ದೆಹಲಿ: ದೇಶದ ಆಂತರಿಕ ಭದ್ರತೆ ಮತ್ತು ಪಾರದರ್ಶಕತೆಗೆ ಹೆಚ್ಚಿನ ಆದ್ಯತೆ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ವಿದೇಶಿ ಕೊಡುಗೆ ನಿಯಂತ್ರಣ ತಿದ್ದುಪಡಿ ಕಾಯ್ದೆ (FCRA 2026) ಅನ್ನು ಜಾರಿಗೆ ತಂದಿದೆ. ವಿದೇಶಿ ಹಣ ಭಾರತಕ್ಕೆ ಹರಿದುಬರಲು ಅವಕಾಶವಿದ್ದರೂ, ಅದು ದೇಶದ ಕಾನೂನು ಹಾಗೂ ರಾಷ್ಟ್ರೀಯ ಹಿತಾಸಕ್ತಿಯನ್ನು ಮೀರಿರಬಾರದು ಎಂಬ ಸ್ಪಷ್ಟ ಸಂದೇಶವನ್ನು ಈ ನೂತನ ಕಾಯ್ದೆಯ ಮೂಲಕ ಸಾರಲಾಗಿದೆ.
ವಿದೇಶಿ ನಿಧಿಯನ್ನು ಬಳಸಿ ಭಾರತದಲ್ಲಿ ನಿರ್ಮಿಸಲಾದ ಅಥವಾ ಖರೀದಿಸಲಾದ ಎಲ್ಲಾ ರೀತಿಯ ಸ್ಥಿರ ಮತ್ತು ಚರ ಆಸ್ತಿಗಳ ಮೇಲೆ ಸರ್ಕಾರ ಹಾಗೂ ತನಿಖಾ ಸಂಸ್ಥೆಗಳು ಕಟ್ಟುನಿಟ್ಟಿನ ಕಣ್ಣಿಡಲಿವೆ. ಭಾರತದಲ್ಲಿ ಕಾರ್ಯನಿರ್ವಹಿಸುವ ಸರ್ಕಾರೇತರ ಸಂಸ್ಥೆಗಳ (NGO) ಮುಖ್ಯ ಪದಾಧಿಕಾರಿ ಹುದ್ದೆಗಳನ್ನು ವಿದೇಶಿ ಪ್ರಜೆಗಳು ವಹಿಸಿಕೊಳ್ಳುವುದಕ್ಕೆ ಸಂಪೂರ್ಣ ನಿರ್ಬಂಧ ವಿಧಿಸಲಾಗಿದೆ.
ಇದನ್ನೂ ಓದಿ: ನೀಟ್-ಯುಜಿ ಪೇಪರ್ ಲೀಕ್ ಪ್ರಕರಣ: ಸಂಜೀವ್ ಮುಖಿಯಾಗೆ ಸಿಬಿಐ ಕ್ಲೀನ್ಚಿಟ್
ವಿದೇಶಿ ಹಣವನ್ನು ಬಳಸಿಕೊಂಡು ದೇಶದಲ್ಲಿ ಅಕ್ರಮ ಧಾರ್ಮಿಕ ಮತಾಂತರ ಚಟುವಟಿಕೆಗಳನ್ನು ನಡೆಸುವುದನ್ನು ಈ ಕಾಯ್ದೆಯಡಿ ಸಂಪೂರ್ಣವಾಗಿ ತಡೆಯಲಾಗುತ್ತದೆ. ವಿದೇಶಿ ಅನುದಾನದ ಹೆಸರಿನಲ್ಲಿ ದೇಶವಿರೋಧಿ ಚಟುವಟಿಕೆಗಳು ಅಥವಾ ಅಕ್ರಮ ಹಣ ವರ್ಗಾವಣೆಯಾಗುವುದನ್ನು ತಡೆಯುವುದು ಈ ತಿದ್ದುಪಡಿಯ ಮುಖ್ಯ ಉದ್ದೇಶವಾಗಿದೆ. ರಾಷ್ಟ್ರೀಯ ಹಿತಾಸಕ್ತಿ ಮತ್ತು ಹಣಕಾಸಿನ ಪಾರದರ್ಶಕತೆಯನ್ನು ಕಾಯ್ದುಕೊಳ್ಳಲು ಈ ಹೊಸ ನಿಯಮಗಳು ಅತ್ಯಂತ ನಿರ್ಣಾಯಕ ಪಾತ್ರ ವಹಿಸಲಿವೆ ಎಂದು ಸರ್ಕಾರ ಪ್ರತಿಪಾದಿಸಿದೆ.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

