Breaking News

ಸಿದ್ದಕಟ್ಟೆಯಲ್ಲಿ ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ 23ನೇ ಶಾಖೆ ಉದ್ಘಾಟನೆ

Sri Saraswathi Credit Cooperative Society’s 23rd Branch Inaugurated in Siddakatte

ಬಂಟ್ವಾಳ: ಪುತ್ತೂರಿನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿ ರಾಜ್ಯಾದ್ಯಂತ 22 ಶಾಖೆಗಳ ಮೂಲಕ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ ಪ್ರತಿಷ್ಠಿತ ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ನಿಯಮಿತ ಇದರ 23ನೇ ಶಾಖೆಯನ್ನು ಸಿದ್ದಕಟ್ಟೆಯ ಕಣಿಯೂರು ಕಾಂಪ್ಲೆಕ್ಸ್‌ನಲ್ಲಿ ಆಗಸ್ಟ್‌ 29ರಂದು ಮಾಜಿ ಸಚಿವ ಅಭಯ ಚಂದ್ರ ಜೈನ್‌ ಅವರು ಉದ್ಘಾಟಿಸಿದರು.

ರಜತಮಹೋತ್ಸವದ ಸಂಭ್ರಮದಲ್ಲಿರುವ ಸರಸ್ವತಿ ಸಹಕಾರಿಯು ಸಿದ್ದಕಟ್ಟೆ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದ ಅವರು,  ಸಹಕಾರಿಯು ಸಿದ್ದಕಟ್ಟೆಗೆ ಬಂದುದಕ್ಕೆ ಅಭಿನಂದನೆಗಳು. ಶ್ರೀ ಸರಸ್ವತಿ ಸಹಕಾರಿಯ 23ನೇ ಶಾಖೆಯನ್ನು ಉದ್ಘಾಟಿಸಲು ಸಂತೋಷಪಡುತ್ತಿದ್ದೇನೆ ಎಂದು ಹೇಳಿ, ಸಂಘದ ಅಧ್ಯಕ್ಷ ಎಸ್ ಆರ್ ಸತೀಶ್ಚಂದ್ರ ಅವರ ತಂಡಕ್ಕೆ ಅಭಿನಂದನೆಗಳನ್ನು ಅಲ್ಲಿಸಿದರು‌.

ಸಹಕಾರಿ ‌ಸಂಘದಲ್ಲಿ ಪ್ರಾಮಾಣಿಕತನ ಅತೀಮುಖ್ಯ. ಸತೀಶ್ಚಂದ್ರ ಅವರು ಪ್ರಾಮಾಣಿಕ ಸಹಕಾರಿ. ಹಾಗಾಗಿಯೇ ಅವರು ಕ್ಯಾಂಪ್ಕೋ ಸಂಸ್ಥೆಗೆ ಎರಡನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇಂತಹ ಸಹಕಾರಿಯ ನೇತೃತ್ವದಲ್ಲಿ ಸರಸ್ವತಿ ಸಹಕಾರಿಯು ಉತ್ತರೋತ್ತರ ಅಭಿವೃದ್ಧಿಯನ್ನು ಸಾಧಿಸಲಿ ಎಂದು ಶುಭಹಾರೈಸಿದರು.

ಮುಖ್ಯ ಅತಿಥಿ ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಮಾತನಾಡಿ, ಸರಸ್ವತಿ ಸಹಕಾರಿಗೆ ಸಿದ್ಧಕಟ್ಟೆಗೆ ಹಾರ್ದಿಕ ಸ್ವಾಗತ, ನಮ್ಮಿಂದಾದ ಎಲ್ಲಾ ಸಹಕಾರವನ್ನು ಮಾಡುತ್ತೇವೆ, ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ನೂರಾರು ಶಾಖೆಗಳನ್ನು ತೆರೆದು ರಾಜ್ಯದ ದೊಡ್ಡ ಸಹಕಾರಿಯಾಗಿ ಮೂಡಿ ಬರಲಿ ಎಂದು ಶುಭಹಾರೈಸಿದರು.

ವಕೀಲರು ಮತ್ತು ನೋಟರಿ ಸುರೇಶ್ ಶೆಟ್ಟಿ ಮಾತನಾಡಿ, ಸಿದ್ದಕಟ್ಟೆಯಲ್ಲಿ ಸರಸ್ವತಿ ಸಹಕಾರಿಯು ಶಾಖೆಯನ್ನು ತೆರೆದಿರುವುದು ಸಂತೋಷ ವಿಚಾರ, ಸರಸ್ವತಿ ಸಹಕಾರಿಯ ಸಿಬ್ಬಂದಿಗಳ ನಗುಮೊಗದ ಸೇವೆಯೇ ನಮ್ಮನ್ನು ಆಕರ್ಷಿಸುತ್ತದೆ, ಉತ್ತಮ ಸಹಕಾರಿಗೆ ಸರಸ್ವತಿ ಸಹಕಾರಿಯೇ ಉದಾಹರಣೆ, ಸರಸ್ವತಿ ಸಹಕಾರಿಯು ಕೇವಲ ಲಾಭ ಮಾಡುವ ಸಂಸ್ಥೆಯಲ್ಲ. ತನ್ನದೇ ಅದಂತಹ ಟ್ರಸ್ಟ್ ಸ್ಥಾಪಿಸಿ ಸೇವಾ ಕಾರ್ಯಗಳನ್ನು ಮಾಡುತ್ತಿರುವುದು ಶ್ಲಾಘನೀಯ. ಸಹಕಾರಿ ಕ್ಷೇತ್ರದ ಬಲವರ್ಧನೆಗೆ ಶ್ರೀ ಸತೀಶ್ಚಂದ್ರ ಅವರ ಕೊಡುಗೆಯು ಅಪಾರವಾದುದು. ರಜತಮಹೋತ್ಸವ ಸಂಭ್ರಮದಲ್ಲಿರುವ ಸರಸ್ವತಿ ಸಹಕಾರಿಯು ಯಶಸ್ವಿಯಾಗಿ ಮುನ್ನಡೆಯಲಿ ಎಂದು ಶುಭಹಾರೈಸಿದರು.

ಮುಖ್ಯ ಅತಿಥಿ ರಬ್ಬರ್‌ ಬೋಡ್‌ ಸದಸ್ಯ ವಸಂತ ಅಣ್ಣಳಿಕೆ ಮಾತನಾಡಿ, ಸರಸ್ವತಿ ಸಹಕಾರಿಯ ಸೇವೆಯನ್ನು ಶ್ಲಾಘಿಸಿ ಶುಭಹಾರೈಸಿದರು. ರೋಟರಿ ಕ್ಲಬ್ ಸಿದ್ದಕಟ್ಟೆ ಪಲ್ಗುಣಿ ಸ್ಥಾಪಕಾಧ್ಯಕ್ಷ  ಮೈಕಲ್ ಡಿ ಕೋಸ್ತಾ ಮಾತನಾಡಿ ಸರಸ್ವತಿ ಸಹಕಾರಿಯು ಪ್ರಾಮಾಣಿಕವಾಗಿ ಗ್ರಾಹಕರಿಗೆ ಸೇವೆಯನ್ನು ನೀಡುತ್ತಿದೆ. ರಜತಮಹೋತ್ಸವದಲ್ಲಿರುವ ಸಂಸ್ಥೆಯು ಮುಂದೆ ನೂರಾರು ಶಾಖೆಗಳನ್ನು ತೆರೆದು ಸಾವಿರಾರು ಜನರಿಗೆ ಉದ್ಯೋಗವನ್ನು ನೀಡುವಂತಾಗಲಿ ಎಂದು ಹೇಳಿ ಶುಭಹಾರೈಸಿದರು.

ಬಂಟ್ವಾಳ ಶಾಸಕ ರಾಜೇಶ್‌ ನಾೈ‌ಕ್ ಮಾತನಾಡಿ, ಸಹಕಾರಿಯ ಸೇವಾಕಾರ್ಯಗಳನ್ನು ಶ್ಲಾಘಿಸಿ ಶುಭಹಾರೈಸಿದರು.

ಶ್ರೀ ಸರಸ್ವತಿ ಸಹಕಾರಿಯ ಅಧ್ಯಕ್ಷ ಸಹಕಾರ ರತ್ನ ಎಸ್ ಆರ್ ಸತೀಶ್ಚಂದ್ರ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ 2001ರಲ್ಲಿ ಪ್ರಾರಂಭವಾದ ಸಹಕಾರಿಯು ಇಂದು 50,000 ಅಧಿಕ ಸದಸ್ಯರೊಂದಿಗೆ, 850 ಕೋಟಿ ವ್ಯವಹಾರ, 125ಕ್ಕೂ ಅಧಿಕ ಸಿಬ್ಬಂದಿಗಳನ್ನು ಹೊಂದಿದ್ದು costal to capital ಇರುವ ಸಹಕಾರಿಯು ಬೆಂಗಳೂರಿನಲ್ಲೂ ನಾಲ್ಕು ಶಾಖೆಗಳನ್ನು ಹೊಂದಿದೆ ಹಾಗೂ ಟ್ರಸ್ಟ್ ಮುಖಾಂತರ ಆರ್ಥಿಕ ಸಬಲೀಕರಣ, ಕೌಶಲ್ಯಾಭಿವೃದ್ಧಿ, ಮಹೀಳಾ ಸಬಲೀಕರಣದಂತಹ ಸೇವಾ ಕಾರ್ಯಗಳನ್ನು ಮಾಡುತ್ತಿದೆ ಎಂದರು.

ಪುತ್ತೂರಿನ ವಿವೇಕಾನಂದ ಪದವಿ ಕಾಲೇಜಿನೊಂದಿಗೆ ಒಡಂಬಡಿಕೆಯನ್ನು ಮಾಡಿಕೊಂಡು ಸಹಕಾರಿ ಕ್ಷೇತ್ರದಲ್ಲಿ ಆಧ್ಯಯನ, ಸಂಶೋಧನೆಗೆ ಒತ್ತು ನೀಡಿದೆ. ಸಾಮಾಜಿಕ ಬದ್ಧತೆಯಡಿಯಲ್ಲಿ ಆಹಾರ ಜಾಗೃತಿ ಫಲಕಗಳನ್ನು ಅಳವಡಿಸಿದೆ, ಬಟ್ಟೆ ಚೀಲಗಳನ್ನು ವಿತರಿಸುತ್ತಿದೆ.  ಸಹಕಾರಿಯು ಸಿದ್ಧಕಟ್ಟೆಯಲ್ಲಿ ಶಾಖೆಯನ್ನು  ತೆರೆದು ಕೇವಲ ಲಾಭ ಮಾಡುವ ಉದ್ದೇಶ ಮಾತ್ರ ಹೊಂದಿರದೆ ದೇಶದ ಶಿಷ್ಟಾಚಾರಕ್ಕೆ, ಅಭಿವೃದ್ಧಿಗೆ ಕೊಡುಗೆಯನ್ನು ನೀಡುವ ಬದ್ಧತೆಯನ್ನು ಹೊಂದಿದೆ ಎಂದರು.

ಸನ್ಮಾನ

ಸಮಾಜ ಸೇವಕ ಪ್ರಶಸ್ತಿ, ಅಸಾಮಾನ್ಯ ಕನ್ನಡಿಗ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಾರಾಯಣ ನಾಯಕ್‌ ಕಿನ್ನಾಜೆ ಅವರನ್ನು ಸಹಕಾರಿಯ ವತಿಯಿಂದ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಪೀಠೋಪಕರಣಗಳ ಕೆಲಸವನ್ನು ಮಾಡಿದ ನಾಗರಾಜ್ ನಾಯಕ್, ಸ್ಟ್ರಾಂಗ್‌ ರೂಮ್‌ ಕೆಲಸ ಮಾಡಿದ ಉಮೇಶ್ ಹೂಳಿ, ಇಲೆಕ್ಟ್ರಿಕಲ್ ಕೆಲಸ ಮಾಡಿದ ಪ್ರದೀಪ್ ಕುಮಾರ್ ಶೆಟ್ಟಿ ಅವರನ್ನು ಗೌರವಿಸಲಾಯಿತು.

ಸಿದ್ದಕಟ್ಟೆ ಶಾಖೆಯ ವ್ಯವಸ್ಥಾಪಕ ಪ್ರವೀಣ್ ಡಿ ನಾಯಕ್ ವಂದಿಸಿದರು. ಬಿಸಿ ರೋಡ್ ಶಾಖೆಯ ವ್ಯವಸ್ಥಾಪಕ ಪ್ರದೀಪ್ ಕುಮಾರ್ ನಿರೂಪಿಸಿದರು.  ಸಮಾರಂಭದಲ್ಲಿ ಸಹಕಾರಿಯ ಉಪಾಧ್ಯಕ್ಷ ಉಮೇಶ್ ಪ್ರಭು ಕೆ,  ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಸಂತ್ ನಾಯಕ್, ಸಹಕಾರಿಯ ನಿರ್ದೇಶಕರು, ಸಿಬ್ಬಂದಿ ವರ್ಗ, ಸದಸ್ಯರು ಹಿತೈಷಿಗಳು ಭಾಗವಹಿಸಿದ್ದರು.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *