ಕೋಲ್ಕತಾ: ಪಶ್ಚಿಮ ಬಂಗಾಳ ವಿಧಾನಸಭೆಯ ಬಜೆಟ್ ಅಧಿವೇಶನದ ವೇಳೆ ಗೃಹ ಮತ್ತು ಬೆಟ್ಟ ಪ್ರದೇಶಗಳ ವ್ಯವಹಾರಗಳ (Home and Hill Affairs) ಬಜೆಟ್ ಮೇಲಿನ ಚರ್ಚೆ ಸಂದರ್ಭದಲ್ಲಿ ತೀವ್ರ ಗದ್ದಲ ಉಂಟಾಗಿದ್ದು, ತೃಣಮೂಲ ಕಾಂಗ್ರೆಸ್ (TMC) ಶಾಸಕ ಕುನಾಲ್ ಘೋಷ್ ಅವರನ್ನು ಸ್ಪೀಕರ್ ಇಂದು ದಿನಪೂರ್ತಿ ಕಲಾಪದಿಂದ ಅಮಾನತುಗೊಳಿಸಿದ್ದಾರೆ.
ಸಭೆಯಲ್ಲಿ ಸಚಿವರೊಬ್ಬರು ಗೃಹ ಇಲಾಖೆಯ ಬಜೆಟ್ ವಿಷಯವಾಗಿ ಮಾತನಾಡುತ್ತಿದ್ದರು. ಈ ವೇಳೆ ಟಿಎಂಸಿ ಶಾಸಕ ಕುನಾಲ್ ಘೋಷ್ ಅವರು ಮಧ್ಯಪ್ರವೇಶಿಸಿ ಅಡ್ಡಿಪಡಿಸಿದರು. ಸಭೆಯ ಶಿಸ್ತು ಉಲ್ಲಂಘನೆಯಾಗಿದ್ದಕ್ಕೆ ಕೋಪಗೊಂಡ ಸ್ಪೀಕರ್ ಆದೇಶದ ಮೇರೆಗೆ ಭದ್ರತಾ ಸಿಬ್ಬಂದಿ (ಮಾರ್ಷಲ್‌ಗಳು) ಕುನಾಲ್ ಘೋಷ್ ಅವರನ್ನು ಬಲವಂತವಾಗಿ ವಿಧಾನಸಭೆಯ ಕಲಾಪದಿಂದ ಹೊರಗೆ ಕರೆದೊಯ್ದರು. ಅಲ್ಲದೆ, ಶಾಸಕ ಕುನಾಲ್ ಘೋಷ್ ಅವರನ್ನು ಈ ಇಡೀ ಅಧಿವೇಶನದ ಅವಧಿಗೆ ಅಮಾನತುಗೊಳಿಸುವಂತೆ ಸಚಿವ ತಾಪಸ್ ರಾಯ್ ಅವರು ಸ್ಪೀಕರ್‌ಗೆ ಪ್ರಸ್ತಾವನೆ ಸಲ್ಲಿಸಿದರು.
ಇದನ್ನೂ ಓದಿ: ಪ್ರಧಾನಿ ನಿವಾಸದ ಬಳಿ ‘ಇಂಡಿಯಾ’ ಒಕ್ಕೂಟದ ಧರಣಿ: ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ
ಇಲ್ಲಿದೆ ನೋಡಿ ವಿಡಿಯೋ:
#WATCH | Kolkata, West Bengal | TMC MLA Kunal Ghosh suspended from the House for today. TMC MLA Kunal Ghosh interrupted Rebel TMC Chief Whip Akhruzzaman when he was speaking on the Home and Hill Affairs budget. After the Speaker’s order, marshals forcefully took Kunal Ghosh out… pic.twitter.com/QmSwsZpVoh
— ANI (@ANI) July 22, 2026
ಸಿಎಂ ಸುವೇಂದು ಅಧಿಕಾರಿ ಅವರು ಶಾಸಕನ ನಡವಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. “ಕಲಾಪದಲ್ಲಿ ಈ ರೀತಿಯ ನಡವಳಿಕೆಯನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ನಾವು ಕೂಡ ವಿರೋಧ ಪಕ್ಷದ ಸ್ಥಾನದಲ್ಲಿದ್ದೇವು, ಪ್ರತಿಯೊಬ್ಬರಿಗೂ ಜವಾಬ್ದಾರಿ ಇರುತ್ತದೆ. ಅಖ್ರುಜ್ಜಮಾನ್ ಅವರು ಹಿರಿಯ ಶಾಸಕರಾಗಿದ್ದು, ಅವರ ತಂದೆಯವರೂ ಸುದೀರ್ಘ ಕಾಲ ಶಾಸಕರಾಗಿ ಸೇವೆ ಸಲ್ಲಿಸಿದವರಾಗಿದ್ದಾರೆ” ಎಂದು ಸುವೇಂದು ಅಧಿಕಾರಿ ಹೇಳಿದ್ದಾರೆ.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

