Breaking News

ನೇಪಾಳ ಪ್ರವಾಹಕ್ಕೆ ಧ್ವಂಸವಾಯ್ತು ಚೀನಾ ಗಡಿಯ ಸೇತುವೆ: ಒಂದು ಕ್ಷಣದಲ್ಲಿ ಎಲ್ಲವೂ ನಾಶ

ಬೀಜಿಂಗ್: ಚೀನಾ (ಟಿಬೆಟ್) ಮತ್ತು ನೇಪಾಳ ಗಡಿಭಾಗದಲ್ಲಿ ಹಠಾತ್ ಸಂಭವಿಸಿದ ಭೀಕರ ಪ್ರವಾಹದಿಂದಾಗಿ (Flash Floods) ಜಲಪ್ರಳಯದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕುರಿತಾದ ಅತಿ ಆತಂಕಕಾರಿ ಹಾಗೂ ಭಯಾನಕ ದೃಶ್ಯಾವಳಿಗಳು ಜಾಲತಾಣಗಳಲ್ಲಿ ಸದ್ದು ಮಾಡುತ್ತಿವೆ.

ಆಗಸ್ಟ್ 26ರ ಬುಧವಾರ ಬೆಳಿಗ್ಗೆ ಟಿಬೆಟ್‌ ಭಾಗದಲ್ಲಿ ಉಂಟಾದ ಭೀಕರ ಸಸ್ಯಾಚ್ಛಾದಿತ ಮಣ್ಣುಸಸಿತ ಹಾಗೂ ಹಿಮನದಿ ಸರೋವರ ಒಡೆದ ಪರಿಣಾಮ (GLOF) ಭೋಟೆ ಕೋಶಿ ನದಿಯಲ್ಲಿ ಉಂಟಾದ ಭಾರಿ ಪ್ರವಾಹವು ಗಡಿ ಪ್ರದೇಶದ ಕಟ್ಟಡಗಳು, ರಸ್ತೆಗಳು ಹಾಗೂ ಸೇತುವೆಗಳನ್ನು ಆಪೋಷನ ತೆಗೆದುಕೊಂಡಿದೆ.

ಇಲ್ಲಿದೆ ನೋಡಿ ವಿಡಿಯೋ:

ಸಿಸಿಟಿವಿ (CCTV) ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ದೃಶ್ಯಗಳಲ್ಲಿ, ಕೆಸರು ನೀರು ಮತ್ತು ಬಂಡೆಕಲ್ಲುಗಳ ದೈತ್ಯ ಅಲೆಯೊಂದು ದಿಢೀರನೆ ಕಣಿವೆಯತ್ತ ನುಗ್ಗಿಬರುವುದು ಕಂಡುಬಂದಿದೆ.ಟಿಬೆಟ್‌ನ ಗಿರೊಂಗ್ (Gyirong) ಪ್ರದೇಶದಲ್ಲಿರುವ ಭಾರತೀಯ ಮಾನಸಸರೋವರ ಯಾತ್ರಿಕರ ಇಮಿಗ್ರೇಷನ್ ಕಚೇರಿ ಕಟ್ಟಡ ಸೇರಿದಂತೆ ಹಲವು ಕಟ್ಟಡಗಳಿಗೆ ನೀರು ರಭಸವಾಗಿ ಅಪ್ಪಳಿಸಿದ್ದು, ಜನರು ಜೀವಭಯದಿಂದ ದಿಕ್ಕಾಪಾಲಾಗಿ ಓಡುತ್ತಿರುವ ದೃಶ್ಯಾವಳಿಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಇದನ್ನೂ ಓದಿ: ನೇಪಾಳದಲ್ಲಿ ಭೀಕರ ಪ್ರವಾಹ: 105 ಭಾರತೀಯ ಪ್ರವಾಸಿಗರು ನಾಪತ್ತೆ; ರಕ್ಷಣಾ ಕಾರ್ಯಾಚರಣೆ ತೀವ್ರ

ನೇಪಾಳದ ರಸುವಾಗಧಿ (Rasuwagadhi) ಗಡಿ ಬಳಿ ನಿರ್ಮಿಸಲಾಗಿದ್ದ ‘ಫ್ರೆಂಡ್‌ಶಿಪ್ ಸೇತುವೆ’ (Friendship Bridge) ಸಂಪೂರ್ಣವಾಗಿ ನೀರಿನಲ್ಲಿ ಕೊಚ್ಚಿಹೋಗಿದೆ.ಪ್ರವಾಹದಿಂದಾಗಿ ಕನಿಷ್ಠ 31ಕ್ಕೂ ಹೆಚ್ಚು ಜನರು ಸತ್ರಿ ಸತ್ತಿರುವುದು ದೃಢಪಟ್ಟಿದ್ದು, ಮೃತರ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ.105 ಭಾರತೀಯ ಪ್ರವಾಸಿಗರು (ಮಾನಸಸರೋವರ ಯಾತ್ರಿಕರು) ಹಾಗೂ 37 ಎನ್‌ಆರ್‌ಐ (NRI) ಸೇರಿದಂತೆ ಸುಮಾರು 400 ಪ್ರವಾಸಿಗರು ಪ್ರವಾಹದ ಬಳಿಕ ನಾಪತ್ತೆಯಾಗಿದ್ದಾರೆ.ನೇಪಾಳ ಮತ್ತು ಚೀನಾವನ್ನು ಸಂಪರ್ಕಿಸುವ 42 ಕಿ.ಮೀ ಉದ್ದದ ರಸ್ತೆ ಹಾಗೂ ಹಲವು ಕಾಂಕ್ರೀಟ್ ಸೇತುವೆಗಳು ಪ್ರವಾಹದ ರಭಸಕ್ಕೆ ಕೊಚ್ಚಿಹೋಗಿವೆ.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *