ತಿರುಚಿರಾಪಳ್ಳಿ: ತಮಿಳು ಚಿತ್ರರಂಗದ ಪ್ರಸಿದ್ಧ ನಟ ವಿಮಲ್ (Actor Vimal) ತಮ್ಮ ಸ್ವಂತ ಊರಾದ ತಿರುಚಿರಾಪಳ್ಳಿ ಜಿಲ್ಲೆಯ ಮಣಪ್ಪಾರೈ ಬಳಿಯ ಪನ್ನಂಗೊಂಬು ಎಂಬಲ್ಲಿ ನಡೆದ ಹೊಸ ವಾರದ ಸಂತೆಯಲ್ಲಿ ತರಕಾರಿ ಮಾರಿ ಎಲ್ಲರ ಗಮನ ಸೆಳೆದಿದ್ದಾರೆ.
ಸಿನಿಮಾ ಶೂಟಿಂಗ್ಗಾಗಿ ತಮ್ಮ ಊರಿಗೆ ಆಗಮಿಸಿದ್ದ ನಟ ವಿಮಲ್, ಸ್ಥಳೀಯ ತರಕಾರಿ ವ್ಯಾಪಾರಿಗಳೊಂದಿಗೆ ನೆಲದ ಮೇಲೆ ಕುಳಿತು ತರಕಾರಿಗಳನ್ನು ಕೈಯಲ್ಲಿ ಹಿಡಿದು ಬೆಲೆ ಕೂಗಿ ಮಾರಾಟ ಮಾಡಿದ್ದಾರೆ. ವ್ಯಾಪಾರಿಗಳಿಗೆ ನೆರವಾದ ಅವರು, ಸ್ಥಳಕ್ಕೆ ಬಂದ ಗ್ರಾಹಕರೊಂದಿಗೆ ಆತ್ಮೀಯವಾಗಿ ಮಾತನಾಡಿದ್ದಾರೆ. ನಿರ್ಗಮಿಸುವ ಮುನ್ನ ಕೆಲವು ಸಣ್ಣ ವ್ಯಾಪಾರಿಗಳಿಗೆ ತಲಾ ₹500 ನೀಡಿ ತೆರಳಿದ್ದಾರೆ. ಪ್ರಸ್ತುತ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇಲ್ಲಿದೆ ನೋಡಿ ವಿಡಿಯೋ:
View this post on Instagram
ಸಂತೆಯಲ್ಲಿ ತರಕಾರಿ ಮಾರಿದ ಈ ಘಟನೆ ನಡೆಯುವುದಕ್ಕೆ ಕೆಲವೇ ದಿನಗಳ ಮೊದಲು ನಟ ವಿಮಲ್ ₹4.5 ಕೋಟಿ ಚೆಕ್ ಬೌನ್ಸ್ ಪ್ರಕರಣದಲ್ಲಿ 1 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದರು.2018ರಲ್ಲಿ ನಟ ವಿಮಲ್ ಅಭಿನಯಿಸಿ, ನಿರ್ಮಿಸಿದ್ದ ‘ಮನ್ನಾರ್ ವಗೈಯಾರಾ’ (Mannar Vagaiyara) ಸಿನಿಮಾಗಾಗಿ ಫೈನಾನ್ಸಿಯರ್ ಗೋಪಿ ಎಂಬುವವರಿಂದ ₹4.5 ಕೋಟಿ ಸಾಲ ಪಡೆದಿದ್ದರು. ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಸೋತ ನಂತರ ನೀಡಿದ್ದ ಚೆಕ್, ಖಾತೆಯಲ್ಲಿ ಹಣವಿಲ್ಲದೆ ಬೌನ್ಸ್ ಆಗಿತ್ತು.
ಇದನ್ನೂ ಓದಿ: ನಟಿ ನಿಕಿತಾ ರಾವಲ್ ಗೆ ರೆಡ್ ಕಾರ್ಪೆಟ್ ಮೇಲೆಯೇ ಲಿಪ್-ಕಿಸ್ ಕೊಟ್ಟ ಅಭಿಮಾನಿ: ವಿಡಿಯೋ ವೈರಲ್
ಚೆನ್ನೈನ ಸಣ್ಣ ವ್ಯಾಜ್ಯಗಳ ನ್ಯಾಯಾಲಯವು ವಿಮಲ್ ಮೇಲಿನ ಆರೋಪ ಸಾಬೀತಾಗಿದೆ ಎಂದು ತೀರ್ಪು ನೀಡಿ 1 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಆದರೆ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಲು ಶಿಕ್ಷೆಯನ್ನು 1 ತಿಂಗಳು ಅಮಾನತಿನಲ್ಲಿಡಲಾಗಿದೆ (Stay). 2010ರಲ್ಲಿ ತೆರೆಕಂಡ ‘ಕಳವಾಣಿ’ (Kalavani) ಸೂಪರ್ ಹಿಟ್ ಸಿನಿಮಾ ಮೂಲಕ ವಿಮಲ್ ಪ್ರಸಿದ್ದಿ ಪಡೆದರು. ಬಳಿಕ ‘ವಾಗೈ ಸೂಡ ವಾ’, ‘ತೂಂಗಾ ನಗರಂ’, ‘ಕೇಡಿ ಬಿಲ್ಲಾ ಕಿಲಾಡಿ ರಂಗ’ ಮುಂತಾದ ಹಿಟ್ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಮಾರ್ಚ್ 6, 2026 ರಂದು ಬಿಡುಗಡೆಯಾದ ‘ವಡಂ’ (Vadam) ಹಾಗೂ ‘ಸಂಡಕ್ಕಾರಿ’ (Sandakkari) ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ತೀವ್ರ ಹಿನ್ನಡೆ ಅನುಭವಿಸಿದ್ದವು.

