ದಾವಣಗೆರೆ: ದಾವಣಗೆರೆ ತಾಲೂಕಿನ ಟೋಲ್ ಪ್ಲಾಜಾ (ಹೆಬ್ಬಾಳ ಟೋಲ್) ಬಳಿ ಭೀಕರ ರಸ್ತೆ ಅಪಘಾತವೊಂದು ಸಂಭವಿಸಿದ್ದು, ಕಂಟೇನರ್ ಲಾರಿಯೊಂದು ಕಾರಿಗೆ ಹಿಂಬದಿಯಿಂದ ರಭಸವಾಗಿ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದು, ಭಾರಿ ದುರಂತವೊಂದು ತಪ್ಪಿದೆ. ಟೋಲ್ ಗೇಟ್ ಬಳಿ ಶುಲ್ಕ (Toll Fee) ಪಾವತಿಸಲು ಕಾರು ನಿಂತಿತ್ತು.
ಇದೇ ವೇಳೆ ಹಿಂಬದಿಯಿಂದ ಅತಿ ವೇಗದಲ್ಲಿ ಬಂದ ಕಂಟೇನರ್ ಲಾರಿ ಚಾಲಕನ ನಿಯಂತ್ರಣ ತಪ್ಪಿ, ನಿಂತಿದ್ದ ಕಾರಿಗೆ ಪ್ರಚಂಡ ರಭಸದಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿಯ ಭರಕ್ಕೆ ಕಾರು ಮುಂಭಾಗಕ್ಕೆ ತಳ್ಳಲ್ಪಟ್ಟು ಸಂಪೂರ್ಣ ಜಜ್ಜುಬಿದ್ದಿದೆ. ಕಾರಿನಲ್ಲಿದ್ದ ಪ್ರಯಾಣಿಕರು ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದು, ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಇದನ್ನೂ ಓದಿ: ಡ್ಯಾನ್ಸ್ ಚಿತ್ರೀಕರಣದಲ್ಲಿ ರಶ್ಮಿಕಾ ಮಂದಣ್ಣಗೆ ಅಪರೂಪದ ಹಿಪ್ ಇಂಜುರಿ! ರಣಬಾಳಿ ಅಥವಾ ಮೈಸಾ ಶೂಟಿಂಗ್ ವಿಳಂಬ
ಇಲ್ಲಿದೆ ನೋಡಿ ವಿಡಿಯೋ:
Major accident averted in Davanagere
Toll plazaAt the Toll Gate in Davanagere taluk, a container truck travelling at very high speed from behind rammed into a car that was stopped to pay the toll fee.
Due to the force of the collision, the car was pushed forward. Fortunately,… pic.twitter.com/8OOGoJKWXR— Karnataka Portfolio (@karnatakaportf) August 11, 2026
ಟೋಲ್ ಪ್ಲಾಜಾದ ಸಿಎಸ್ಟಿವಿ (CCTV) ಕ್ಯಾಮೆರಾದಲ್ಲಿ ಈ ಭಯಾನಕ ಅಪಘಾತದ ದೃಶ್ಯ ಸಂಪೂರ್ಣವಾಗಿ ಸೆರೆಯಾಗಿದೆ. ಲಾರಿ ವೇಗವಾಗಿ ಬಂದು ಕಾರಿಗೆ ಅಪ್ಪಳಿಸುವ ದೃಶ್ಯ ನಡುಕ ಹುಟ್ಟಿಸುವಂತಿದೆ. ಘಟನೆ ಕುರಿತು ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಲಾರಿ ಚಾಲಕನ ವಿರುದ್ಧ ತನಿಖೆ ಮುಂದುವರಿಸಿದ್ದಾರೆ.

