ಬೆಂಗಳೂರು : ನೆಲಮಂಗಲ ಬಳಿ ಬಸ್‌ನಲ್ಲಿ ಪ್ರಯಾಣಿಕನೊಬ್ಬನಿಗೆ ಕಾಲಿನಿಂದ ಒದ್ದು, ಮನಬಂದಂತೆ ಹಲ್ಲೆ ನಡೆಸಿದ್ದ ಬಿಎಂಟಿಸಿ (BMTC) ನಿರ್ವಾಹಕನನ್ನು (Conductor) ಸೇವೆಯಿಂದ ಅಮಾನತುಗೊಳಿಸಲಾಗಿದೆ. ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆದ ಬೆನ್ನಲ್ಲೇ ಬಿಎಂಟಿಸಿ ಆಡಳಿತ ಮಂಡಳಿ ಈ ಕಠಿಣ ಕ್ರಮ ಕೈಗೊಂಡಿದೆ. ಅಮಾನತುಗೊಂಡ ಬಿಎಂಟಿಸಿ ಕಂಡಕ್ಟರ್‌ನನ್ನು ಕೃಷ್ಣಮೂರ್ತಿ ಎಂದು ಗುರುತಿಸಲಾಗಿದೆ.
ಈ ಭೀಕರ ಘಟನೆಯು ಆಗಸ್ಟ್ 2 ರಂದು ನೆಲಮಂಗಲ ಮಾರ್ಗದ ಬಿಎಂಟಿಸಿ ಬಸ್ ಸಂಖ್ಯೆ 258SD/1 ರೊಳಗೆ ನಡೆದಿದೆ ಎನ್ನಲಾಗಿದೆ. ಬಸ್‌ನಲ್ಲಿ ಗಲಾಟೆ ನಡೆದ ಸಂದರ್ಭದಲ್ಲಿ ಕಂಡಕ್ಟರ್ ಕೃಷ್ಣಮೂರ್ತಿ ಅವರು ಪ್ರಯಾಣಿಕನೊಬ್ಬನಿಗೆ ಕಾಲಿನಿಂದ ಒದ್ದು ದೌರ್ಜನ್ಯ ಎಸಗಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ. ಈ ವಿಡಿಯೋ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.
ಇದನ್ನೂ ಓದಿ: ಕೆಇಎ ಮಹತ್ವದ ಪ್ರಕಟಣೆ: ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ
ಇಲ್ಲಿದ ನೋಡಿ ವಿಡಿಯೋ:
A BMTC conductor has been suspended after a viral video allegedly showed him kicking and assaulting a man near Nelamangala on the outskirts of Bengaluru.
The conductor has been identified as Krishnamurthy.
According to reports, the incident took place on August 2 on BMTC Route… pic.twitter.com/lJRo8yQv5F
— Hate Detector 🔍 (@HateDetectors) August 5, 2026
ವಿಡಿಯೋ ಗಮನಿಸಿದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (BMTC) ತಕ್ಷಣವೇ ಜಾರಿಗೆ ಬರುವಂತೆ ಕಂಡಕ್ಟರ್ ಕೃಷ್ಣಮೂರ್ತಿಯನ್ನು ಸಸ್ಪೆಂಡ್ ಮಾಡಿದೆ. ಜೊತೆಗೆ ಘಟನೆಗೆ ನಿಖರ ಕಾರಣವೇನು ಎಂಬುದನ್ನು ತಿಳಿಯಲು ಇಲಾಖಾ ತನಿಖೆಗೆ (Departmental Inquiry) ಆದೇಶಿಸಿದೆ. ಗಲಾಟೆಗೆ ಅಸಲಿ ಕಾರಣವೇನು ಹಾಗೂ ತನಿಖೆಯ ಮುಂದಿನ ವರದಿಗಾಗಿ ಸಾರಿಗೆ ಇಲಾಖೆ ಕಾಯುತ್ತಿದೆ.

