ಬಂಟ್ವಾಳ: ತಾಲೂಕಿನ ಮಂಚಿ ಗ್ರಾಮದ ಶ್ರೀ ಕೃಷ್ಣ ಯುವಕ ಮಂಡಲ ನೂಜಿ ಇದರ ಆಶ್ರಯದಲ್ಲಿ 3ನೇ ವರ್ಷದ ‘ಕೆಸರ್ಡ್ ಒಂಜಿ ದಿನ’ ಗ್ರಾಮೀಣ ಕ್ರೀಡಾಕೂಟವು ಆಗಸ್ಟ್ 16ರಂದು ನೂಜಿಯ ಜಯದೇವ್ ಭಟ್ ಅವರ ಗದ್ದೆಯಲ್ಲಿ ಅತ್ಯಂತ ಸಂಭ್ರಮ-ಉತ್ಸಾಹದಿಂದ ನಡೆಯಿತು.
ಕ್ರೀಡಾಕೂಟದ ಜೊತೆಗೆ ಸಾಮಾಜಿಕ ಕಳಕಳಿಯ ಭಾಗವಾಗಿ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಕೃಷ್ಣ ಯುವಕ ಮಂಡಲದ ಅಧ್ಯಕ್ಷ ಶ್ರೀದೇವಿ ಪ್ರಮೋದ್ ಭಟ್ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸತೀಶ್ ಆಳ್ವ ಇರಾ ಬಾಳಿಕೆ, ಮೋಹನದಾಸ ಶೆಟ್ಟಿ ಪುದ್ದೋಟು, ಜಯದೇವ ಭಟ್ ನೂಜಿ, ದಿವಾಕರ ನಾಯಕ್ ಕುಂಟೂರು ಹಾಗೂ ಗೋವಿಂದ ನಾಯಕ್ ಆಳಾಬೆ ಉಪಸ್ಥಿತರಿದ್ದು ಶುಭ ಹಾರೈಸಿದರು.
ಇದನ್ನೂ ಓದಿ: ಅಂಬಿಕಾ ಸಂಸ್ಥೆಗಳಲ್ಲಿ ಮಾಜಿ ಸೈನಿಕರ ಸಮ್ಮಿಲನ-ಭೋಜನಕೂಟ: ವಿಶಿಷ್ಟ ರೀತಿಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ
ಕ್ರೀಡಾಕೂಟದ ಸುಸಂದರ್ಭದಲ್ಲಿ ಸ್ಥಳೀಯ ಶಾಲಾ ಮಕ್ಕಳಿಗೆ ಕಲಿಕಾ ಸಾಮಗ್ರಿ/ಪುಸ್ತಕಗಳನ್ನು ವಿತರಿಸಲಾಯಿತು. ಅಲ್ಲದೆ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಗೈದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಿ ಸನ್ಮಾನಿಸಲಾಯಿತು.
ನೂಜಿಯ ಕೆಸರು ಗದ್ದೆಯಲ್ಲಿ ನಡೆದ ವಿವಿಧ ಸಂಪ್ರದಾಯಿಕ ಕ್ರೀಡಾ ಸ್ಪರ್ಧೆಗಳಲ್ಲಿ ಗ್ರಾಮಸ್ಥರು ಹಾಗೂ ಯುವಕರು ಅತ್ಯಂತ ಉತ್ಸಾಹದಿಂದ ಭಾಗವಹಿಸಿ ಗ್ರಾಮೀಣ ಸಂಸ್ಕೃತಿಯನ್ನು ಪೋಷಿಸಿದರು.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

