮಿಯ ವಿವಾದ ಬಗೆಹರಿದು ಅದು ನಿಮಗೆ ಸಿಗಲಿದೆ. ಸಪ್ಪೆ ಎನಿಸಿದ ಅಥವಾ ನಿಸ್ಸಾರವಾದ ವಿಷಯಗಳನ್ನು ಇಂದಿಗೆ ಮುಕ್ತಾಯಗೊಳಿಸುವಿರಿ.
ಧನು ರಾಶಿ (Sagittarius)
ಕುಟುಂಬದ ಸದಸ್ಯರ ಪೂರ್ಣ ಸಹಕಾರದಿಂದ ಇವತ್ತು ಅಂದುಕೊಂಡ ಎಲ್ಲಾ ಕಾರ್ಯಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸುವಿರಿ. ನಿದ್ರಾಹೀನತೆಯ ಸಮಸ್ಯೆಯಿಂದಾಗಿ ಬೆಳಗ್ಗೆ ಕೊಂಚ ಆಲಸ್ಯ ಕಾಡಬಹುದು. ಅತ್ಯಂತ ಆಪ್ತರ ಮಾತುಗಳು ನಿಮಗೆ ಬೇರೆ ರೀತಿಯಲ್ಲಿ ಅರ್ಥವಾಗಿ ಮನಸ್ತಾಪ ಬರಬಹುದು. ಮಕ್ಕಳ ವರ್ತನೆಯಲ್ಲಿ ಊಹಿಸಲಾಗದಷ್ಟು ಬದಲಾವಣೆಗಳು ಕಂಡುಬರಲಿದ್ದು, ಇದರಿಂದ ಬೇಸರವಾಗಲಿದೆ. ಯಾರದೋ ಮೂರನೇ ವ್ಯಕ್ತಿಯ ಕೆಲಸದ ಕಾರಣಕ್ಕಾಗಿ ನೀವು ಇಂದು ಹೆಚ್ಚು ಓಡಾಟ ಮಾಡಬೇಕಾಗಬಹುದು.
ಮಕರ ರಾಶಿ (Capricorn)
ಇಂದು ನೀವು ಯಾವುದೇ ಮಾನಸಿಕ ಒತ್ತಡಕ್ಕೆ ಸಿಲುಕದೆ ಆಪ್ತರ ಜೊತೆ ಆರಾಮವಾಗಿ ಮಾತನಾಡಿ ಸುಂದರ ದಿನವನ್ನು ಕಳೆಯುವಿರಿ. ಹಳೆಯ ಸ್ನೇಹಿತರ ಜೊತೆ ಹೊರಗೆ ಸುತ್ತಾಡಲು ಹೋಗುವ ಯೋಜನೆ ರೂಪಿಸುವಿರಿ. ಕಷ್ಟದ ಸಮಯದಲ್ಲಿ ಅಪರಿಚಿತರು ನಿಮಗೆ ಸಹಾಯ ಹಸ್ತ ಚಾಚಲಿದ್ದಾರೆ. ವ್ಯವಹಾರದಲ್ಲಿನ ಪಾಲುದಾರಿಕೆಯಲ್ಲಿ ಬರುವ ಸಣ್ಣಪುಟ್ಟ ಮನಸ್ತಾಪಗಳನ್ನು ಮುಂದುವರಿಸದೆ ಅಲ್ಲೇ ಬಗೆಹರಿಸಿಕೊಳ್ಳಿ. ಇಂದು ನಿಮಗೆ ಕೇಳುವ ಕೆಲವು ಕಠಿಣ ಪ್ರಶ್ನೆಗಳಿಗೆ ಉತ್ತರ ಕೊಡಲಾಗದೆ ಮೌನಕ್ಕೆ ಶರಣಾಗುವಿರಿ. ಧನ ನಷ್ಟವಾದ ವಿಚಾರಗಳನ್ನು ಯಾರ ಬಳಿಯೂ ಹಂಚಿಕೊಳ್ಳಲು ಇಷ್ಟಪಡುವುದಿಲ್ಲ.
ಕುಂಭ ರಾಶಿ (Aquarius)
ಇಂದು ನಿಮಗೆ ನಕಾರಾತ್ಮಕ ಅಥವಾ ಕೆಟ್ಟ ಕನಸುಗಳು ಬೀಳುವ ಸಾಧ್ಯತೆ ಇರುವುದರಿಂದ, ಬೆಳಗ್ಗೆ ದೇವರಿಗೆ ದೀಪ ಬೆಳಗಿ ಪ್ರಾರ್ಥಿಸಿ. ಮೇಲಧಿಕಾರಿಗಳ ಕಠಿಣ ಮಾತುಗಳು ನಿಮ್ಮ ಕೆಲಸದ ಉತ್ಸಾಹವನ್ನು ಕೊಂಚ ತಗ್ಗಿಸಬಹುದು. ಮಕ್ಕಳ ಭವಿಷ್ಯಕ್ಕಾಗಿ ಇಂದಿನಿಂದಲೇ ಸಂಪತ್ತನ್ನು ಕೂಡಿಡುವ ಯೋಜನೆ ಆರಂಭಿಸುವಿರಿ. ಇಬ್ಬರ ಜಗಳದ ಮಧ್ಯೆ ಸಿಲುಕಿ ನೀವು ಮುಜುಗರ ಅನುಭವಿಸಬೇಕಾಗಬಹುದು. ದಾಂಪತ್ಯ ಜೀವನದಲ್ಲಿ ಸಣ್ಣ ಒಡಕು ಬರುವ ಸಾಧ್ಯತೆ ಇದೆ, ಸಂಯಮವಿರಲಿ. ಬಂಧುಗಳ ಮಾತು ಕಿರಿಕಿರಿ ತರಿಸಬಹುದು. ನಿಮ್ಮ ವೈಯಕ್ತಿಕ ಸೌಂದರ್ಯಕ್ಕೆ ಇಂದು ಹೆಚ್ಚು ಮಹತ್ವ ಕೊಡುವಿರಿ. ದಿನದ ಕೊನೆಯಲ್ಲಿ ಶುಭ ವಾರ್ತೆಯೊಂದು ಬರಲಿದೆ.
ಮೀನ ರಾಶಿ (Pisces)
ಇಂದು ಸಮಾಜದಲ್ಲಿ ನಡೆಯುವ ಯಾವುದೇ ನಕಾರಾತ್ಮಕ ವಾರ್ತೆ ಅಥವಾ ಗಾಳಿಸುದ್ದಿಗಳನ್ನು ಲೆಕ್ಕಿಸದೆ ನಿಮ್ಮ ಕೆಲಸದಲ್ಲಿ ನೀವು ಮುಳುಗುವಿರಿ. ಮಾಡುವ ಕೆಲಸದಲ್ಲಿ ಉತ್ಸಾಹ ಮತ್ತು ಎನರ್ಜಿ ಅಧಿಕವಾಗಿರಲಿದೆ. ಭೂಮಿಯ ವ್ಯವಹಾರದಲ್ಲಿ ಹೊಸ ಪಾಲುದಾರಿಕೆ ಒದಗಿಬರಲಿದೆ. ಸಮಾಜದಲ್ಲಿ ನಿಮಗಿರುವ ಗೌರವವನ್ನು ಉಳಿಸಿಕೊಳ್ಳಲು ಪ್ರಯತ್ನಿಸಿ. ದೀರ್ಘಕಾಲದಿಂದ ಅಪೂರ್ಣವಾಗಿದ್ದ ಹಳೆಯ ವ್ಯವಹಾರಗಳನ್ನು ಶೀಘ್ರವಾಗಿ ಮುಗಿಸಿಕೊಳ್ಳಲಿದ್ದೀರಿ. ನಿಮ್ಮ ಜೊತೆಗಿರುವವರು ನಿಮ್ಮ ಶ್ರೇಯಸ್ಸನ್ನು ಬಯಸಲಿದ್ದಾರೆ. ಇಂದು ಕುಟುಂಬದ ಸದಸ್ಯರ ಜೊತೆ ಹೆಚ್ಚು ಗುಣಮಟ್ಟದ ಸಮಯವನ್ನು ಕಳೆಯಲಿದ್ದೀರಿ.

