ಬ್ಯಾಂಕಾಕ್ : ಥೈಲ್ಯಾಂಡ್‌ನ ರಾಜಧಾನಿ ಬ್ಯಾಂಕಾಕ್ ಸಮೀಪದ ನೋಂಥಬುರಿ ಪ್ರಾಂತ್ಯದಲ್ಲಿ ಭೀಕರ ಹಾಗೂ ಕರುಣಾಜನಕ ಶೂಟೌಟ್ ಘಟನೆಯೊಂದು ನಡೆದಿದೆ. 14 ವರ್ಷದ ಹದಿಹರೆಯದ ಶಾಲಾ ವಿದ್ಯಾರ್ಥಿಯೊಬ್ಬ ತನ್ನ ಮನೆಯಲ್ಲಿದ್ದ ಅಜ್ಜ-ಅಜ್ಜಿಯನ್ನು ಗುಂಡಿಕ್ಕಿ ಕೊಂದ ನಂತರ ಶಾಲೆಯ ಆವರಣಕ್ಕೆ ನುಗ್ಗಿ ಬೇಕಾಬಿಟ್ಟಿ ಗುಂಡಿನ ದಾಳಿ ನಡೆಸಿದ್ದಾನೆ.
ಈ ಭೀಕರ ದಾಳಿಯಲ್ಲಿ ದಾಳಿಕೋರ ವಿದ್ಯಾರ್ಥಿ ಸೇರಿದಂತೆ ಒಟ್ಟು 8 ಜನರು ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. 9ನೇ ತರಗತಿಯ ವಿದ್ಯಾರ್ಥಿ ಶಾಲೆಗೆ ತೆರಳುವ ಮುನ್ನ ತನ್ನ ನಿವಾಸದಲ್ಲಿ ಅಜ್ಜ ಹಾಗೂ ಅಜ್ಜಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ.
ಬಳಿಕ ಬ್ಯಾಂಕಾಕ್‌ನ ‘ಡೆಬ್‌ಸಿರಿನ್ ನೋಂಥಬುರಿ’ ಶಾಲೆಗೆ ಆಗಮಿಸಿ, ತರಗತಿ ಕೊಠಡಿ ಹಾಗೂ ಶಾಲಾ ಆವರಣದಲ್ಲಿದ್ದ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಮೇಲೆ ದಿಢೀರ್ ಗುಂಡಿನ ದಾಳಿ ನಡೆಸಿದ್ದಾನೆ. ಶಾಲೆಯಲ್ಲಿದ್ದ ಶಿಕ್ಷಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ದಾಳಿಗೆ ಬಲಿಯಾಗಿದ್ದಾರೆ.
ಇದನ್ನೂ ಓದಿ: ಪಂಚ್ ಹೊಡೆಯುವ ಮುನ್ನವೇ ಲವ್ಲಿನಾ ಕಮಾಲ್: 2026ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತಕ್ಕೆ ‘ಫಸ್ಟ್ ಮೆಡಲ್’
ದಾಳಿಯ ಬಳಿಕ ವಿದ್ಯಾರ್ಥಿ ಶಾಲೆಯ ಕೊಠಡಿಯೊಂದರಲ್ಲಿ ತನಗೆ ತಾನೇ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾನೆ. ಕುಟುಂಬದ ಹಿರಿಯ ಸದಸ್ಯರ (ಅಜ್ಜ) ಹೆಸರಲ್ಲಿದ್ದ ಲೈಸೆನ್ಸ್ಡ್ ಬಂದೂಕನ್ನು ವಿದ್ಯಾರ್ಥಿ ಕದ್ದು ತಂದಿದ್ದ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

