ಪುತ್ತೂರು : ಮಂಗಳೂರಿನ ಶಕ್ತಿನಗರದ ಶಕ್ತಿ ವಸತಿ ಶಾಲೆಯಲ್ಲಿ ವಿದ್ಯಾಭಾರತಿ ವತಿಯಿಂದ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಈಜು ಸ್ಪರ್ಧೆಯಲ್ಲಿ ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿ.ಬಿ.ಎಸ್.ಇ. ಸಂಸ್ಥೆಯ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿ ಸಾಲು ಸಾಲು ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ವಿವಿಧ ವಯೋಮಾನದ ವಿಭಾಗಗಳಲ್ಲಿ ಜರುಗಿದ ಕಠಿಣ ಸ್ಪರ್ಧೆಯಲ್ಲಿ ಅಂಬಿಕಾ ಶಾಲೆಯ ಈಜುಪಟುಗಳು ನೀಡಿದ ಸಾಧನೆಯ ವಿವರ ಇಲ್ಲಿದೆ.
ಸಾಧನೆ ಮಾಡಿದ ವಿದ್ಯಾರ್ಥಿಗಳ ಪಟ್ಟಿ ಹಾಗೂ ಪದಕಗಳ ವಿವರ:
1. ಕಿಶೋರ ವರ್ಗ (ಬಾಲಕರು):
ಅನಿತೇಜ್ ಮಧುಸೂದನ್ ಸಾಲೆ (10ನೇ ತರಗತಿ): 800 ಮೀ. ಫ್ರೀಸ್ಟೈಲ್, 200 ಮೀ. ಬ್ಯಾಕ್‌ಸ್ಟ್ರೋಕ್ ಹಾಗೂ 100 ಮೀ. ಬ್ಯಾಕ್‌ಸ್ಟ್ರೋಕ್‌ನಲ್ಲಿ 3 ಚಿನ್ನದ ಪದಕ.
ಲಲನ್ ಯು. ನಾಯಕ್ (10ನೇ ತರಗತಿ): 200 ಮೀ. ಫ್ರೀಸ್ಟೈಲ್‌ನಲ್ಲಿ ಚಿನ್ನ, 100 ಮೀ. ಬ್ಯಾಕ್‌ಸ್ಟ್ರೋಕ್ ಹಾಗೂ 400 ಮೀ. ಫ್ರೀಸ್ಟೈಲ್‌ನಲ್ಲಿ 2 ಬೆಳ್ಳಿ ಪದಕ.
ಕಿಶೋರ ವರ್ಗ (ಬಾಲಕಿಯರು):
ಮೆಹೆಕ್ ರವಿಕುಮಾರ್ ಕೊಠಾರಿ (10ನೇ ತರಗತಿ): 100 ಮೀ. ಹಾಗೂ 200 ಮೀ. ಬ್ಯಾಕ್‌ಸ್ಟ್ರೋಕ್‌ನಲ್ಲಿ 2 ಚಿನ್ನ, 50 ಮೀ. ಬಟರ್‌ಫ್ಲೈನಲ್ಲಿ ಬೆಳ್ಳಿ ಪದಕ.
ರೀಶಾ ಪಿ. ಶೆಟ್ಟಿ (8ನೇ ತರಗತಿ): 100 ಮೀ. ಹಾಗೂ 200 ಮೀ. ಫ್ರೀಸ್ಟೈಲ್‌ನಲ್ಲಿ 2 ಬೆಳ್ಳಿ, 50 ಮೀ. ಬಟರ್‌ಫ್ಲೈನಲ್ಲಿ ಕಂಚಿನ ಪದಕ.
ಬಾಲ ವರ್ಗ (ಬಾಲಕರು):
ಪ್ರತ್ಯುಷ್ ಎಲ್. ಎಸ್. ಗೌಡ (8ನೇ ತರಗತಿ): 50 ಮೀ. ಬಟರ್‌ಫ್ಲೈ, 50 ಮೀ. ಹಾಗೂ 100 ಮೀ. ಬ್ಯಾಕ್‌ಸ್ಟ್ರೋಕ್, 4×100 ಮೀ. ಫ್ರೀಸ್ಟೈಲ್ ರಿಲೇ ಮತ್ತು 4×100 ಮೀ. ಐ.ಎಂ. ರಿಲೇಯಲ್ಲಿ 5 ಚಿನ್ನದ ಪದಕ.
ದೀಪಾಂಶ್ ಶೆಟ್ಟಿ (8ನೇ ತರಗತಿ): 50 ಮೀ. ಹಾಗೂ 100 ಮೀ. ಫ್ರೀಸ್ಟೈಲ್, 4×100 ಮೀ. ಫ್ರೀಸ್ಟೈಲ್ ರಿಲೇ ಮತ್ತು 4×100 ಮೀ. ಐ.ಎಂ. ರಿಲೇಯಲ್ಲಿ 4 ಚಿನ್ನ, 200 ಮೀ. ಫ್ರೀಸ್ಟೈಲ್‌ನಲ್ಲಿ ಬೆಳ್ಳಿ ಪದಕ.
ಶ್ರೀಹಾನ್ ಗೌಡ ಕೆ.ಜೆ (6ನೇ ತರಗತಿ): 4×100 ಮೀ. ಫ್ರೀಸ್ಟೈಲ್ ರಿಲೇ, 200 ಮೀ. ಬ್ಯಾಕ್‌ಸ್ಟ್ರೋಕ್‌ನಲ್ಲಿ 2 ಚಿನ್ನ, 100 ಮೀ. ಬಟರ್‌ಫ್ಲೈನಲ್ಲಿ ಬೆಳ್ಳಿ, 400 ಮೀ. ಫ್ರೀಸ್ಟೈಲ್ ಮತ್ತು 100 ಮೀ. ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ 2 ಕಂಚಿನ ಪದಕ.
ವಿಹಾನ್ ರವಿಕುಮಾರ್ ಕೊಠಾರಿ (6ನೇ ತರಗತಿ): 4×100 ಮೀ. ಐ.ಎಂ. ರಿಲೇಯಲ್ಲಿ ಚಿನ್ನ, 100 ಮೀ. ಬ್ಯಾಕ್‌ಸ್ಟ್ರೋಕ್ ಮತ್ತು 200 ಮೀ. ಐ.ಎಂ.ನಲ್ಲಿ 2 ಬೆಳ್ಳಿ ಪದಕ.
ದೈವಿಕ್ ದೇವಾಡಿಗ (6ನೇ ತರಗತಿ): 50 ಮೀ. ಬ್ರೆಸ್ಟ್‌ಸ್ಟ್ರೋಕ್ ಮತ್ತು 50 ಮೀ. ಬಟರ್‌ಫ್ಲೈನಲ್ಲಿ 2 ಬೆಳ್ಳಿ ಪದಕ.
ನಿಶಾನ್ ಎಸ್ (6ನೇ ತರಗತಿ): 4×100 ಮೀ. ಐ.ಎಂ. ರಿಲೇಯಲ್ಲಿ ಚಿನ್ನದ ಪದಕ.
ಇದನ್ನೂ ಓದಿ: ಅಂಬಿಕಾ ಸಂಸ್ಥೆಗಳಲ್ಲಿ ಮಾಜಿ ಸೈನಿಕರ ಸಮ್ಮಿಲನ-ಭೋಜನಕೂಟ: ವಿಶಿಷ್ಟ ರೀತಿಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ
ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ವಿದ್ಯಾಲಯಕ್ಕೆ ಕೀರ್ತಿ ತಂದ ಎಲ್ಲಾ ವಿದ್ಯಾರ್ಥಿಗಳಿಗೆ, ತರಬೇತುದಾರರಿಗೆ ಹಾಗೂ ಪ್ರೋತ್ಸಾಹಿಸಿದ ಪೋಷಕರಿಗೆ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದ ಹಾರ್ದಿಕ ಅಭಿನಂದನೆ ಸಲ್ಲಿಸಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

