ಬೆಂಗಳೂರು : ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ವಿರುದ್ಧ ‘ಸಾಲು ಸಾಲಾಗಿ ಸಾವಿರ ತಲೆಗಳಿರುವ ವಿಷಕಾರಿ ಸರ್ಪ’ ಎಂದು ವಾಗ್ದಾಳಿ ನಡೆಸಿದ್ದ ಕಾಂಗ್ರೆಸ್ ನಾಯಕ ಹಾಗೂ ಸಚಿವ ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗೆ ಬಿಜೆಪಿ ನಾಯಕ ಸಿ.ಟಿ. ರವಿ ತೀವ್ರ ತಿರುಗೇಟು ನೀಡಿದ್ದಾರೆ. ಯತೀಂದ್ರ ಅವರ ಹೇಳಿಕೆಯನ್ನು ಕಟುವಾಗಿ ಖಂಡಿಸಿರುವ ಸಿ.ಟಿ. ರವಿ, “ಕಾಂಗ್ರೆಸ್ನಲ್ಲಿ ಆರೆಸ್ಸೆಸ್ ಅನ್ನು ವಿರೋಧಿಸಿದರೆ ಮಾತ್ರ ಪ್ರಮೋಷನ್ ಸಿಗುತ್ತದೆ” ಎಂದು ಲೇವಡಿ ಮಾಡಿದ್ದಾರೆ.
“ಯತೀಂದ್ರ ಅವರಿಗೆ ಆರೆಸ್ಸೆಸ್ (RSS) ಸಂಸ್ಥೆಯ ಬಗ್ಗೆ ಯಾವುದೇ ಕನಿಷ್ಠ ಜ್ಞಾನವೂ ಇಲ್ಲ. ಆರೆಸ್ಸೆಸ್ ಕಳೆದ 100 ವರ್ಷಗಳಿಂದ ಸಮಾಜದ ಏಳಿಗೆಗಾಗಿ ನಿರಂತರವಾಗಿ ಶ್ರಮಿಸುತ್ತಿದೆ” ಎಂದು ರವಿ ತಿರುಗೇಟು ನೀಡಿದ್ದಾರೆ. “ಪ್ರಿಯಾಂಕ್ ಖರ್ಗೆ ಮತ್ತು ಯತೀಂದ್ರ ಸಿದ್ದರಾಮಯ್ಯ ಅವರಂತಹ ನಾಯಕರು ತಳಮಟ್ಟದಲ್ಲಿ ಶ್ರಮಿಸಿ ಈ ಹಂತಕ್ಕೆ ಬಂದವರಲ್ಲ. ಅವರಿಬ್ಬರೂ ಕೇವಲ ತಮ್ಮ ತಂದೆಯಂದಿರ (ಮಲ್ಲಿಕಾರ್ಜುನ ಖರ್ಗೆ ಮತ್ತು ಸಿದ್ದರಾಮಯ್ಯ) ಹೆಸರಿನಿಂದಷ್ಟೇ ಈ ಅಧಿಕಾರ ಅನುಭವಿಸುತ್ತಿದ್ದಾರೆ.” ಎಂದು ಹೇಳಿದ್ದಾರೆ.
ಇದನ್ನೂ ಓದಿ,:ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಕೊಡಿಪ್ಪಾಡಿ-ಕುಳ ಘಟಕದ ವತಿಯಿಂದ ಆ.9ರಂದು ಉಚಿತ ವೈದ್ಯಕೀಯ ತಪಾಸಣೆ, ರಕ್ತದಾನ ಶಿಬಿರ
“ದೇಶಪ್ರೇಮಿ ಸಂಘಟನೆಯಾದ ಆರೆಸ್ಸೆಸ್ ವಿರುದ್ಧ ಸುಳ್ಳುಗಳನ್ನು ಹರಡುವುದು, ನಿರಂತರವಾಗಿ ಟೀಕಿಸುವುದು ಮತ್ತು ಸಂಘದ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಿಸುವುದು ಕಾಂಗ್ರೆಸ್ನ ಹಳೆಯ ಎಜೆಂಡಾ ಆಗಿದೆ. ಕಾಂಗ್ರೆಸ್ನಲ್ಲಿ ಆರೆಸ್ಸೆಸ್ ಬೈದರೆ ಮಾತ್ರ ನಾಯಕರಿಗೆ ಪ್ರಮೋಷನ್ ನೀಡಲಾಗುತ್ತದೆ” ಎಂದು ಸಿ.ಟಿ. ರವಿ ಖಾರವಾಗಿ ಹೇಳಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

