ರಾಜಸ್ಥಾನ: ಸರ್ಕಾರಿ ಆಸ್ಪತ್ರೆಯ ಸಿಲಿಂಗ್ ಕುಸಿದು ಮಹಿಳೆಯ ತಲೆಗೆ ಗಂಭೀರ ಗಾಯ

ಚೂರು: ಸರ್ಕಾರಿ ಶಾಲೆಗಳು, ಆಸ್ಪತ್ರೆಗಳು ಮತ್ತು ಕಾಲೇಜುಗಳ ಕಟ್ಟಡಗಳ ಕಳಪೆ ಗುಣಮಟ್ಟದ ಕುರಿತು ಸಾರ್ವಜನಿಕರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ರಾಜಸ್ಥಾನದ ಚೂರು ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಆಸ್ಪತ್ರೆಯ ಛಾವಣಿಯ ಸಿಲಿಂಗ್ ಪ್ಲಾಸ್ಟರ್ (Ceiling Plaster) ಏಕಾಏಕಿ ಕುಸಿದುಬಿದ್ದು, ಚಿಕಿತ್ಸೆಗೆ ಬಂದಿದ್ದ ಮಹಿಳೆಯೊಬ್ಬರ ತಲೆಗೆ ನೇರವಾಗಿ ಬಿದ್ದಿದೆ.

ಸಿಲಿಂಗ್ ಕುಸಿದ ಪರಿಣಾಮ ಮಹಿಳೆಯ ತಲೆಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲೇ ಅವರಿಗೆ ತುರ್ತು ಚಿಕಿತ್ಸೆ ನೀಡಲಾಗಿದೆ. ವಿಧಾನಸೌಧ ಅಥವಾ ನಾಯಕರ ಸಭಾಂಗಣಗಳ ಛಾವಣಿ ಎಂದಾದರೂ ಕುಸಿದುಬಿದ್ದು ಯಾವುದೇ ಶಾಸಕರು ಅಥವಾ ನಾಯಕರಿಗೆ ಗಾಯವಾಗಿದ್ದನ್ನು ನೀವು ಎಂದಾದರೂ ನೋಡಿದ್ದೀರಾ? ಆದರೆ, ಬಡವರು ಹಾಗೂ ಸಾಮಾನ್ಯ ಜನರು ಬರುವ ಸರ್ಕಾರಿ ಶಾಲೆಗಳು, ಕಾಲೇಜುಗಳು ಮತ್ತು ಆಸ್ಪತ್ರೆಗಳ ಕಟ್ಟಡಗಳು ಮಾತ್ರ ದಿನನಿತ್ಯ ಕುಸಿಯುತ್ತಿರುವುದು ದುರಂತ.

ಇದನ್ನೂ ಓದಿ:  ಉತ್ತರಾಖಂಡದಲ್ಲಿ ಯುವಕನ ಸಾಹಸ: ರಭಸದಿಂದ ಹರಿಯುವ ನದಿಯಿಂದ ಕರುವನ್ನು ರಕ್ಷಿಸಿದ ಸಾಹಸಿ

ಇಲ್ಲಿದೆ ನೋಡಿ ವಿಡಿಯೋ:

ಚೂರು ಜಿಲ್ಲೆಯ ಈ ಘಟನೆಯು ಸರ್ಕಾರಿ ಕಟ್ಟಡಗಳ ನಿರ್ವಹಣೆ ಹಾಗೂ ಕಳಪೆ ಕಾಮಗಾರಿಗೆ ಸಾಕ್ಷಿಯಾಗಿದೆ. ಆಸ್ಪತ್ರೆ ಕಟ್ಟಡದ ಕಳಪೆ ಕಾಮಗಾರಿಗೆ ಕಾರಣರಾದ ಗುತ್ತಿಗೆದಾರರು ಮತ್ತು ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಹಾಗೂ ರೋಗಿಗಳ ಸಂಬಂಧಿಕರು ತೀವ್ರವಾಗಿ ಆಗ್ರಹಿಸಿದ್ದಾರೆ. ಬಡವರು ಚಿಕಿತ್ಸೆಗೆ ಬರುವ ಸರ್ಕಾರಿ ಆಸ್ಪತ್ರೆಗಳಲ್ಲೇ ಜೀವಕ್ಕೆ ಅಭದ್ರತೆ ಉಂಟಾಗಿರುವುದು ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯವನ್ನು ಎತ್ತಿಹಿಡಿದಿದೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ