ಬೆಂಗಳೂರು: ಜಿಎಸ್ಟಿ 2.0 (GST 2.0) ಜಾರಿಯಾದ ಬಳಿಕ ಹೊಸ ಕಾರುಗಳ ಬೆಲೆಯಲ್ಲಿ ಇಳಿಕೆಯಾಗಿ ವಾಹನ ಖರೀದಿದಾರರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿತ್ತು. ಆದರೆ, ಈಗ ಜಾಗತಿಕ ಮಟ್ಟದ ಯುದ್ಧದ ಪರಿಣಾಮವಾಗಿ ಕಚ್ಚಾವಸ್ತುಗಳ ಬೆಲೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದ್ದು (Car Price Hike), ಆಗಸ್ಟ್ ತಿಂಗಳಿನಿಂದ ಹೊಸ ಕಾರುಗಳ ದರ ಮತ್ತಷ್ಟು ಹೆಚ್ಚಾಗಲಿದೆ.
ಇದರಿಂದಾಗಿ ಹೆಚ್ಚುವರಿ ಹೊರೆಯಿಂದ ಪಾರಾಗಲು ವಾಹನ ಪ್ರಿಯರು ಈ ತಿಂಗಳಿನಲ್ಲೇ ಕಾರುಗಳನ್ನು ಬುಕ್ ಮಾಡಲು ಶೋರೂಂಗಳಿಗೆ ಧಾವಿಸುತ್ತಿದ್ದಾರೆ.
ಜಿಎಸ್ಟಿ 2.0 ಜಾರಿಗೆ ಬಂದಾಗ ಕಾರುಗಳ ಬೆಲೆಯಲ್ಲಿ 50 ಸಾವಿರ ರೂ ದಿಂದ 1 ಲಕ್ಷದವರೆಗೆ ಹಾಗೂ ದ್ವಿಚಕ್ರ ವಾಹನಗಳ ಬೆಲೆಯಲ್ಲಿ 10 ಸಾವಿರ ರೂ ದಿಂದ 20 ಸಾವಿರ ರೂ ವರೆಗೆ ಬೆಲೆ ಕಡಿಮೆಯಾಗಿತ್ತು. ಇದು ವಾಹನ ಮಾರುಕಟ್ಟೆಗೆ ದೊಡ್ಡ ಚೇತರಿಕೆ ನೀಡಿತ್ತು.
ಇದನ್ನೂ ಓದಿ:ಭಾರತಕ್ಕೆ ಕಾಲಿಡಲಿದೆ ‘ವೋಲ್ವೋ EX90’ ಪ್ರೀಮಿಯಂ ಇವಿ ಎಸ್‌ಯುವಿ
ಆದರೆ, ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಯುದ್ಧಗಳ ಪರಿಣಾಮ ಉತ್ಪಾದನಾ ವೆಚ್ಚ ಹಾಗೂ ಕಚ್ಚಾವಸ್ತುಗಳ ದರ ಏರಿಕೆಯಾಗಿದೆ. ಈ ವೆಚ್ಚವನ್ನು ಸರಿದೂಗಿಸಲು ವಾಹನ ತಯಾರಿಕಾ ಸಂಸ್ಥೆಗಳು ಆಟೋಮೊಬೈಲ್ ದರ ಏರಿಕೆಯ ಹಾದಿ ಹಿಡಿದಿವೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

