Breaking News

ಕೆಎಫ್‌ಸಿ ದಾಳಿ ಬೆನ್ನಲ್ಲೇ ಮೈಸೂರಿನಲ್ಲೂ ಆಹಾರ ಸುರಕ್ಷತಾ ಇಲಾಖೆ ಭರ್ಜರಿ ಕಾರ್ಯಾಚರಣೆ: ಸ್ಟಾರ್ ಹೋಟೆಲ್‌ಗಳಿಂದ ಕೊಳೆತ, ಅವಧಿ ಮೀರಿದ ಮಾಂಸ ಜಪ್ತಿ

ಮೈಸೂರು : ಮಂಗಳೂರಿನ ಕೆಎಫ್‌ಸಿ ಮಳಿಗೆ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳು ದಾಳಿ ನಡೆಸಿದ ಬೆನ್ನಲ್ಲೇ, ಇದೀಗ ಸಾಂಸ್ಕೃತಿಕ ನಗರಿ ಮೈಸೂರು ನಗರ ಹಾಗೂ ಜಿಲ್ಲಾದ್ಯಂತ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆ ಅಧಿಕಾರಿಗಳು ದಿಢೀರ್ ತಪಾಸಣೆ ಪ್ರಕ್ರಿಯೆ ಚುರುಕುಗೊಳಿಸಿದ್ದಾರೆ.

ಗ್ರಾಂಡ್ ಮರ್ಕ್ಯೂರ್ ಹಾಗೂ ರಿಯೋ ಮೆರಿಡಿಯನ್‌ನಂತಹ ನಗರದ ಪ್ರಸಿದ್ಧ ಹಾಗೂ ಐಷಾರಾಮಿ ಸ್ಟಾರ್ ಹೋಟೆಲ್‌ಗಳ ಮೇಲೆ ಅಧಿಕಾರಿಗಳು ನಡೆಸಿದ ದಾಳಿ ವೇಳೆ ಬೃಹತ್ ಪ್ರಮಾಣದ ಅವಧಿ ಮೀರಿದ ಮಾಂಸ ಹಾಗೂ ತರಕಾರಿ ಪತ್ತೆಯಾಗಿದ್ದು, ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದೆ.ಪರಿಶೀಲನೆ ವೇಳೆ 9 ಕೆಜಿ ಅವಧಿ ಮೀರಿದ ಚಿಕನ್ ಪತ್ತೆಯಾಗಿದ್ದು, ಅಧಿಕಾರಿಗಳು ಅದನ್ನು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: Viral: ವಿಜಯ್, ರಶ್ಮಿಕಾ ಮದುವೆ ಲೈವ್‌ಗೆ 60 ಕೋಟಿ ಆಫರ್!

ವಶಪಡಿಸಿಕೊಂಡ ಆಹಾರ ಪದಾರ್ಥಗಳನ್ನು ಹಾಗೂ ಸ್ಯಾಂಪಲ್‌ಗಳನ್ನು ಕಳುಹಿಸಿಕೊಟ್ಟು ಆಡಳಿತ ಮಂಡಳಿಗಳಿಗೆ ನೋಟಿಸ್ ನೀಡಲಾಗಿದೆ. ಈ ಕುರಿತು ಆಹಾರ ಸುರಕ್ಷತಾ ಇಲಾಖೆ ತೀವ್ರ ತನಿಖೆ ಮುಂದುವರಿಸಿದ್ದು, ಪ್ರಯೋಗಾಲಯದ ವರದಿ ಬಂದ ನಂತರ ತಪ್ಪಿತಸ್ಥ ಹೋಟೆಲ್ ಮಾಲೀಕರು ಹಾಗೂ ನಿರ್ವಹಣಾ ಮಂಡಳಿ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *