ಮೇಷ ರಾಶಿ (Aries)
ಅತಿಯಾದ ಹೊಗಳಿಕೆಯಿಂದ ಮುಜುಗರಕ್ಕೊಳಗಾಗುವ ಸಾಧ್ಯತೆಯಿದೆ. ವ್ಯಾಪಾರಸ್ಥರು ಪ್ರಾಮಾಣಿಕತೆಯಿಂದ ವ್ಯವಹರಿಸಿದರೂ ಸವಾಲುಗಳನ್ನು ಎದುರಿಸಬೇಕಾಗಬಹುದು. ನಿಗದಿತ ಸಮಯಕ್ಕೆ ಜವಾಬ್ದಾರಿಗಳನ್ನು ಪೂರೈಸುವಿರಿ. ತಾಯಿಯ ಕಡೆಯ ಸಂಬಂಧಿಕರೊಂದಿಗೆ ಒಡನಾಟ ಹೆಚ್ಚಲಿದೆ. ಪ್ರೀತಿಯಲ್ಲಿ ಅಂದುಕೊಂಡಿದ್ದು ಸಿಗದೇ ನಿರಾಶೆಯಾಗಬಹುದು, ಜಾಗ್ರತೆಯಿಂದಿರಿ.
ವೃಷಭ ರಾಶಿ (Taurus)
ದೀರ್ಘಕಾಲದಿಂದ ಕಾಯುತ್ತಿದ್ದ ಶುಭ ವಾರ್ತೆ ಇಂದು ಲಭಿಸಲಿದೆ. ನಿಮ್ಮ ಯೋಜನೆಗಳಿಗೆ ಯಾರ ಅಡ್ಡಿಯೂ ಇರುವುದಿಲ್ಲ. ಲಾಭಗಳಿಸಲು ಹೊಸ ದಾರಿಗಳು ಕಾಣಿಸಲಿವೆ. ಯಾವುದೇ ಆಮಿಷಗಳಿಗೆ ಒಳಗಾಗದೆ ಯೋಚಿಸಿ ನಿರ್ಧಾರ ತಗೊಳ್ಳಿ. ಆರಂಭಿಸುವ ಕೆಲಸದ ಬಗ್ಗೆ ಪೂರ್ಣ ಮಾಹಿತಿ ಇರಲಿ ಹಾಗೂ ಮಕ್ಕಳಿಗೆ ಅಗತ್ಯ ವಸ್ತುಗಳನ್ನು ಒದಗಿಸುವಿರಿ.
ಮಿಥುನ ರಾಶಿ (Gemini)
ಅವಿವಾಹಿತರಿಗೆ ಹೆಚ್ಚಿನ ನಿರೀಕ್ಷೆ ಇರಲಿದೆ. ಬಹಳ ದಿನಗಳ ನಂತರ ಕುಟುಂಬದ ಸಂಬಂಧಗಳು ಗಟ್ಟಿಯಾಗಲಿವೆ. ಒಂದೇ ವಿಚಾರವನ್ನು ಮರಳಿ ಮರಳಿ ಹೇಳಿ ಇತರರಿಂದ ದೂರಾಗಬೇಡಿ. ಪ್ರಸ್ತುತ ಸಾಲ ಮಾಡುವುದನ್ನು ಸಂಪೂರ್ಣವಾಗಿ ತಡೆಯಿರಿ. ಕೆಲಸದಲ್ಲಿ ಮಗ್ನರಾಗಿ ಅನಗತ್ಯ ವಿಷಯಗಳಿಂದ ದೂರ ಉಳಿಯುವಿರಿ.
ಕರ್ಕಾಟಕ ರಾಶಿ (Cancer)
ಆರ್ಥಿಕ ಅಗತ್ಯತೆ ಹೆಚ್ಚಿರುವುದರಿಂದ ಹಣ ಗಳಿಕೆಯ ಹೊಸ ಮಾರ್ಗಗಳ ಬಗ್ಗೆ ಚಿಂತಿಸುವಿರಿ. ನಿಮ್ಮ ಅಭಿಪ್ರಾಯಗಳಿಗೆ ಕುಟುಂಬದಲ್ಲಿ ಗೌರವ ಸಿಗಲಿದೆ. ಕಳೆದುಹೋದ ವಸ್ತುವಿನ ಬಗ್ಗೆ ಅತಿಯಾದ ವ್ಯಾಮೋಹ ಬೇಡ. ಮಾತಿನಲ್ಲಿ ಮಿತಿಯಿರಲಿ ಮತ್ತು ಭಾವನೆಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ.
ಸಿಂಹ ರಾಶಿ (Leo)
ಇಂದು ನಿಮಗ ನೀವೇ ಆತ್ಮವಿಶ್ವಾಸ ಹಾಗೂ ಉತ್ತೇಜನ ನೀಡಬೇಕಾಗುತ್ತದೆ. ನೀಡಿದ್ದ ಸಾಲದ ಹಣ ಕೈಸೇರಬಹುದು. ಅತಿಯಾದ ಆತ್ಮವಿಶ್ವಾಸ ಹಾಗೂ ಆಲಸ್ಯ ಹಿನ್ನಡೆಗೆ ಕಾರಣವಾದೀತು. ಬೇಡವಾದದ್ದನ್ನು ಒತ್ತಾಯಪೂರ್ವಕವಾಗಿ ಪಡೆಯಬೇಡಿ. ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿ ಸಂಪತ್ತನ್ನು ಉಳಿಸಿಕೊಳ್ಳಿ.
ಕನ್ಯಾ ರಾಶಿ (Virgo)
ಹಿರಿಯರಿಂದ ಪ್ರಶಂಸೆ ಹಾಗೂ ಅವರೊಂದಿಗೆ ಕಾಲ ಕಳೆಯುವ ಅವಕಾಶ ಸಿಗಲಿದೆ. ಆರ್ಥಿಕ ವ್ಯವಹಾರಗಳ ಬಗ್ಗೆ ಸ್ಪಷ್ಟ ತಿಳುವಳಿಕೆ ಮೂಡಲಿದೆ. ಸಂಭಾಷಣೆಯಲ್ಲಿ ನಿಂದನೀಯ ಪದಗಳ ಬಳಕೆ ಬೇಡ. ಆಪ್ತರೊಂದಿಗೆ ಸಮಯ ಕಳೆಯುವಿರಿ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿರುವವರಿಗೆ ಹೊಸ ಸಾಧನೆಯ ಹಾದಿ ತೆರೆಯಲಿದೆ.
ತುಲಾ ರಾಶಿ (Libra)
ಪ್ರತಿಯೊಂದು ವಸ್ತುವಿನ ಸರಿಯಾದ ಬಳಕೆಯನ್ನು ತಿಳಿದು ಕೆಲಸ ಮಾಡಿ. ಜನರೊಂದಿಗೆ ಬೆರೆಯುವ ಮನಸ್ಸಾಗಲಿದೆ. ಮನೆಗೆ ದೂರದ ಸಂಬಂಧಿಗಳ ಆಗಮನವಾಗಬಹುದು. ಹಳೆಯ ಪದ್ಧತಿಗಳಿಗೆ ಒತ್ತು ನೀಡುವಿರಿ. ಕೆಲವೊಂದು ಗೊಂದಲಗಳಿಂದ ಏಕಾಂತ ಬಯಸುವಿರಿ ಮತ್ತು ದೂರದ ಪ್ರಯಾಣದ ಸಾಧ್ಯತೆಯಿದೆ.
ವೃಶ್ಚಿಕ ರಾಶಿ (Scorpio)
ಕ್ರೀಡೆ ಮತ್ತು ಸಾಮಾಜಿಕ ಕೆಲಸಗಳಲ್ಲಿ ಆಸಕ್ತಿಯಿಂದ ಭಾಗವಹಿಸುವಿರಿ. ಸ್ನೇಹಪರ ನಡವಳಿಕೆಯಿಂದ ಹೆಚ್ಚಿನ ಅನುಕೂಲ ಸಿಗಲಿದೆ. ನಿಮ್ಮ ಮಾತುಗಳನ್ನು ಇತರರು ತಪ್ಪಾಗಿ ಅರ್ಥೈಸಿಕೊಳ್ಳುವ ಸನ್ನಿವೇಶ ಬರಬಹುದು, ಎಚ್ಚರವಿರಲಿ. ಇತರರ ವಸ್ತುಗಳನ್ನು ಜವಾಬ್ದಾರಿಯಿಂದ ಕಾಯಬೇಕಾಗಬಹುದು.
ಧನು ರಾಶಿ (Sagittarius)
ನಿಮ್ಮ ಕೌಶಲ್ಯಗಳನ್ನು ಹಂಚಿಕೊಳ್ಳುವುದರಿಂದ ಮುಂದಿನ ಜೀವನೋಪಾಯಕ್ಕೆ ಹೊಸ ದಾರಿ ಸಿಗಲಿದೆ. ಆಲಸ್ಯವನ್ನು ತೊರೆದರೆ ಮಾತ್ರ ಆರ್ಥಿಕವಾಗಿ ಸಬಲರಾಗಲು ಸಾಧ್ಯ. ಮನೆಯಲ್ಲಿ ಸುಮ್ಮನೆ ಕುಳಿತುಕೊಳ್ಳುವುದು ಕಿರಿಕಿರಿ ತರಬಹುದು. ಯಾವುದೇ ಕಾರಣಕ್ಕೂ ಕಾನೂನು ವಿರೋಧಿ ನಡವಳಿಕೆಗಳಿಗೆ ಕೈಹಾಕಬೇಡಿ.
ಮಕರ ರಾಶಿ (Capricorn)
ಸಂಕಷ್ಟದಿಂದ ಪಾರಾಗಲು ಆತ್ಮೀಯರಿಂದ ಸೂಕ್ತ ಮಾರ್ಗದರ್ಶನ ಸಿಗಲಿದೆ. ಕಚೇರಿ ಕೆಲಸದಲ್ಲಿ ಒತ್ತಡ ಹೆಚ್ಚಾಗಬಹುದು. ಅನಗತ್ಯ ಜವಾಬ್ದಾರಿಗಳನ್ನು ತಲೆಯ ಮೇಲೆ ಹಾಕಿಕೊಳ್ಳಬೇಡಿ. ಇತರರ ಹಣಕಾಸಿನ ವಿಚಾರಗಳಲ್ಲಿ ತಲೆಹಾಕದಿರುವುದು ನಿಮ್ಮ ಶ್ರೇಯಸ್ಸಿಗೆ ಒಳಿತು.
ಕುಂಭ ರಾಶಿ (Aquarius)
ಆತುರದಲ್ಲಿ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಹಣಕಾಸಿನ ವಿಚಾರದಿಂದ ಆತ್ಮೀಯ ಸಂಬಂಧಗಳು ಹಾಳಾಗದಂತೆ ನೋಡಿಕೊಳ್ಳಿ. ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ. ವ್ಯಾಪಾರಸ್ಥರು ಗ್ರಾಹಕರೊಂದಿಗೆ ಉತ್ತಮ ಬಾಂಧವ್ಯ ಕಾಯ್ದುಕೊಂಡು ಲಾಭಗಳಿಸಬಹುದು.
ಮೀನ ರಾಶಿ (Pisces)
ನಿಮ್ಮ ಸಾಮರ್ಥ್ಯವನ್ನು ಅನಾವರಣಗೊಳಿಸಲು ಇಂದು ಸೂಕ್ತ ದಿನ. ಹಿರಿಯರ ಮನಸ್ಸಿಗೆ ಬೇಸರ ತರದಂತೆ ನಡೆದುಕೊಳ್ಳಿ. ಪ್ರೀತಿಯ ವಿಚಾರದಲ್ಲಿ ಸಣ್ಣಪುಟ್ಟ ಗೊಂದಲಗಳು ಎದುರಾಗಬಹುದು. ಸಂಗಾತಿಗೆ ಅನಿರೀಕ್ಷಿತ ಉಡುಗೊರೆ ನೀಡಿ ಸಂತಸಗೊಳಿಸುವಿರಿ ಹಾಗೂ ಉತ್ತಮ ಭೋಜನ ಪ್ರಾಪ್ತಿಯಾಗಲಿದೆ.

