Breaking News

ಚಿನ್ನದ ಬೆಲೆಯಲ್ಲಿ ಅಲ್ಪ ಏರಿಕೆ: ಆ.18ರ ಪ್ರಮುಖ ನಗರಗಳ ಇಂದಿನ ಆಭರಣ ಚಿನ್ನದ ದರ ಪಟ್ಟಿ

ದೆಹಲಿ : ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಕೊಂಚ ಇಳಿಕೆಯಾಗಿದ್ದರೂ, ಭಾರತೀಯ ಮಾರುಕಟ್ಟೆಯಲ್ಲಿ ಮಂಗಳವಾರ (ಆ.18) ಚಿನ್ನದ ದರ ಸ್ಥಿರತೆಯೊಂದಿಗೆ ಅಲ್ಪ ಏರಿಕೆಯನ್ನು ಕಂಡಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಪ್ರತಿ ಗ್ರಾಂ ಚಿನ್ನದ ಬೆಲೆಯಲ್ಲಿ 1 ರೂಪಾಯಿ ಹೆಚ್ಚಳವಾಗಿದೆ. ಪ್ರಸ್ತುತ 24 ಕ್ಯಾರೆಟ್ (ಅಪರಂಜಿ) ಚಿನ್ನದ ಬೆಲೆ 10 ಗ್ರಾಂಗೆ ₹1,55,670 ತಲುಪಿದ್ದು, ಆಭರಣ ತಯಾರಿಕೆಗೆ ಬಳಸುವ 22 ಕ್ಯಾರೆಟ್ ಚಿನ್ನದ ದರ 10 ಗ್ರಾಂಗೆ ₹1,42,710 ರಷ್ಟಿದೆ.

ಆ.18 ರ ಇಂದಿನ ಚಿನ್ನದ ದರ ಪಟ್ಟಿ (ಪ್ರತಿ ಗ್ರಾಂಗೆ):

24 ಕ್ಯಾರೆಟ್ (ಅಪರಂಜಿ): ₹15,567 (10 ಗ್ರಾಂಗೆ: ₹1,55,670)

22 ಕ್ಯಾರೆಟ್ (ಆಭರಣ ಚಿನ್ನ): ₹14,271 (10 ಗ್ರಾಂಗೆ: ₹1,42,710)

18 ಕ್ಯಾರೆಟ್: ₹11,677 (10 ಗ್ರಾಂಗೆ: ₹1,16,770)

ಇದನ್ನೂ ಓದಿ: ಇಪಿಎಫ್ ಖಾತೆದಾರರೇ ಎಚ್ಚರ: ಈ ನಿಯಮ ಪಾಲಿಸದಿದ್ದರೆ ನಿವೃತ್ತಿ ಹಣಕ್ಕೆ ಸಿಗುವುದಿಲ್ಲ ಬಡ್ಡಿ

ಮುಖ ನಗರಗಳಲ್ಲಿ ಇಂದಿನ ಬೆಲೆ ವಿವರ :

ಬೆಂಗಳೂರು, ಮುಂಬೈ, ಕೋಲ್ಕತ್ತಾ, ಹೈದರಾಬಾದ್, ಪುಣೆ:

24 ಕ್ಯಾರೆಟ್: ₹15,567 / ಗ್ರಾಂ

22 ಕ್ಯಾರೆಟ್: ₹14,271 / ಗ್ರಾಂ

ದೆಹಲಿ (ಅತ್ಯಂತ ದುಬಾರಿ):

24 ಕ್ಯಾರೆಟ್: ₹15,582 / ಗ್ರಾಂ

22 ಕ್ಯಾರೆಟ್: ₹14,286 / ಗ್ರಾಂ

ಅಹಮದಾಬಾದ್:

24 ಕ್ಯಾರೆಟ್: ₹15,572 / ಗ್ರಾಂ

ಚೆನ್ನೈ:

24 ಹಾಗೂ 22 ಕ್ಯಾರೆಟ್ ದರಗಳು ಬೆಂಗಳೂರಿನಂತೆಯೇ ಇದ್ದರೂ, ಇಲ್ಲಿ 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹12,051 ರಷ್ಟಿದೆ (ಇತರ ನಗರಗಳಿಗಿಂತ ಕೊಂಚ ಹೆಚ್ಚಳ).

ಜಾಗತಿಕ ಕಾಮೆಕ್ಸ್ (COMEX) ಮಾರುಕಟ್ಟೆಯಲ್ಲಿ ಚಿನ್ನದ ಭವಿಷ್ಯದ ಬೆಲೆ ಶೇ. 0.51 ರಷ್ಟು ಕುಸಿದು ಪ್ರತಿ ಔನ್ಸ್ ಗೆ $4,450.80 ತಲುಪಿದೆ. ಇತ್ತ ಬೆಳ್ಳಿ ಬೆಲೆಯೂ ಶೇ. 1.32 ರಷ್ಟು ಇಳಿಕೆಯಾಗಿ ಪ್ರತಿ ಔನ್ಸ್ ಗೆ $65.36 ತಲುಪಿದೆ. ಸೋಮವಾರ ಬೆಳಿಗ್ಗೆ 24 ಕ್ಯಾರೆಟ್ ಚಿನ್ನದ ಬೆಲೆ ಗ್ರಾಂಗೆ ₹15,512 ಇತ್ತು. ಆದರೆ, ವಹಿವಾಟು ಮುಕ್ತಾಯದ ವೇಳೆಗೆ ಸೋಮವಾರದ ಪರಿಷ್ಕೃತ ದರ ಪ್ರತಿ ಗ್ರಾಂಗೆ ₹54 (10 ಗ್ರಾಂಗೆ ₹540) ಹೆಚ್ಚಳಗೊಂಡು ₹15,566 ರಲ್ಲಿ ದಾಖಲಾಗಿತ್ತು. ಹೀಗಾಗಿ ಮಂಗಳವಾರದ ಬೆಲೆಯಲ್ಲಿ ಕೇವಲ ₹1 ಏರಿಕೆ ಕಂಡುಬಂದಿದೆ.

ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *