ಕುಟ್ಟಿಪ್ಪುರಂ ಬಳಿ ಖಾಸಗಿ ಬಸ್ ಪಲ್ಟಿ: ಒಬ್ಬ ಸಾವು, 26 ಮಂದಿಗೆ ಗಂಭೀರ ಗಾಯ

ಕೇರಳ: ಭಾರೀ ಮಳೆಯಿಂದಾಗಿ ರಸ್ತೆ ಜಾರುತ್ತಿದ್ದ ವೇಳೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್‌ವೊಂದು ಪಲ್ಟಿಯಾದ ದಾರುಣ ಘಟನೆ ತ್ರಿಶ್ಶೂರ್-ಕೋಝಿಕ್ಕೋಡ್ ಮಾರ್ಗದ ಕುಟ್ಟಿಪ್ಪುರಂ ಬಳಿ ನಡೆದಿದೆ. ಈ ಭೀಕರ ಅಪಘಾತದಲ್ಲಿ ಒಬ್ಬರು ಮೃತಪಟ್ಟಿದ್ದು, 26ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ.

ಮಳೆಯಿಂದ ತೇವಗೊಂಡಿದ್ದ ರಸ್ತೆ ಹಾಗೂ ಚಾಲಕನ ಅತಿಯಾದ ವೇಗವೇ ಈ ಭೀಕರ ಅಪಘಾತಕ್ಕೆ ಮುಖ್ಯ ಕಾರಣ ಎಂದು ಶಂಕಿಸಲಾಗಿದೆ. ತ್ರಿಶ್ಶೂರ್‌ನಿಂದ ಕೋಝಿಕ್ಕೋಡ್‌ಗೆ ಚಲಿಸುತ್ತಿದ್ದ ಖಾಸಗಿ ಬಸ್, ಕುಟ್ಟಿಪ್ಪುರಂ ತಲುಪುತ್ತಿದ್ದಂತೆ ಮಳೆಯಿಂದ ತೇವಗೊಂಡಿದ್ದ ಅಪಾಯಕಾರಿ ತಿರುವಿನಲ್ಲಿ ಹಠಾತ್ ನಿಯಂತ್ರಣ ತಪ್ಪಿ ರಸ್ತೆಗೆ ಉರುಳಿಬಿದ್ದಿದೆ.

ಇಲ್ಲಿದೆ ನೋಡಿ ವಿಡಿಯೋ:


ಅಪಘಾತದ ರಭಸಕ್ಕೆ ಬಸ್‌ನಲ್ಲಿದ್ದ ಪ್ರಯಾಣಿಕರೊಬ್ಬರು ಸ್ಥಳದಲ್ಲೇ ಅಸುನೀಗಿದ್ದಾರೆ. ಗಾಯಗೊಂಡ ಸುಮಾರು 26 ಪ್ರಯಾಣಿಕರನ್ನು ತಕ್ಷಣವೇ ಸ್ಥಳೀಯರು ಹಾಗೂ ಪೊಲೀಸರ ನೆರವಿನಿಂದ ಕುಟ್ಟಿಪ್ಪುರಂ, ವಳಂಚೇರಿ ಮತ್ತು ಕೊಟ್ಟಕ್ಕಲ್‌ನ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಇದನ್ನೂ ಓದಿ: NEET ಪ್ರತಿಭಟನೆಯಲ್ಲಿ ಪತ್ರಕರ್ತೆಗೆ ಲೈಂಗಿಕ ದೌರ್ಜನ್ಯ: ಕಾಮುಕನ ಬಂಧನ, ಬರಿಗಾಲಿನಲ್ಲಿ ‘ಕ್ರೈಮ್ ಸೀನ್ ರಿಕನ್‌ಸ್ಟ್ರಕ್ಷನ್’

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮಳೆಯ ನಡುವೆ ಅತಿಯಾದ ವೇಗದಲ್ಲಿ ಬಸ್ ಚಲಾಯಿಸಿದ್ದೇ ದುರಂತಕ್ಕೆ ಕಾರಣವೇ ಎಂಬ ಕೋನದಲ್ಲಿ ತನಿಖೆ ನಡೆಸುತ್ತಿದ್ದಾರೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *